ನಾಳೆಯಿಂದ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಮೂರು ತಿಂಗಳು ಉಚಿತ ಗ್ಯಾಸ್

ಉಡುಪಿ: COVID-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಕೇಂದ್ರ ಸರಕಾರದ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ನಾಳೆಯಿಂದ ಪ್ರತಿ ತಿಂಗಳಿಗೆ ಒಂದು ಉಚಿತ ಗ್ಯಾಸ್ ಸಿಲಿಂಡರ್ ದೊರೆಯಲಿದೆ ಎಂದು ಉಡುಪಿ ಜಿಲ್ಲಾ ನೋಡಲ್ ಆಫೀಸರ್ ರೋಹಿತ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 28,000 ಜನರಿಗೆ ಈ ಸೌಲಭ್ಯ ದೊರೆಯಲಿದೆ. ಉಜ್ವಲ ಗ್ಯಾಸ್ ಫಲಾನುಭವಿಗಳ ಖಾತೆಗೆ ನಾಳೆ ಒಂದು ಸಿಲಿಂಡರ್ ನ ಹಣ ಜಮೆ ಆಗಲಿದೆ . ಆ ಹಣವನ್ನು ವಿತರಕರಿಗೆ ನೀಡಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಈ ಉಚಿತ ಗ್ಯಾಸ್ ಯೋಜನೆ  ಜೂನ್ 2020ರ ವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ತಿಂಗಳು ಹಣ ಬಳಕೆ ಮಾಡದಿದ್ದರೆ ಮುಂದಿನ ತಿಂಗಳು ಹಣ ಜಮೆ ಆಗುವುದಿಲ್ಲ. ಎರಡು ಸಿಲಿಂಡರ್ ಬುಕ್ಕಿಂಗ್ ಮಧ್ಯೆ ಹದಿನೈದು ದಿನದ ಅಂತರವಿರಬೇಕು ಎಂದು ರೋಹಿತ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೋಹಿತ್ 9448402109