ಕೊರೊನಾ ಭೀತಿ: ಸಿಇಟಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಜಾಸ್ತಿಯಾದ ಕಾರಣ ಬರುವ ತಿಂಗಳು ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಬರುವ ತಿಂಗಳು ಏ.22 ರಿಂದ ಏ.24ವರೆಗೆ ಸಿಇಟಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿತ್ತಿರುವ ಹಿನ್ನಲೆ ಪ್ರಧಾನಿ ಮೋದಿ ಅವರು ದೇಶವನ್ನು ಏ.14ವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಹಾಗೂ ದಿನೇ ದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ […]

ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ: ಕಾರ್ಕಳದ 13 ಯುವಕರಿಗೆ ವಸತಿ ಸೌಲಭ್ಯ

ವಿಜಯಪುರ: ಮಾ 30: ಮಹಾರಾಷ್ಟ್ರದ ಭಾರಾಮತಿಯಿಂದ ಉಡುಪಿ ಜಿಲ್ಲೆಗೆ ತೆರಳುತ್ತಿದ್ದ 13 ಯುವಕರು ವಸತಿ ಮತ್ತು ಊಟದ ಸೌಕರ್ಯವಿಲ್ಲದೆ ಲಾಕ್‍ಡೌನ್ ಜಾರಿಯಿಂದ ನಗರದಲ್ಲಿ ಸಿಲುಕಿಕೊಂಡಿದ್ದ ಕಾರ್ಕಳದ 13 ಯುವಕರಿಗೆ ವಸತಿ ಸೌಲಭ್ಯ ಕಲ್ಪಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾನವಿಯತೆ ಮೆರೆದಿದ್ದಾರೆ. ಇಂದು ನಗರದ ಇಟಗಿ ಪೆಟ್ರೋಲ್‍ಪಂಪ್, ಆಕಾಶವಾಣಿ ಕೇಂದ್ರ, ಸಾಯಿಪಾರ್ಕ, ಹಮಾಲಕಾಲನಿ ಸೇರಿದಂತೆ ವಿವಿಧ ಕಡೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು […]

ಸುಬ್ರಹ್ಮಣ್ಯ: ಅರ್ಚಕರ ಮೇಲೆ ಹಲ್ಲೆ, ಪೊಲೀಸ್ ಸಿಬಂದಿ ಅಮಾನತು

ಮಂಗಳೂರು: ಪೂಜೆಗೆ ತೆರಳುತ್ತಿದ್ದ ಅರ್ಚಕರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಶನಿವಾರದಂದು ನಡೆದಿದ್ದು, ತನಿಖೆ ನಡೆಸಿರುವ ಪುತ್ತೂರು ಡಿವೈಎಸ್ಪಿಯವರ ವರದಿ ಆದರಿಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಆದೇಶಿಸಿದ್ದಾರೆ. ಆದಿ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಎಂಬವರು ಶನಿವಾರ ಸಂಜೆ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್ ಶಂಕರ್ ಸಂಸಿ ಎಂಬವರು ದಾರಿಯಲ್ಲಿ ಅಡ್ಡಗಟ್ಟಿ […]

ಸುಳ್ಳು ಸುದ್ದಿ ಫಾರ್ವರ್ಡ್ ಮಾಡಿದರೆ ಕ್ರಿಮಿನಲ್ ‌ಮೊಕದ್ದಮೆ: ಪೊಲೀಸ್ ಆಯುಕ್ತರಿಂದ ಎಚ್ಚರಿಕೆ

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಫಾರ್ವರ್ಡ್ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರ ಸಾರ್ವಜನಿಕ ಅಧಿಕಾರಿಗಳ ಹೆಸರಿನಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು, ವದಂತಿಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಫಾರ್ವರ್ಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪ್ರಕರಣವೊಂದಕ್ಕೆ ಸಂಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಎಚ್ಚರಿಕೆ ನೀಡಿದ್ದಾರೆ. ಅಧಿಕೃತವಾಗಿ ಅಧಿಕಾರಿಗಳಿಂದ ನೀಡಲಾದ ಸುದ್ದಿಗಳನ್ನಷ್ಟೇ ಜನರು […]

ಉಡುಪಿ: ಜಿಲ್ಲೆಯ ಈ ದಿನ ಕೊರೋನಾ ಸಂಬಂಧಿ ಪ್ರಕರಣಗಳ ವಿವರಗಳು ಇಲ್ಲಿದೆ

ಉಡುಪಿ: ಉಡುಪಿ ಜಿಲ್ಲೆಯ ಈ ದಿನ ಕೊರೋನಾ ಸಂಬಂಧಿ ಪ್ರಕರಣಗಳ ವಿವರಗಳು ಇಲ್ಲಿದೆ. ಈ ತನಕದ ಒಟ್ಟು ನಿಗಾ/ತಪಾಸಣೆ: 2309 ಮನೆ ನಿಗಾಕ್ಕೆ ನೋಂದಣಿ: 314 14 ದಿನಗಳ ಮನೆ ನಿಗಾ ಪೂರೈಸಿದವರು: 1072 28 ದಿನಗಳ ಮನೆ ನಿಗಾ ಪೂರೈಸಿದವರು: 127 ಆಸ್ಪತ್ರೆಗೆ ಕ್ವಾರಂಟೈನಿಗೆ ದಾಖಲು: 28 ಈ ತನಕ ತಪಾಸಣೆಗೆ ಮಾದರಿ ರವಾನೆ: 140 ಈ ತನಕ ತಪಾಸಣೆ ವರದಿ ಸ್ವೀಕಾರ:126 (ನೆಗೆಟಿವ್: 123, ಈ ತನಕ ಪೊಸಿಟಿವ್: 03) ವರದಿ ಬರಲು ಬಾಕಿ: […]