udupixpress
Home Trending ಮಂಗಳೂರಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್: ಇನ್ನೋರ್ವ ಬಾಕಿ

ಮಂಗಳೂರಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್: ಇನ್ನೋರ್ವ ಬಾಕಿ

ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರ ಮೂವರು ಕೊರೊನಾ ಸೋಂಕಿತರು ಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಆ ಮೂಲಕ ಈ ಹಿಂದೆ ಪತ್ತೆಯಾದ 12 ಮಂದಿ ಕೊರೊನ ಪೀಡಿತರಲ್ಲಿ ಎಲ್ಲರು ಡಿಸ್ಚಾರ್ಜ್ ಆಗಿದ್ದು, ಇಂದು ಪತ್ತೆಯಾದ ಓರ್ವ ಕೊರೊನಾ ಸೋಂಕಿತನಷ್ಟೇ ಬಾಕಿಯಾಗಿದ್ದಾನೆ.
ಇಂದು 63 ವರ್ಷದ ವೃದ್ದ ಮಹಿಳೆ, 52 ವರ್ಷ ಹಾಗೂ 43 ವರ್ಷದ ಇಬ್ಬರು ಗಂಡಸರು ಡಿಸ್ಚಾರ್ಜ್ ಆಗಿದ್ದಾರೆ.
ದೆಹಲಿಯ ನಿಜಾಮುದ್ದೀನ್ ನಿಂದ ಆಗಮಿಸಿದ್ದ ಇಬ್ಬರು ಗಂಡಸರು, ದುಬೈನಿಂದ ಬಂದಿದ್ದ ಕಾರ್ಕಳದ ವೃದ್ಧ ಮಹಿಳೆ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಗಂಡಸರು ತೊಕ್ಕೊಟ್ಟು ಮತ್ತು ಬಂಟ್ವಾಳ ಮೂಲದವರು.
ದ.ಕ ಜಿಲ್ಲೆಯ 13 ಪ್ರಕರಣಗಳಲ್ಲಿ ಈವರೆಗೆ  12 ಮಂದಿ ಡಿಸ್ಚಾರ್ಜ್, ಉಳಿದ ಓರ್ವ ರೋಗಿಗೆ ಚಿಕಿತ್ಸೆ ಮುಂದುವರಿದಿದೆ.
error: Content is protected !!