ಗಂಗೊಳ್ಳಿ: ಜಮಾತುಲ್ ಮುಸ್ಲಿಮಿನ್ ಕಮಿಟಿ ವತಿಯಿಂದ ದಿನಬಳಕೆ ಸಾಮಾಗ್ರಿಗಳ ಕಿಟ್ ವಿತರಣೆ

ಗಂಗೊಳ್ಳಿ : ಗಂಗೊಳ್ಳಿಯ ಜಮಾತುಲ್ ಮುಸ್ಲಿಮಿನ್ ಕಮಿಟಿ ವತಿಯಿಂದ ಗಂಗೊಳ್ಳಿ ಗ್ರಾಮದಲ್ಲಿ ಸುಮಾರು ೬೦೦ ಮನೆಗಳಿಗೆ ದಿನಬಳಕೆ ಸಾಮಾಗ್ರಿಗಳ ಕಿಟ್ ಒದಗಿಸಲಾಯಿತು. ಕಮಿಟಿ ಅಧ್ಯಕ್ಷ ಪಿ.ಎಂ.ಹಸೈನಾರ್ ನೇತೃತ್ವದ ತಂಡ ಗಂಗೊಳ್ಳಿ ಗ್ರಾಮದಲ್ಲಿ ಜಾತಿ, ಮತ ಬೇಧವಿಲ್ಲದೆ ಸುಮಾರು ೬೦೦ ಮನೆಗಳಿಗೆ ದಿನ ಬಳಕೆಯ ೧೩ ವಸ್ತುಗಳನ್ನೊಳಗೊಂಡ ಕಿಟ್‌ನ್ನು ಶುಕ್ರವಾರ ವಿತರಿಸಿದರು. ಕೊರೊನಾ ತಡೆಯುವ ದೃಷ್ಟಿಯಿಂದ ಸರಕಾರ ಲಾಕ್ ಡೌನ್ ಆದೇಶ ಮಾಡಿರುವುದರಿಂದ ಅನೇಕ ಕುಟುಂಬಗಳು ದೈನಂದಿನ ವಸ್ತುಗಳನ್ನು ಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಇಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ […]

ಪ್ರಾಣಿ-ಪಕ್ಷಿಗಳಿಗೆ ಹೊಟ್ಟೆ ತುಂಬಾ ಆಹಾರ: ಜಾನುವಾರುಗಳಿಗೆ ಗಂಗೊಳ್ಳಿಯ ನಿನಾದ ಸಂಸ್ಥೆ ಆಧಾರ

ಗಂಗೊಳ್ಳಿ : ಲಾಕ್ ಡೌನ್ ಹಿನ್ನಲೆಯಲ್ಲಿ ಜನರು ದಿನಿತ್ಯ ಕಷ್ಟಪಡುತ್ತಿರುವ ಇಂದಿನ ದಿನಗಳಲ್ಲಿ ಜಾನುವಾರುಗಳು ಹಾಗೂ ನಾಯಿಗಳು ನೀರು, ಆಹಾರವಿಲ್ಲದೆ ನರಳಬಾರದು ಎಂಬ ಸದುದ್ದೇಶದಿಂದ ಗಂಗೊಳ್ಳಿಯ ನಿನಾದ ಸಂಸ್ಥೆ ಕಾರ್ಯಪ್ರವೃತವಾಗಿದೆ. ಸಂಸ್ಥೆಯ ಸದಸ್ಯರು ತಮ್ಮದೇ ವಾಹನದಲ್ಲಿ ನೀರು ಮತ್ತು ಆಹಾರದೊಂದಿಗೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ವಿವಿಧೆಡೆ ರಸ್ತೆ ಬದಿಗಳಲ್ಲಿ ನಿಂತಿಕೊಂಡಿರುವ ಜಾನುವಾರುಗಳು ಮತ್ತು ನಾಯಿಗಳು ಹಾಗೂ ಇನ್ನಿತರ ಪ್ರಾಣಿಪಕ್ಷಿಗಳಿಗೆ ನೀರು, ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಮೂಕಪ್ರಾಣಿಗಳು ಲಾಕ್ ಡೌನ್‌ನಿಂದ ಆಹಾರ, ನೀರು ಸಿಗದೆ […]

ಗಂಗೊಳ್ಳಿ: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ:ಸ್ಥಳೀಯರಿಗೆ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರ ಸೂಚನೆ

ಗಂಗೊಳ್ಳಿ : ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಗಂಗೊಳ್ಳಿಯ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು. ಬೇರೆ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ ಜನರ ಮಾಹಿತಿ ಪಡೆದುಕೊಂಡ ಸಮಿತಿ ಸದಸ್ಯರು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ನೀಡುತ್ತಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ವಾರಂಟೈನ್‌ನಲ್ಲಿರುವವರು ಯಾವುದೇ ಕಾರಣಕ್ಕೂ ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸಬಾರದು. ೧೪ ದಿನಗಳ ಕಾಲ ಮನೆಯಲ್ಲೇ ಇದ್ದು ಸಹಕಾರ ನೀಡಬೇಕು ಎಂದು […]

ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ: ವಿಶೇಷ ಪಡಿತರ ವಿತರಣೆ

ಕುಂದಾಪುರ:  ತಾಲೂಕು ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಪಡಿತರ ಚೀಟಿದಾರರಿಗೆ ವಿಶೇಷ ಪಡಿತರವನ್ನು ಸರಕಾರ ಆದೇಶದಂತೆ ವಿತರಿಸಲಾಯಿತು.

ಸುಳ್ಯ: ಕೊರೊನ ‌ಮುನ್ನೆಚ್ಚರಿಕೆ ವಾಹನ‌ ತಪ್ಪಾಸಣೆ ವೇಳೆ ಪೊಲೀಸರಿಗೆ ಹಲ್ಲೆ: ಓರ್ವ ಬಂಧನ

ಮಂಗಳೂರು: ಕೊರೋನಾ ಮುನ್ನೆಚ್ಚರಿಕೆ ಸಲುವಾಗಿ ವಾಹನಗಳ ತಪಾಸಣೆ ಮಾಡುತ್ತಿದ್ದ ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಮಾಡಿ, ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ, ನಂತರ ಮಾನಸಿಕ ಅಸ್ವಸ್ಥನಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೆಪ್ಪರೆಯ ಸಿನಾನ್ ಬಂಧಿತ ಆರೋಪಿ‌ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮ ನಾಯ್ಕ ಜನರ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿನಾನ್ ಎಂಬ ಯುವಕ ಮುರೂರು ಗಡಿಭಾಗಕ್ಕೆ […]