udupixpress
Home Trending ಕೊರೊನ ಲಾಕ್ ಡೌನ್: ಧರ್ಮಸ್ಥಳ ವಿಷು ಮಾಸದ ಜಾತ್ರೆ ರದ್ದು: ಡಾ.ಡಿ.ವೀರೇಂದ್ರ ಹೆಗ್ಗಡೆ

ಕೊರೊನ ಲಾಕ್ ಡೌನ್: ಧರ್ಮಸ್ಥಳ ವಿಷು ಮಾಸದ ಜಾತ್ರೆ ರದ್ದು: ಡಾ.ಡಿ.ವೀರೇಂದ್ರ ಹೆಗ್ಗಡೆ

ಮಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ವಾರ್ಷಿಕ ವಿಷು ಮಾಸದ ಜಾತ್ರೆ ರದ್ದು ಮಾಡಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೇವರ ಪ್ರಶ್ನೆ ಮೂಲಕ ನೋಡಿ, ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ-ಕೋಲಗಳು, ಐದು ದಿನಗಳ ಕಾಲ ನಡೆಯಬೇಕಿದ್ದ ಮಂಜುನಾಥ ಸ್ವಾಮಿಯ ರಥೋತ್ಸವ, ಕಟ್ಟೆ ವಿಹಾರ, ಅವಭೃತ ವಿಹಾರವೂ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ಸೂಚನೆಯವರೆಗೂ ಭಕ್ತರ ಪ್ರವೇಶ, ದರ್ಶನವೂ ರದ್ದು ಮಾಡಲಾಗಿದ್ದು, ಈ ಬಗ್ಗೆ ಭಕ್ತರು ಯಾರು ಸಂಕೋಚ ಪಡಬೇಕಾಗಿಲ್ಲ. ದೈವ ದೇವರುಗಳು ಈ ರೀತಿಯ ಪರಿವರ್ತನೆಗೆ ಒಪ್ಪಿದ್ದಾರೆ, ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹಿಸಿದ್ದಾರೆ ಅಂತ ತಿಳಿಸಿದ್ದಾರೆ.
ಇನ್ನೂ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಕರೊನಾ ಸೋಂಕು ಮುಕ್ತಿಗಾಗಿ ಪ್ರಾರ್ಥನೆ ಮಾಡಿ‌ ಮುಂದಿನ ದಿನಗಳ ಸುಭೀಕ್ಷೆಗಾಗಿ ಸರ್ಕಾರದ ಆದೇಶವನ್ನು ಪರಿಪಾಲಿಸಿ ಎಂದು ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ.
error: Content is protected !!