ಲಾಕ್ ಡೌನ್ ಉಲ್ಲಂಘಿಸಿ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಆಡುತ್ತಿದ್ದ ಯೋಧರನ್ನು ಸರ್ಕಲ್ ಇನ್ಸ್ ಸ್ಪೆಕ್ಟರ್ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್
ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಆಟವಾಡುತ್ತಿದ್ದ ಯೋಧರನ್ನು ಉಡುಪಿ ನಗರ ಠಾಣೆಯ ಸರ್ಕಲ್ ಇನ್ಸ್ ಸ್ಪೆಕ್ಟರ್ ತರಾಟೆಗೆ ತೆಗದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಸಂದರ್ಭದ್ದು ಎನ್ನಲಾಗಿದ್ದು, ಒಂದು ತಿಂಗಳ ಬಳಿಕ ವೈರಲ್ ಆಗಿದೆ. ಹೆಲಿಪ್ಯಾಡ್ ನಲ್ಲಿ ಆಟವಾಡುತ್ತಿದ್ದ ಯೋಧರನ್ನು ಒಳಹೋಗುವಂತೆ ಇನ್ಸ್ ಸ್ಪೆಕ್ಟರ್ ಸೂಚಿಸುತ್ತಾರೆ. ಈ ವೇಳೆ ಇನ್ಸ್ ಸ್ಪೆಕ್ಟರ್ ಮತ್ತು ಯೋಧನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, […]
ತರಕಾರಿ-ದಿನಸಿ ದರ ನಿಯಂತ್ರಣಕ್ಕೆ ಗ್ರಾ.ಪಂ. ಅವಶ್ಯ ಕ್ರಮ ಕೈಗೊಳ್ಳಬೇಕು: ಕೋಟ
ಮಂಗಳೂರು: ದಿನಸಿ ಸಾಮಗ್ರಿ, ತರಕಾರಿ ಹಣ್ಣು ಹಂಪಲುಗಳ ದರ ನಿಯಂತ್ರಣಕ್ಕೆ ಗ್ರಾಮ ಪಂಚಾಯತಿಗಳು ಅವಶ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳ ಆಯ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು. ಕೆಲವೆಡೆ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಜಾಸ್ತಿ ದರ ವಿಧಿಸಿರುವ ಬಗ್ಗೆ ಸಾರ್ವಜನಿಕರ ದೂರುಗಳು ಬರುತ್ತಿವೆ. ಈ […]
ಮಂಗಳೂರು: ಟ್ಯಾಕ್ಸಿ ಚಾಲಕರಿಗೆ ಆಹಾರ ಕಿಟ್ ವಿತರಣೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಟ್ಯಾಕ್ಸಿ ಚಾಲಕರಿಗೆ ಇಂದು ಅವರ ಅಸೋಸಿಯೇಷನ್ ಮೂಲಕ ಶಾಸಕ ಕಾಮತ್ ಆಹಾರದ ಕಿಟ್ ಗಳನ್ನು ವಿತರಿಸಿದರು. ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ನೂರಾರು ಟ್ಯಾಕ್ಸಿ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದೆ ಮನೆಯಲ್ಲೇ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ಇದರ ಪ್ರಮುಖರೂ ನಮ್ಮ ಪಕ್ಷದ ಹಿರಿಯರೂ ಆಗಿರುವ ಮೋನಪ್ಪ ಭಂಡಾರಿ ಅವರ ಮೂಲಕ ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಆ ಪ್ರಕಾರ ನಮ್ಮ […]
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಕೊರೊನಾ ನೆಗೆಟಿವ್ ಯುವಕ ಅಸ್ವಸ್ಥ: ಮತ್ತೊಮ್ಮೆ ಕೋವಿಡ್ ಟೆಸ್ಟ್ ನಡೆಸುವಂತೆ ಜನರ ಆಗ್ರಹ
ಉಡುಪಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಊಟವನ್ನು ಉಡುಪಿಯಲ್ಲಿ ನಿತ್ಯವು ಸಂಘ ಸಂಸ್ಥೆಗಳು, ಸಮಾಜಸೇವಕರು ವಿತರಿಸುತ್ತಿದ್ದಾರೆ. ಸಿಟಿ ಬಸ್ಸು ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತದೆ. ಮಂಗಳವಾರ ಮಧ್ಯಾಹ್ನ ಅಲ್ಲಿಗೆ ಊಟ ಸ್ವೀಕರಿಸಲು ಬಂದಿರುವ ಅಪರಿಚಿತ ವಲಸೆ ಕಾರ್ಮಿಕ ಅಸ್ವಸ್ಥಗೊಂಡು ಬಿದ್ದ ಘಟನೆ ನಡೆದಿದೆ. ಊಟ ವಿತರಕ ಮಹಮ್ಮದ್ ಶ್ರೀಶ್ ಅವರು ತಕ್ಷಣ ಆತನಿಗೆ ಪ್ರಾಥಮಿಕವಾಗಿ ಉಪಚರಿಸಿ, ನಂತರ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ನಿತ್ಯಾನಂದ ಒಳಕಾಡು ಅವರು […]
ಕುಂದಾಪುರದ ಮೊದಲ ಮಹಿಳಾ ಶಾಸಕಿ, ಹಿರಿಯ ಕಾಂಗ್ರೆಸ್ ನಾಯಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ನಿಧನ
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ (92) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ವಿನ್ನಿಫ್ರೆಡ್ ಫೆರ್ನಾಂಡಿಸ್ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಹಾಗೆಯೇ ಕುಂದಾಪುರ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು.