ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತೂಕ ಮತ್ತು ಅಳತೆ ಅಧಿಕಾರಿಗಳಿಂದ ದಿಡೀರ್ ತಪಾಸಣೆ: 3 ಮೊಕದ್ದಮೆ ದಾಖಲು
ಉಡುಪಿ ಏ.3: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆ ಮೇರೆಗೆ, ಉಡುಪಿ ನಗರದಲ್ಲಿನ ತರಕಾರಿ ಮಾರುಕಟ್ಟೆಯ ಅಂಗಡಿಗಳು, ಕೋಳಿ ಮತ್ತು ಕುರಿ ಮಾಂಸದ ಅಂಗಡಿ ಮತ್ತು ದಿನಸಿ ಅಂಗಡಿಗಳಿಗೆ ಶುಕ್ರವಾರ ದಿಡೀರ್ ಭೇಟಿ ನೀಡಿದ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ಕಡಿಮೆ ತೂಕ ನೀಡುತ್ತಿದ್ದವರ ಮೇಲೆ ಎರಡು ಮೊಕದ್ದಮೆ ಹಾಗೂ ದಿನಸಿ ಅಂಗಡಿಗಳ ತಪಾಸಣೆ ಮಾಡಿ ಎಂ.ಆರ್.ಪಿ ದರದ ಬಗ್ಗೆ ಒಂದು ಮೊಕದ್ದಮೆ ದಾಖಲಿಸಿ , ಒಟ್ಟು 3 ಪ್ರಕರಣಗಳಲ್ಲಿ 8000 ರೂ ದಂಡ ವಸೂಲಿ ಮಾಡಿದ್ದಾರೆ. […]
ತೆಂಕನಿಡಿಯೂರು: ಸಮಸ್ಯೆಗೊಳಗಾದರಿಗೆ ಸ್ಪಂದಿಸಲು ಗ್ರಾಮೀಣ ಕಾಂಗ್ರೆಸ್ ಕಾರ್ಯ ಪಡೆ
ಉಡುಪಿ: ಕೊರೊನಾ ಕಾರಣದಿಂದ ಲಾಕ್ ಡೌನ್ ಆಗಿ ಸಮಸ್ಯೆಗೊಳಗಾದರಿಗೆ ಸ್ಪಂದಿಸಲು ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್‌ನ ಎಲ್ಲಾ ವಾಡ್೯ನ ಕಾರ್ಯಪಡೆ ಈಗಾಗಲೇ ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದು, ಏನಾದರೂ ಸಹಾಯದ ಅಗತ್ಯವಿದ್ದಲ್ಲಿ ಈ ಕೆಳಕಂಡ ಯಾವುದೇ ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ ಪ್ರಖ್ಯಾತ್ ಶೆಟ್ಟಿ, ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಉಡುಪಿ – 9980021002 ಯತೀಶ್ ಕರ್ಕೆರ, ಅಧ್ಯಕ್ಷರು ಉಡುಪಿ ಜಿಲ್ಲಾ ಹಿಂದುಳಿದ ವರ್ಗ – 9901866998 ಗೋಪಾಲ್ ಕೃಷ್ಣ ಶೆಟ್ಟಿ, ಮಾಜಿ […]
ಹುಷಾರ್! ಗುಟ್ಕಾ ಜಗಿದು ಉಗುಳುದರಿಂದ ಕೊರೋನ ಹರಡಬಹುದು !
ದೇಶದಾದ್ಯಂತ ಕೊರೊನ ಲಾಕ್ ಡೌನ್ ಆಗಿ ಹನ್ನೊಂದು ದಿನಗಳು ಕಳೆದಿದ್ದರೂ, ಕರೋನ ಭೀಕರ ವಾಗಿ ಉಲ್ಬಣಿಸುತ್ತಲೇ ಇದೆ. ಏನೇ ಲೌಕ್ ಡೌನ್ ಆಗಲಿ ಗುಟ್ಕಾ ಜಗಿದು ಉಗುಳುವ ಅಭ್ಯಾಸವಿರುವವರು ಉಗುಳುತ್ತಲೇ ಇದ್ದಾರೆ. ತಂಬಾಕು ಅಥವಾ ಗುಟ್ಕಾ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕ್ಯಾನ್ಸರ್ ಬರುತ್ತದೆ ಎಂದು ಪ್ಯಾಕೆಟ್ಟಿನ ಮೇಲೆಯೇ ರೋಗಗ್ರಸ್ತ ಮುಖದ ಫೋಟೋ ಮುದ್ರಿಸಿದ್ದರೂ ಮಾರಾಟ ಭರ್ಜರಿಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕರೊನ ಸೋಂಕಿತ ವ್ಯಕ್ತಿ ತಂಬಾಕು ಉತ್ಪನ್ನಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಎಲ್ಲೆಂದರಲ್ಲಿ ಬಸ್ಟ್ಯಾಂಡ್ […]
ನಿರಾಶ್ರಿತರು, ನಿರ್ಗತಿಕರಿಗೆ ಕೆ.ಎಂ.ಎಫ್ ವತಿಯಿಂದ 5000 ಲೀ ಉಚಿತ ಹಾಲು ವಿತರಣೆ
ಉಡುಪಿ ಏ.3: ಕೊರೋನಾ ನಿಯಂತ್ರಣ ಕ್ರಮಗಳಿಂದ ತೊಂದರೆಗೊಳಗಾದ ಉಡುಪಿ ಜಿಲ್ಲೆಯಲ್ಲಿನ ನಿರಾಶ್ರಿತರು, ನಿರ್ಗತಿಕರು , ಕೂಲಿ ಕಾರ್ಮಿಕರು, ಮತ್ತು ಬಡ ಜನತೆಗೆ ಕೆ.ಎಂ.ಎಫ್ ವತಿಯಿಂದ ಪ್ರತಿನಿತ್ಯ 5000 ಲೀ ಹಾಲು ನ್ನು ಏಪ್ರಿಲ್ 3 ರಿಂದ 14 ರ ವರೆಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ , ಶುಕ್ರವಾರ ಉಡುಪಿ ನಗರಸಭೆ ಆವರಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ, ದ.ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹಗ್ಡೆ , ರಾಜ್ಯ ಸರ್ಕಾರದ ಸೂಚನೆಯಂತೆ , ಉಡುಪಿ ಜಿಲ್ಲೆಯಲ್ಲಿ […]
ಕೊರೊನ ವಿರುದ್ಧ ಒಗ್ಗಟ್ಟಿನ ಹೋರಾಟ: ಏ 5ರಂದು 9 ನಿಮಿಷ ಮೊಂಬತ್ತಿ ಉರಿಸಲು ಪ್ರಧಾನಿ ಕರೆ
ನವದೆಹಲಿ: ಇದೇ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ನಿಮ್ಮ ಅಮೂಲ್ಯ ಸಮಯವಾಗಿದ್ದು, ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್ ಆರಿಸಿ, ಮೊಬೈಲ್ ಟಾರ್ಚ್ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು ಎಂದು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಿಂತು ದೀಪ, ಮೇಣದಬತ್ತಿ, ಟಾರ್ಚ್, ಮೊಬೈಲ್ ಫ್ಲಾಶ್ ಹಿಡಿದು ಭಾರತ ಮಾತೆಯನ್ನು ನೆನೆಯಿರಿ. ಯಾರೂ ಸಹ […]