“ಬೀದಿಗೆ ಬಂದ್ರೆ ನೀನು, ನಿನ್ನ ಮನೆಗೆ ಬರುವೆ ನಾನು”: ಕುಂದಾಪುರ ಪೊಲೀಸರಿಂದ ಹೀಗೊಂದು ಕೊರೋನಾ ಜಾಗೃತಿ ಬರಹ

ಕುಂದಾಪುರ: ಕೋವಿಡ್-19 ಕೊರೋನಾ ಸೋಂಕು ದಿನೆದಿನೆ ಹೆಚ್ಚುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವು ಕ್ರಮವನ್ನು ಕೈಗೊಂಡಿದೆ. ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಮಾವಿನಕಟ್ಟೆ ಸರ್ಕಲ್ ಬಳಿಯಲ್ಲಿ ‘ಬೀದಿಗೆ ಬಂದ್ರೆ ನೀನು…ನಿನ್ನ ಮನೆಗೆ ಬರುವೆ ನಾನು’ ಎಂಬ ಬರಹವನ್ನು ಬರೆದು ಜನರಲ್ಲಿ ಕೊರೋನಾ ಜಾಗೃತಿ ಮೂಡಿಸಲು‌ ಮುಂದಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ರಾಜಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಜನಜಾಗೃತಿ ಮಾಡುತ್ತಿದ್ದು ನಾಗರಿಕರು ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.

ಉಡುಪಿ: ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಬಟ್ಟೆ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಪುರ್ನವಸತಿ ಕೇಂದ್ರದ ನಿವಾಸಿಗಳಿಗೆ, ಬಟ್ಟೆಯನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು. ವಲಸೆ ಕಾರ್ಮಿಕರು, ವಾಹನದ ಸೌಕರ್ಯ ಇಲ್ಲದೆ ಊರಿಗೆ ಹೋಗಲಾಗದೆ ಉಡುಪಿಯಲ್ಲಿ ಉಳಿದು ಕೊಂಡಿದ್ದಾರೆ. ಅವರನ್ನು ಬೊರ್ಡ್ ಹೈಸ್ಕೂಲು- ಇಲ್ಲಿ ತಾತಾಕ್ಕಲಿವಾಗಿ ಸ್ಥಾಪಿಸಲಾಗಿರುವ ವಲಸೆ ಕಾರ್ಮಿಕರ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಲಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು, ಅವರಿಗೆಲ್ಲರಿಗೂ ಉಚಿತವಾಗಿ ಬಟ್ಟೆಯನ್ನು ವಿತರಿಸಿತು.  ಬಟ್ಟೆಯನ್ನು ನಗರಸಭೆ ಪೌರಾಯುಕ್ತ ಆನಂದ್ ಕಲ್ಲೊಳಿಕರ್ ವಿತರಣೆ ಮಾಡಿದರು. ಪಾಟೀಲ್ ಕ್ಲೋತ್ ಸ್ಟೋರ್ ಪರ್ಕಳ ಇವರು ಬಟ್ಟೆಗಳನ್ನು […]

ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗೆ ನಿರ್ಭಂದ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಮಾ.31: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ,ಮಾರ್ಚ್ 23 ರಿಂದ 31 ರ ವರೆಗೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗಳನ್ನು (ಶುಕ್ರವಾರದ ಜುಮ್ಮಾ ಪ್ರಾರ್ಥನೆ ಸೇರಿದಂತೆ) ನಿರ್ಬಂದಿಸಿ ಆದೇಶ ಹೊರಡಿಸಲಾಗಿತ್ತು, ಸರ್ಕಾರವು ರಾಜ್ಯಾದ್ಯಂತ  ಏಪ್ರಿಲ್ 14 ರ ವರೆಗೆ ಲಾಕ್ ಡೌನ್ ಮುಂದುವರೆಸಿರುವುದರಿಂದ, ಜಿಲ್ಲೆಯಲ್ಲಿ  ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ಆದೇಶದವರೆಗೂ, ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗಳನ್ನು (ಶುಕ್ರವಾರದ ಜುಮ್ಮಾ ಪ್ರಾರ್ಥನೆ ಸೇರಿದಂತೆ) ಸಾರ್ವಜನಿಕರ ಹಿತದೃಷ್ಠಿಯಿಂದ ನಿರ್ಬಂದಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ […]

ಉಡುಪಿ: ಐದು ಮಂದಿ ಕೊರೊನಾ ಶಂಕಿತರು ಪತ್ತೆ: ಆಸ್ಪತ್ರೆಗೆ ದಾಖಲು

ಉಡುಪಿ: ಜಿಲ್ಲೆಯಲ್ಲಿ ಇಂದು ಐವರು ಕೊರೊನಾ ಶಂಕಿತರು ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿದಂತೆ ಐದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ ಮೂವರು ಸ್ಥಳೀಯರಾಗಿದ್ದು, ಉಳಿದ ಇಬ್ಬರು ವಿದೇಶದಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  

ಹಸಿವೆಯಿಂದ ಬಳಲುವ ಕೂಲಿ ಕಾರ್ಮಿಕರು, ನಿರ್ವಸಿತರಿಗೆ ದೇವಾಲಯಗಳಿಂದ ಊಟೋಪಚಾರ: ಜಿಲ್ಲಾಧಿಕಾರಿ

ಉಡುಪಿ ಮಾ.31: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ವಿಧಿಸಿರುವ ನಿರ್ಭಂದಗಳಿಂದ , ಹಸಿವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ ಮತ್ತು ನಿರಾಶ್ರಿತರಿಗೆ ಶೆಲ್ಟರ್ ರೂಂ ಗಳಲ್ಲಿ ಸೂಕ್ತ ವಸತಿ  ಮತು ಊಟೋಪಚಾರ ಒದಗಿಸಲು ತಗುಲುವ ವೆಚ್ಚವನ್ನು, ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ,  ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ,  ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ […]