udupixpress
Home Trending ಹಸಿವೆಯಿಂದ ಬಳಲುವ ಕೂಲಿ ಕಾರ್ಮಿಕರು, ನಿರ್ವಸಿತರಿಗೆ ದೇವಾಲಯಗಳಿಂದ ಊಟೋಪಚಾರ: ಜಿಲ್ಲಾಧಿಕಾರಿ

ಹಸಿವೆಯಿಂದ ಬಳಲುವ ಕೂಲಿ ಕಾರ್ಮಿಕರು, ನಿರ್ವಸಿತರಿಗೆ ದೇವಾಲಯಗಳಿಂದ ಊಟೋಪಚಾರ: ಜಿಲ್ಲಾಧಿಕಾರಿ

ಉಡುಪಿ ಮಾ.31: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ವಿಧಿಸಿರುವ ನಿರ್ಭಂದಗಳಿಂದ , ಹಸಿವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ ಮತ್ತು ನಿರಾಶ್ರಿತರಿಗೆ ಶೆಲ್ಟರ್ ರೂಂ ಗಳಲ್ಲಿ ಸೂಕ್ತ ವಸತಿ  ಮತು ಊಟೋಪಚಾರ ಒದಗಿಸಲು ತಗುಲುವ ವೆಚ್ಚವನ್ನು, ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ,  ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ,  ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಶ್ರೀ ಅನಂತ ಪದ್ಮನಾಭ ಮತ್ತು ಅರ್ಧ ನಾರೀಶ್ವರ ದೇವಸ್ಥಾನ ಹೆಬ್ರಿ , ಈ ದೇವಾಲಯಗಳ ನಿಧಿಯಿಂದ ಭರಿಸಲು ಆಯಾಯಾ ತಾಲೂಕಿನ ಅವಶ್ಯಕತೆಗೆ ಸಂಬಂದಿಸಿದಂತೆ, ಸ್ಥಳೀಯ ತಹಸೀಲ್ದಾರ್ ಗಳು, ಸಂಬಂದಿಸಿದ ದೇವಾಲಯಗಳ  ಆಡಳಿತಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಆಡಳಿತ ಮೊಕ್ತೇಸರರಿಗೆ  ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

error: Content is protected !!