ಮಂಗಳೂರು: ಆಶಾ ಕಾರ್ಯಕರ್ತೆಗೆ ಕರ್ತವ್ಯಕ್ಕೆ ಅಡ್ಡಿ; ಇಬ್ಬರು ಎಸ್ ಡಿಪಿಐ ಕಾರ್ಯಕರ್ತರ ಬಂಧನ

ಮಂಗಳೂರು: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೆ ಮನೆ ಭೇಟಿಯಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಎಸ್‌ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು  ಬಂಧಿಸಿದ್ದಾರೆ. ಮಲ್ಲೂರು ಬದ್ರಿಯಾ ನಗರ ನಿವಾಸಿಗಳಾದ ಇಸ್ಮಾಯಿಲ್‌ ಮತ್ತು ಅಶ್ರಫ್‌ ಬಂಧಿತರು. ವಸಂತಿ ಎಂಬ ಆಶಾ ಕಾರ್ಯಕರ್ತೆ ಮನೆ ಭೇಟಿಗೆ ತೆರಳಿದ್ದ ವೇಳೆ ಇಬ್ಬರೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಕರ್ತವ್ಯ ನಿರ್ವಹಿಸದಂತೆ ತಡೆದಿದ್ದ ಆರೋಪಿಗಳು, ಆಶಾ ಕಾರ್ಯಕರ್ತೆಗೆ ಬೆದರಿಕೆಯನ್ನೂ ಹಾಕಿದ್ದರು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ […]

ಕುಂದಾಪುರ ಶನಿವಾರ ಸಂತೆಗೆ ಮುಗಿಬಿದ್ದ ಜನತೆ, ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು

ಕುಂದಾಪುರ: ಗ್ರಾಮೀಣ ಭಾಗದ ಅಂಗಡಿಗಳಲ್ಲಿ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳಿಗೆ ಕೊರತೆಯಾಗಬಾರದೆಂಬ ದಿಸೆಯಲ್ಲಿ ಕೇವಲ ಅಂಗಡಿ ವ್ಯಾಪಾರಸ್ಥರಿಗೆ ಮಾತ್ರ ಆಹಾರ ಸಾಮಾಗ್ರಿ ಖರೀದಿಸಲು ಅವಕಾಶ ಕಲ್ಪಿಸಿದ್ದ ಶನಿವಾರದ ಕುಂದಾಪುರದ ಸಂತೆಯಲ್ಲಿ ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಲಾಕ್‌ಡೌನ್ ಆದೇಶ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇವಲ ಹೋಲ್‌ಸೇಲ್ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಎಪಿಎಂಸಿ ಆವರಣದ ಮೂರು ಗೇಟ್‌ಗಳನ್ನು ಬಂದ್ ಮಾಡಿ ಮೂರು ಪ್ರವೇಶ […]

ಕೋಟೇಶ್ವರ: ಎಲ್ಲೆಲ್ಲೂ ಜನದಟ್ಟಣೆ, ವಾಹನ ತಪಾಸಣೆ: ಬೈಕ್ ವಶ:

ಕುಂದಾಪುರ: ಅತೀಹೆಚ್ಚು ಹೋಲ್‌ಸೇಲ್ ಅಂಗಡಿಗಳನ್ನು ಹೊಂದಿರುವ ಇಲ್ಲಿನ ಕೋಟೇಶ್ವರ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ದಿನಸಿ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಯಾವುದೇ ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾರ್ವಜನಿಕರೆಲ್ಲರೂ ದಿನಸಿ ಖರೀದಿಗೆ ಗುಂಪುಗುಂಪಾಗಿ ಜಮಾಯಿಸಿದ್ದು, ಪೊಲೀಸರ ಆಗಮನದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು.ಸಾಮಾಜಿ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡದ ಅಂಗಡಿ ಮಾಲೀಕರಿಗೆ ಪಿಎಸ್‌ಐ ಹರೀಶ್ ಆರ್ ನಾಯ್ಕ್ ಖಡಕ್ ಎಚ್ಚರಿಕೆ ನೀಡಿದರು. ಸಾಕಷ್ಟು ಜನದಟ್ಟಣೆಯಿಂದ ಕೂಡಿದ ಕೋಟೇಶ್ವರ ಪೇಟೆ ೧೧ ಗಂಟೆಯ ಬಳಿಕ ಖಾಲಿ-ಖಾಲಿಯಾಯಿತು. […]

ಏ.30 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ : ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯಲಿದೆಯೇ ಎನ್ನುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ಮಾಹಿತಿ ನೀಡಿದ್ದು  ಲಾಕ್ ಎಪ್ಪಿಲ್ ತಿಂಗಳ ಅಂತ್ಯದವರೆಗೆ ಮುಂದುವರೆಯಲಿದೆ ಎಂದಿದ್ದಾರೆ. ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಸಿ.ಎಂ ಮಾಹಿತಿ ನೀಡಿದ್ದಾರೆ. ಪ್ರಧಾನಿ ಅವರು ಆರ್ಥಿಕ ಚಟುವಟಿಕೆಗಳಿಗೆ ವಿನಾಯ್ತಿ ನೀಡಿ ಲಾಕ್ ಡೌನ್ ಮುಂದುವರೆಸುದಕ್ಕೆ ಆದೇಶ ನೀಡಿದ್ದಾರೆ.ಲಾಕ್ ಡೌನ್ ವಿಭಿನ್ನವಾಗಿರಲಿದೆ.ಈ ಕುರಿತು ಹೆಚ್ಚಿನ ಮಾಹಿತಿಯನ್ನು ಒಂದೆರಡು ದಿನದಲ್ಲಿ ನೀಡುತ್ತೇವೆ ಎಂದಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ […]

ಕೊರೊನ ಲಾಕ್ ಡೌನ್: ಧರ್ಮಸ್ಥಳ ವಿಷು ಮಾಸದ ಜಾತ್ರೆ ರದ್ದು: ಡಾ.ಡಿ.ವೀರೇಂದ್ರ ಹೆಗ್ಗಡೆ

ಮಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ವಾರ್ಷಿಕ ವಿಷು ಮಾಸದ ಜಾತ್ರೆ ರದ್ದು ಮಾಡಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದೇವರ ಪ್ರಶ್ನೆ ಮೂಲಕ ನೋಡಿ, ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ-ಕೋಲಗಳು, ಐದು ದಿನಗಳ ಕಾಲ ನಡೆಯಬೇಕಿದ್ದ ಮಂಜುನಾಥ ಸ್ವಾಮಿಯ ರಥೋತ್ಸವ, ಕಟ್ಟೆ ವಿಹಾರ, ಅವಭೃತ ವಿಹಾರವೂ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಸೂಚನೆಯವರೆಗೂ ಭಕ್ತರ ಪ್ರವೇಶ, ದರ್ಶನವೂ ರದ್ದು ಮಾಡಲಾಗಿದ್ದು, ಈ ಬಗ್ಗೆ ಭಕ್ತರು […]