ಉಡುಪಿಯ ಮೊದಲ ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್: 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವೈರಸ್ (ಕೋವಿಡ್-19) ತುತ್ತಾದ ಮಣಿಪಾಲದ 34ರ ಹರೆಯದ ಯುವಕ ಸಂಪೂರ್ಣ ಗುಣಮುಖನಾಗಿದ್ದು, ಆತನನ್ನು ಇಂದು ರಾತ್ರಿ 9.10 ಸುಮಾರಿಗೆ ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಹೇಳಿದ್ದಾರೆ. ಸೋಮವಾರ ಮತ್ತು ಬುಧವಾರ ಎರಡು ಬಾರಿ ಈತನ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಎರಡು ಮಾದರಿಗಳಲ್ಲಿ ನೆಗೆಟಿವ್ ಬಂದಿದ್ದು,  ಇದೀಗ ಆತ ಸೋಂಕಿನಿಂದ […]

ಎಪ್ರಿಲ್ 12 ರಿಂದ ಸಾಂಪ್ರದಾಯಿಕ ಹಾಗೂ ನಾಡ ದೋಣಿಗಳಿಗೆ ಮೀನುಗಾರಿಕೆಗೆ ಅವಕಾಶ:  ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕೇಂದ್ರ ಸರ್ಕಾರದ ಸೂಚನೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕರಾವಳಿಯ ಎಲ್ಲಾ ಸಾಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರಿಕೆಗೆ ಎಪ್ರಿಲ್ 12ರಿಂದ ಜಾರಿಗೆ ಬರುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 14 ಸಾವಿರ ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿದ್ದು, ಅವುಗಳೆಲ್ಲ ಮೀನುಗಾರಿಕೆಗೆ ತೊಡಗಿಸಿಕೊಳ್ಳಲಿದೆ. ಕರೋನ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನು ಮಾರಾಟ ಮಾಡಬೇಕೆಂದು ವಿನಂತಿಸಿದ್ದಾರೆ.

ಉಡುಪಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ- ಏ.15 ರಂದು ನೇರ ಸಂದರ್ಶನ

ಉಡುಪಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉಡುಪಿ ಜಿಲ್ಲೆಯ, ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಖಾಲಿಯಾಗಿರುವ ಡೇಟಾ ಮೆನೇಜರ್ ಹುದ್ದೆಗೆ,ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಏಪ್ರಿಲ್ 15 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಅಜ್ಜರಕಾಡು ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಪೋಸ್ಟ್ ಗ್ರಾಜುಯೇಟ್ ಇನ್ ಕಂಪ್ಯೂಟರ್ ಸೈನ್ಸ್ ಜೊತೆಗೆ ಒಂದು ವರ್ಷದ ಅನುಭವ ಅಥವಾ ಬಿ.ಎ ಇನ್ ಐಟಿ/ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಹೊಂದಿರುವ  40 ವರ್ಷ ವಯೋಮಿತಿಯೊಳಗಿನ ಅರ್ಹ ಅಭ್ಯರ್ಥಿಗಳು ಸ್ವ […]

ಲಾಕ್ ಡೌನ್ ಆದೇಶ ಉಲ್ಲಂಘಿಸಿ ತಿರುಗುವವರ ಮೇಲೆ‌ ಡ್ರೋನ್‌ ಹದ್ದಿನ ಕಣ್ಣು; ದ.ಕ ಪೊಲೀಸರ ಕ್ಯಾಮರಾ ಕಣ್ಣಿಗೆ ಸಿಕ್ಕಿಬೀಳ್ತಿರಾ ಹುಷಾರ್ !

ಮಂಗಳೂರು: ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೊಲೀಸರು ಹದ್ದಿನ ಕಣ್ಣು ಹಾಯಿಸಿದ್ದಾರೆ. ವಿಟ್ಲ, ಬಂಟ್ವಾಳ, ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮರಾ ಮೂಲಕ ಅನಗತ್ಯ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಲಾಕ್ ಡೌನ್ ಉಲ್ಲಂಘಿಸಿದವರ ಪತ್ತೆಗೆ ಇಲ್ಲಿ ಡ್ರೋನ್ ಕ್ಯಾಮಾರ ಬಳಸಲಾಗುತ್ತಿದೆ. ಈ ಠಾಣಾ ವ್ಯಾಪ್ತಿಯ ಗಲ್ಲಿಗಲ್ಲಿಗಳಲ್ಲೂ ಡ್ರೋನ್ ಕ್ಯಾಮೆರಾದ ಮೂಲಕ ಕಣ್ಗಾವಲು ಇರಿಸಲಾಗಿದೆ. ಮೈದಾನ, ಗದ್ಡೆ ಸೇರಿ ಹಲವೆಡೆ ಕ್ರಿಕೆಟ್ ಆಡುವವರ, ಗುಂಪು ಸೇರುವವರ […]

ಬಂಟ್ವಾಳ: ಕೋವಿಡ್ 19 ಸೋಂಕಿತ 10 ತಿಂಗಳ ಮಗು ಸಂಪೂರ್ಣ ಗುಣಮುಖ; ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಂಗಳೂರು: ಕೋವಿಡ್19 ಪಾಸಿಟಿವ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖವಾಗಿ ಶನಿವಾರ ಆಸ್ಪತ್ರೆ ಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದೆ. ‌ ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ. ಇವರೂ ಕೂಡಾ ಇಂದು ಡಿಸ್ಚಾಜ್೯ ಆಗಿದ್ದಾರೆ. ಇದುವರೆಗೆ ದ.ಕ. ಜಿಲ್ಲೆಯ 12 ಕರೋನಾ‌ ಪಾಸಿಟಿವ್ ಪ್ರಕರಣಗಳಲ್ಲಿ 6 ಮಂದಿ ಗುಣಮುಖರಾಗಿ, ಬಿಡುಗಡೆಗೊಂಡಿದ್ದಾರೆ. ಈ ವಾರ ಪೂರ್ತಿ ಅಂದರೆ ಏಪ್ರಿಲ್ 5 ರಿಂದ 11 […]