ಕುಂದಾಪುರ: ಆಶಾ ಕಾರ್ಯಕರ್ತೆಗೆ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ
ಉಡುಪಿ: ಆಶಾ ಕಾರ್ಯಕರ್ತೆಗೆ ಜೀವಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಠಾಣೆ ಪೋಲಿಸರು ಇಂದು ಬಂಧಿಸಿದ್ದಾರೆ. ಕುಂದಾಪುರದ ಸಂದೀಪ್ ಮೇಸ್ತ ಹಾಗೂ ಮಹೇಶ್ ಖಾರ್ವಿ ಬೆದರಿಕೆ ಹಾಕಿದ ಆರೋಪಿಗಳು. ಆರೋಪಿ ಸಂದೀಪ್ ಮೇಸ್ತ ಲಾಕ್ ಡೌನ್ ಉಲ್ಲಂಘಿಸಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದನು. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಆಶಾ ಕಾರ್ಯಕರ್ತೆ ಲಕ್ಷ್ಮೀ ಆತನನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಿದ್ದರು. ಆದರೆ ಸಂದೀಪ್ ಕ್ವಾರಂಟೈನ್ ಉಲ್ಲಂಘಿಸಿ ಓಡಾಡುತ್ತಿದ್ದನು. ಹಾಗಾಗಿ ಆಶಾ ಕಾರ್ಯಕರ್ತೆ ಲಕ್ಷ್ಮೀ ಮನೆಯಲ್ಲಿಯೇ ಇರುವಂತೆ ಸಂದೀಪ್ ಗೆ […]
ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ಸೀಲ್ ಡೌನ್: ಮಂಡ್ಯ ಸೋಂಕಿತ ಓಡಾಡಿದ್ದ ಸ್ಥಳ ಪತ್ತೆ ಹಚ್ಚಿದ ಜಿಲ್ಲಾಡಳಿತ
ಉಡುಪಿ: ಮಂಡ್ಯ ಜಿಲ್ಲೆಯ ನಾಗಮಂಗಲದ ಕೊರೊನಾ ಸೋಂಕಿತ ವ್ಯಕ್ತಿ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ವೊಂದರಲ್ಲಿ ಇಳಿದು ಸ್ನಾನ ಹಾಗೂ ಉಪಹಾರ ಸೇವಿಸಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದೀಗ ಜಿಲ್ಲಾಡಳಿತ ಸೋಂಕಿತ ವ್ಯಕ್ತಿ ಓಡಾಡಿದ್ದ ಸ್ಥಳವನ್ನು ಪತ್ತೆಹಚ್ಚಿದೆ. ಸೋಂಕಿತ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿ ಇಳಿದು ಸ್ನಾನ ಮತ್ತು ತಿಂಡಿ ಸವಿದಿದ್ದನು ಎನ್ನುವುದನ್ನು ಜಿಲ್ಲಾಡಳಿತ ಪತ್ತೆ ಮಾಡಿದ್ದು, ಆ ಪೆಟ್ರೋಲ್ ಬಂಕ್ ನ್ನು ಸೀಲ್ ಡೌನ್ ಮಾಡಿದೆ. ಹಾಗೆಯೇ ಬಂಕ್ ನ ಮಾಲೀಕ ಸಹಿತ […]