ಮಂಗಳೂರಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್: ಇನ್ನೋರ್ವ ಬಾಕಿ
ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರ ಮೂವರು ಕೊರೊನಾ ಸೋಂಕಿತರು ಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಈ ಹಿಂದೆ ಪತ್ತೆಯಾದ 12 ಮಂದಿ ಕೊರೊನ ಪೀಡಿತರಲ್ಲಿ ಎಲ್ಲರು ಡಿಸ್ಚಾರ್ಜ್ ಆಗಿದ್ದು, ಇಂದು ಪತ್ತೆಯಾದ ಓರ್ವ ಕೊರೊನಾ ಸೋಂಕಿತನಷ್ಟೇ ಬಾಕಿಯಾಗಿದ್ದಾನೆ. ಇಂದು 63 ವರ್ಷದ ವೃದ್ದ ಮಹಿಳೆ, 52 ವರ್ಷ ಹಾಗೂ 43 ವರ್ಷದ ಇಬ್ಬರು ಗಂಡಸರು ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯ ನಿಜಾಮುದ್ದೀನ್ ನಿಂದ ಆಗಮಿಸಿದ್ದ ಇಬ್ಬರು ಗಂಡಸರು, ದುಬೈನಿಂದ ಬಂದಿದ್ದ ಕಾರ್ಕಳದ ವೃದ್ಧ ಮಹಿಳೆ ಡಿಸ್ಚಾರ್ಜ್ ಆಗಿದ್ದಾರೆ. […]
ಹಿರಿಯ ನಾಗರಿಕರ ಮನೆ ಬಾಗಿಲಿಗೆ ಬರಲಿದೆ ಅಗತ್ಯ ಸಾಮಗ್ರಿ: ಉಡುಪಿ ಜಿಲ್ಲಾಡಳಿತದಿಂದ ವಿಶೇಷ ಸೇವೆ, ಕಾಲ್ ಮಾಡಿ ಸೇವೆ ಪಡೀರಿ
ಉಡುಪಿ : ಕೋವಿಡ್ -2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್ಪಿಸಿ ಸೆಕ್ಷನ್ 144(3) ರಂತೆ ನಾಗರೀಕರ ಸಂಚಾರವನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ. ಅದರಂತೆ ಜನರು ಹೊರಗಡೆ ಸಂಚಾರಿಸುವುದನ್ನು ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ನಗರ ಪ್ರದೇಶಗಳಾದ ಉಡುಪಿ ನಗರಸಭೆ, ಕುಂದಾಪುರ, ಕಾಪು ಹಾಗೂ ಕಾರ್ಕಳ ಪುರಸಭೆಗಳು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ನಾಗರಿಕರ ಪೈಕಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಕುಟುಂಬಗಳಿಗೆ ( ಯಾವುದೇ ರೀತಿಯ 60 ವರ್ಷಕ್ಕಿಂತ […]
ಉಡುಪಿ ಶ್ರೀ ಅದಮಾರು ಮಠದ ವತಿಯಿಂದ ಪ್ರಧಾನ ಮಂತ್ರಿ ಕೊರೋನಾ ಪರಿಹಾರ ನಿಧಿಗೆ 55,55,555 ರೂ. ದೇಣಿಗೆ
ಉಡುಪಿ: ಭಾರತದ ಪ್ರಧಾನ ಮಂತ್ರಿಯವರ ಕೊರೋನ ಸಂತ್ರಸ್ತರ ನಿಧಿಗೆ ಅದಮಾರು ಮಠ ಹಾಗೂ ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂ. 55,55,555. ವನ್ನು ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಗದೀಶ್,ಉಡುಪಿ ಶಾಸಕರಾದ ರಘುಪತಿ ಭಟ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಇವರ ಮೂಲಕ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಾಲ ಕಾಲಕ್ಕೆ ಮಳೆ ಬರಬೇಕು ಮಳೆಯಿಂದ ಬೆಳೆ ಬೆಳೆಯಬೇಕು. ಆದರೆ […]
ಕಂಬಳ ಕ್ಷೇತ್ರದ ಸಾಧಕ ರೆಂಜಾಳ ಪಂಜಾಳ ಸತೀಶ್ ಶೆಟ್ಟಿ ನಿಧನ
ಕಾರ್ಕಳ: ಕಂಬಳ ಕ್ಷೇತ್ರದ ಸಾಧಕ ಕಾರ್ಕಳ ತಾಲೂಕಿನ ರೆಂಜಾಳ ಪಂಜಾಳದ ಸತೀಶ್ ಶೆಟ್ಟಿ (62) ಅವರು ಶುಕ್ರವಾರ (ಎ.17) ನಿಧನ ಹೊಂದಿದರು. 1980ರಿಂದ 1990ರ ವರಗೆ ಕಂಬಳ ಓಟಗಾರರಾಗಿ, 1996ರಿಂದ 2010ರ ವರೆಗೆ ಕೋಣಗಳನ್ನು ಗಂತಿನಲ್ಲಿ ಬಿಡಿಸುವ ಪ್ರಸಿದ್ದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದ ಅವರು ಪಂಚಾಯತ್ ಸದಸ್ಯರೂ ಆಗಿದ್ದರು. ಸತೀಶ್ ಶೆಟ್ಟಿ ಅವರು ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಕೆಎಂಸಿಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ ಏ.17: ಮಣಿಪಾಲದ ಕೆಎಂಸಿ ಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ತೆರೆಯುವ ಬಗ್ಗೆ ಕೇಂದ್ರದ ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಿಸುವುದರಿಂದ ತ್ವರಿತವಾಗಿ, ಕೋವಿಡ್ ಪರೀಕ್ಷಾ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ ಅಲ್ಲದೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆ ನಡೆಸಲು ಸಾಧ್ಯವಾಗಲಿದೆ, ಈ ಬಗ್ಗೆ […]