ಉಡುಪಿ: ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಬಟ್ಟೆ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಪುರ್ನವಸತಿ ಕೇಂದ್ರದ ನಿವಾಸಿಗಳಿಗೆ, ಬಟ್ಟೆಯನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು.
ವಲಸೆ ಕಾರ್ಮಿಕರು, ವಾಹನದ ಸೌಕರ್ಯ ಇಲ್ಲದೆ ಊರಿಗೆ ಹೋಗಲಾಗದೆ ಉಡುಪಿಯಲ್ಲಿ ಉಳಿದು ಕೊಂಡಿದ್ದಾರೆ. ಅವರನ್ನು ಬೊರ್ಡ್ ಹೈಸ್ಕೂಲು- ಇಲ್ಲಿ ತಾತಾಕ್ಕಲಿವಾಗಿ ಸ್ಥಾಪಿಸಲಾಗಿರುವ ವಲಸೆ ಕಾರ್ಮಿಕರ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಲಾಗಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯು, ಅವರಿಗೆಲ್ಲರಿಗೂ ಉಚಿತವಾಗಿ ಬಟ್ಟೆಯನ್ನು ವಿತರಿಸಿತು.  ಬಟ್ಟೆಯನ್ನು ನಗರಸಭೆ ಪೌರಾಯುಕ್ತ ಆನಂದ್ ಕಲ್ಲೊಳಿಕರ್ ವಿತರಣೆ ಮಾಡಿದರು. ಪಾಟೀಲ್ ಕ್ಲೋತ್ ಸ್ಟೋರ್ ಪರ್ಕಳ ಇವರು ಬಟ್ಟೆಗಳನ್ನು ದಾನವಾಗಿ ನೀಡಿದ್ದರು. ಒಟ್ಟು 150 ಜನರಿಗೆ ಪಂಚೆ, ಟಿಶರ್ಟ್, ಶರ್ಟು ವಿತರಿಸಲಾಯಿತು. ಈ ಸಂದರ್ಭ ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜೇಶ್ ಕಾಪು, ಪಡುಬಿದ್ರೆ ಚೇತನ್ ಉಪಸ್ಥಿತರಿದ್ದರು.