ಕುಂದಾಪುರ:ನಿತ್ಯ ಬಳಕೆ ವಸ್ತುಗಳ ಕಿಟ್ ವಿತರಣೆ
ಕುಂದಾಪುರ: ಕೊರೋನಾ ಪಿಡುಗಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೆ ಒಳಗಾಗಿ ಜನ ಅತಂತ್ರರಾಗಿ ಕಂಗಾಲಾಗಿರುವ ಸಂದರ್ಭ ಆಯಾಯ ಗ್ರಾಮಗಳಲ್ಲಿ ಉದಾರ ದಾನಿಗಳಿಂದ ನಿತ್ಯ ಬಳಕೆಗೆ ಬೇಕಿರುವ ಆಹಾರ ಸಾಮಾಗ್ರಿಗಳ ಕಿಟ್ ಹಂಚಿ ಮಾನವಿಯ ಮೌಲ್ಯವನ್ನು ಎತ್ತಿಹಿಡಿದು ಕಡುಬಡವರುಗಳ ಹಸಿವು ನೀಗಿಸುವ ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ತಲ್ಲೂರು ಗ್ರಾಮ ಪಂಚಾಯತ್ ಸದಸ್ಯ, ನೀರುನೈರ್ಮಲ್ಯ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರ ಮುಖಾಂತರ ದಾನಿಗಳಾದ ಶಿರೂರಿನ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ […]
ಸುಡುಬಿಸಿಲಿಗೂ ಕುಗ್ಗದೇ ಕುಂದಾಪುರದ ಗ್ರಾಮಗ್ರಾಮಕ್ಕೆ ಹೋಗ್ತಿದ್ದಾರೆ ಆಶಾ ಕಾರ್ಯಕರ್ತೆಯರು: ಇವರ ಕಾರ್ಯವೈಖರಿಗೆ ಜನತೆಯ ಸಲಾಂ
ಕುಂದಾಪುರ: ಕಳೆದ ಒಂದು ತಿಂಗಳಿನಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ದರೆ, ಇವರು ಬೀದಿಯಲ್ಲಿದ್ದಾರೆ. ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ. ಮನೆ ಮನೆ ಹತ್ತಿಳಿಯುತ್ತಿದ್ದಾರೆ. ದಯಮಾಡಿ ಮನೆಯಿಂದ ಹೊರ ಬರಬೇಡಿ. ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಮೊರೆಯಿಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಸುಡುಬಿಸಿಲಿನಲ್ಲಿಯೂ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವೈಖರಿಯಿದು. ಕೊರೋನಾ ವಿರುದ್ಧ ಶಕ್ತಿಯುತ ಹೆಜ್ಜೆ: ಕುಂದಾಪುರ ಉಪವಿಭಾಗದ ಬೈಂದೂರು ಮತ್ತು ಕುಂದಾಪುರ ತಾಲೂಕಿನಲ್ಲಿ ಸುಮಾರು 300 ಕ್ಕೂ ಅಧಿಕ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಫೀಲ್ಡ್‍ನಲ್ಲಿದ್ದು, […]
ಕುಂದಾಪುರ: ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ಸಾಗಿಸಿದ ತಾಲೂಕಾಡಳಿತ, ಕಾರ್ಮಿಕರಿಗೀಗ ಕೊಂಚ ನಿರಾಳ
ಕುಂದಾಪುರ : ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಕಾರಣಗಳಿಂದಾಗಿ ಊರಿಗೆ ತೆರಳಲಾಗದೆ ಕುಂದಾಪುರ ಹಾಗೂ ಕೋಟೇಶ್ವರದಲ್ಲಿನ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಇದ್ದ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರನ್ನ ಶನಿವಾರ ಅವರವರ ಊರುಗಳಿಗೆ ವಾಹನಗಳಲ್ಲಿ ಕಳುಹಿಸಿ ಕೊಡಲಾಯಿತು. ಬಸ್ಸಿನಲ್ಲಿನ ಆಸನಗಳಲ್ಲಿ ತಲಾ ಒಬ್ಬರಂತೆ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತೀ ಬಸ್ ನಲ್ಲೂ ಓರ್ವ ಗ್ರಾಮಕರಣಿಕ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಗಳನ್ನು ಕಳುಹಿಸಲಾಗಿದೆ. ಊರು ತಲುಪಿದ ಬಳಿಕ ಅಲ್ಲಿನ ತಹಸೀಲ್ದಾರರಿಗೆ ಮಾಹಿತಿ ನೀಡಿ ಸಹಿ […]
ಬಿ.ಎಲ್.ಓ ಗಳ ಮೂಲಕ ಮನೆ ಮನೆ ತಪಾಸಣೆ: ಮಹೇಶ್ವರ ರಾವ್
ಉಡುಪಿ ಏ.25: ಜಿಲ್ಲೆಯಲ್ಲಿನ ಪ್ರತಿ ಮನೆಗೆ ಭೇಟಿ ನೀಡಿ, ಶೀತ ಜ್ವರ ಇರುವವರ ವಿವರಗಳನ್ನು , ಬಿ.ಎಲ್.ಓ ಗಳ ಮೂಲಕ ಸಂಗ್ರಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಪ್ರಕರಣ ಇಲ್ಲವಾಗಿದ್ದು, ಆದರೆ ಮುಂಜಾಗ್ರತೆಯಾಗಿ ಜಿಲ್ಲೆಯಾದ್ಯಂತ ಶೀತ ಜ್ವರ ಇರುವವರ ಕುರಿತು ಮನೆ ಮನೆಗಳ ವ್ಯಾಪಕ […]
ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿಯ ಆಹಾರ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ: ಜಿಲ್ಲೆಯ ಪ್ರತಿ ಬ್ಲಾಕ್ ನಲ್ಲಿ 10 ಸಾವಿರ ಕಿಟ್ ವಿತರಿಸುವ ಗುರಿ: ಯು.ಆರ್. ಸಭಾಪತಿ
ಉಡುಪಿ: ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ವತಿಯಿಂದ ವಿವಿಧ ಮಠ, ಸಂಘಟನೆ ಹಾಗೂ ದಾನಿಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಮೂಲಕ ಕೋವಿಡ್ 19 ನಿಂದಾಗಿ ಸಂಕಷ್ಟಗೀಡಾದ ಕೂಲಿ ಕಾರ್ಮಿಕರು ಹಾಗೂ ಬಡಜನರಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಚಾಲನೆ ನೀಡಲಾಯಿತು. ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಯು.ಆರ್. ಸಭಾಪತಿ ಮಾತನಾಡಿ, ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ವತಿಯಿಂದ ಜಿಲ್ಲೆಯ ಪ್ರತಿ ಬ್ಲಾಕ್ ಮಟ್ಟದಲ್ಲಿ […]