udupixpress
Home Trending ಹುಷಾರ್! ಗುಟ್ಕಾ ಜಗಿದು ಉಗುಳುದರಿಂದ ಕೊರೋನ ಹರಡಬಹುದು !

ಹುಷಾರ್! ಗುಟ್ಕಾ ಜಗಿದು ಉಗುಳುದರಿಂದ ಕೊರೋನ ಹರಡಬಹುದು !

ದೇಶದಾದ್ಯಂತ ಕೊರೊನ ಲಾಕ್ ಡೌನ್ ಆಗಿ ಹನ್ನೊಂದು ದಿನಗಳು ಕಳೆದಿದ್ದರೂ, ಕರೋನ ಭೀಕರ ವಾಗಿ ಉಲ್ಬಣಿಸುತ್ತಲೇ ಇದೆ.   ಏನೇ ಲೌಕ್ ಡೌನ್ ಆಗಲಿ ಗುಟ್ಕಾ ಜಗಿದು ಉಗುಳುವ ಅಭ್ಯಾಸವಿರುವವರು ಉಗುಳುತ್ತಲೇ ಇದ್ದಾರೆ.  ತಂಬಾಕು ಅಥವಾ ಗುಟ್ಕಾ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕ್ಯಾನ್ಸರ್ ಬರುತ್ತದೆ ಎಂದು ಪ್ಯಾಕೆಟ್ಟಿನ ಮೇಲೆಯೇ ರೋಗಗ್ರಸ್ತ ಮುಖದ ಫೋಟೋ ಮುದ್ರಿಸಿದ್ದರೂ ಮಾರಾಟ ಭರ್ಜರಿಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕರೊನ ಸೋಂಕಿತ ವ್ಯಕ್ತಿ ತಂಬಾಕು ಉತ್ಪನ್ನಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಎಲ್ಲೆಂದರಲ್ಲಿ ಬಸ್ಟ್ಯಾಂಡ್ ರಸ್ತೆ ಅಂಗಡಿಗಳ ಬದಿಗಳಲ್ಲಿ ರಸ್ತೆಗಳ ಮೇಲೆ ಉಗುಳುತ್ತಾ ಸಾಗಿದ್ದಾರೆ. ಇನ್ನೂ ಕೆಲವು ಜನಗಳು ಹೀಗೆ ಮಾಡುತ್ತಲೇ ಇದ್ದಾರೆ. ಇದರಿಂದ ಕೊರೋನಾ ಹರಡುವ ಸಾಧ್ಯತೆ ಇದೆ ಅಂತಾರೆ ಕೆ.ಎಂ.ಸಿ ಮಂಗಳೂರು ಇಲ್ಲಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ .

ಉಡುಪಿ ಜಿಲ್ಲಾಡಳಿತ covid 19 ನಿರ್ಮೂಲನೆ ಗಾಗಿ ಹಗಲಿರುಳು ಹರಸಾಹಸಪಡುತ್ತಿದ್ದರೂ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಜಿಲ್ಲೆಯಲ್ಲಿ ಬಿದ್ದಿಲ್ಲ.

ಗುಟ್ಕಾ ಜಗಿದು ಉಗುಳಿದ ಎಂಜಲು ಸೋಂಕಿತ ವ್ಯಕ್ತಿಯಿಂದ ಆರೋಗ್ಯಯುತ ವ್ಯಕ್ತಿಯನ್ನು ಸ್ಪರ್ಶಿಸಿದಾಗ ಆತನಿಗೂ ಹರಡುವ ಲಕ್ಷಣವಿದ್ದರೂ ಗುಟ್ಕಾದ ಬಗ್ಗೆ ಯಾರೂ ಮಾತಾಡುತ್ತಿಲ್ಲ. ತಂಬಾಕಿನ ಉತ್ಪನ್ನಗಳಿಂದ ಕ್ಯಾನ್ಸರ್, ಶ್ವಾಸಕೋಶದ ಸೋಂಕು, ಆಮಶಂಕೆ ಮತ್ತು ವಾಂತಿ ,ಜೊತೆ ಕೊರೊನ ಸೋಂಕಿತ ವೈರಾಣು ಕೂಡ ಹರಡಬಹುದು. ಇದೀಗ ಕೊರೋನಾ ಕೂಡ ಇದಕ್ಕೆ ಹೊಸ ಸೇರ್ಪಡೆಯಾಗಿದೆ. ಜಿಲ್ಲಾಡಳಿತ ರಾಜ್ಯ ಸರ್ಕಾರ ತಂಬಾಕು ಉತ್ಪನ್ನಗಳನ್ನು  ನಿಷೇದಿಸುವುದು ಒಳಿತು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಕೊರೋನಾ ವೈರಾಣು ಕಾರ್ಡ್ಬೋರ್ಡ್ ( cardboard)ಮಾಧ್ಯಮದ ಮೇಲೆ 24 hours) ಘಂಟೆ, ಪ್ಲಾಸ್ಟಿಕ್ ಮೇಲೆ 3 days ಸ್ಟೀಲ್ ಮೇಲೆ 2 ದಿನಗಳು, ತಾಮ್ರದ ಮೇಲೆ 4 ಗಂಟೆ ಹಾಗೂ ಉಗುಳಿದ ಮೇಲೆ ಡ್ರಾಪ್ಲ್ಟ್(droplet) ಮಾಧ್ಯಮದಲ್ಲಿ 8–10 ಘಂಟೆ ಜೀವಿತವಿರುತ್ತದೆ. ವಿಪರ್ಯಾಸವೆಂದರೆ ಈ ಒಂದು ವಿಷಯ ತಿಳಿದಿದ್ದೂ ನಮ್ಮ ದೇಶದಲ್ಲಿ ತಂಬಾಕು ಹಾಗೂ ಪಾನ್ ಮಸಾಲಾದ ಮಾರಾಟಕ್ಕೆ ನಿರ್ಬಂಧವಿಲ್ಲ

ಡಾ. ಪದ್ಮನಾಭ ಕಾಮತ್, ಖ್ಯಾತ ಹೃದ್ರೋಗ ತಜ್ಞರು
ಕೆ.ಎಂ.ಸಿ ಮಂಗಳೂರು

-ರಾಂ ಅಜೆಕಾರು ಕಾರ್ಕಳ

error: Content is protected !!