ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರ ನೀಡಿ: ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

ಬೆಂಗಳೂರು:ಕೊರೋನಾ ಲಾಕ್ ಡೌಟ್ ಜೊತೆ ಜೊತೆಗೆ ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆಯೂ ಹೆಚ್ಚಿದೆ.ಪ್ರಾಣಿ-ಪಕ್ಷಿಗಳು ಈ ಸಂದರ್ಭದಲ್ಲಿ ಮನುಷ್ಯರಿಗಿಂತಲೂ ಜಾಸ್ತಿ ಒದ್ದಾಡುತ್ತದೆ.ನೀರು ಸಿಗದೇ ಬೇಸಗೆಯಲ್ಲಿ ಬಳಲಿ ಬೆಂಡಾಗುತ್ತದೆ. ಆದರೆ ಇದೀಗ ರಾಜ್ಯದಲ್ಲಿ ಲೋಕ್ ಡೌನ್ ಜಾರಿಯಲ್ಲಿರುದರಿಂದ  ಪ್ರಾಣಿಗಳಿಗೆ, ಬೀದಿನಾಯಿಗಳಿಗೆ ಆಹಾರ ಸಿಗುತ್ತಿಲ್ಲ  ಈ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳಿಗೆ ನಿಮ್ಮ ಕೈಲಾಗುವಷ್ಟು ಆಹಾರ ನೀರು ನೀಡಿ ಅವುಗಳ ದಾಹ, ಹಸಿವು ನೀಗಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಟ್ವೀಟರ್ ಖಾತೆಯಲ್ಲಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.”ಬಿಸಿಲು ಮತ್ತು ಲಾಕ್ ಡೌನ್ ಪರಿಣಾಮ ಪಕ್ಷಿ-ಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲ.ನೀರಿನ ಕೊರತೆಯೂ ಇದೆ. ದಯವಿಟ್ಟು ಎಲ್ಲರೂ ಸಾಧ್ಯವಾದಷ್ಟು ಈ ಪ್ರಾಣಿಗಳಿಗೆ ನೀರು ಆಹಾರ ಕೊಡೋಣ ಎಂದವರು ಹೇಳಿದ್ದಾರೆ.