ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ(ರಿ): ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮುಂದೂಡಿಕೆ
ಹಿರಿಯಡಕ: ಕೊಂಡಾಡಿ ಭಜನೆಕಟ್ಟೆ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ(ರಿ) ಇವರ ವತಿಯಿಂದ ಸಂಘದ ಕಟ್ಟಡದ ಅಭಿವೃದ್ಧಿಯ ಬಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಏ.5 ಆದಿತ್ಯವಾರದಂದು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು 21 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸರಕಾರ ಮುಂದಿನ ಆದೇಶದ ವರೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮಯನ್ನು ಮುಂದೂಡಲಾಗಿದೆ. ಪೂಜೆಗೆ ಸಹಕರಿಸಿದ ದಾನಿಗಳು ಹಾಗೂ ಪೂಜಾ ರಶೀದಿಯನ್ನು ಪಡೆದು ಕೊಂಡವರು ಸಹಕರಿಸಬೇಕು […]
ಕಡಬ: ಮದ್ಯ ಸಿಗದ ಕಾರಣ ಇಬ್ಬರು ಆತ್ಮಹತ್ಯೆ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಮದ್ಯ ಸಿಗದ ಹಿನ್ನೆಲೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿವೆ ಎಂದು ತಿಳಿದು ಬಂದಿದೆ. ಮದ್ಯ ಸಿಗದ ಕಾರಣ ಜಿಗುಪ್ಸೆಗೊಂಡು ನೇಣುಬಿಗಿದು ಆತ್ಮಹತ್ಯೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ. ಕೋಡಿಂಬಾಳದ ತೋಮಸ್ (70)ಹಾಗೂ ಎರಡನೇ ಪ್ರಕರಣ ಕೇರಳದ ಕೊಟ್ಟಾಯಂ ಜಿಲ್ಲೆಯ ಪತ್ತನಂತಿಟ್ಟ ನಿವಾಸಿ ಟೋನಿ ಥೋಮಸ್(50) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಇಬ್ಬರು ವಿಭಿನ್ನ ಸ್ಥಳಗಳಲ್ಲಿ ನೇಣುಬಿಗಿದು ಆತ್ಮಹತ್ಯೆ ಪ್ರಕರಣಗಳಾಗಿವೆ. ಆದರೆ ಒಂದೇ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ […]
ಕುಂದಾಪುರ: ವಲಸೆ ಕಾರ್ಮಿಕರು ಅತಂತ್ರ, ಕೆಲಸವೂ ಇಲ್ಲ, ಊರಿಗೂ ಹೋಗಂಗಿಲ್ಲ, ಹೊತ್ತಿನ ಊಟಕ್ಕೂ ಸಂಕಷ್ಟ
ಕುಂದಾಪುರ: ಕೆಲಸ ಹುಡುಕಿ ಬೇರೆ ಕಡೆಯಿಂದ ಬಂದ ಕಾರ್ಮಿಕರು ಕೆಲಸ ಇಲ್ಲದೆ, ಊರಿಗೆ ಮರಳಲು ವಾಹನ ವ್ಯವಸ್ಥೆಯೂ ಇಲ್ಲದೆ ಕಾಲ್ನಡಿಗೆಯಲ್ಲಿ ಗಂಟು-ಮೂಟೆ ಹೊತ್ತು ಸಾಗುತ್ತಿರುವ ದೃಶ್ಯ ರಾ.ಹೆದ್ದಾರಿಯೂದ್ದಕ್ಕೂ ಶನಿವಾರ ಕಂಡುಬಂದಿದೆ. ಮಕ್ಕಳು, ಮೃದ್ದರು, ಪುರುಷರು ಹಾಗೂ ಮಹಿಳೆಯರೂ ಸೇರಿದಂತೆ ಸಾಕಷ್ಟು ಕಾರ್ಮಿಕರು ಗುಂಪು ಗುಂಪಾಗಿ ಚಪ್ಪಲಿ ಇಲ್ಲದೆ ನಡೆದುಕೊಂಡು ಹೋಗುವ ದೃಶ್ಯಗಳು ಕರುಣಾಜನಕವಾಗಿದೆ. ಮಂಗಳೂರಿಂದ ಶುಕ್ರವಾರ ಹೊರಟ ಬಾಗಲಕೋಟೆ ಮೂಲದ ಕಾರ್ಮಿಕರ ಗುಂಪು ಶನಿವಾರ ಮಧ್ಯಾಹ್ನ ಕುಂದಾಪುರ ಸಮೀಪ ಹೆಮ್ಮಾಡಿ ತಲುಪಿದೆ. ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, […]
ನಿರಾಶ್ರಿತರ, ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದೆ “ಪಾರಿಜಾತ”: ಮಾನವೀಯತೆ ಮಿಡಿಯುತ್ತಿದೆ ಕುಂದಾಪುರದ ಪಾರಿಜಾತ ಹೋಟೆಲ್
ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಹೊರಡಿಸಿರುವ ಲಾಕ್ಡೌನ್ ಆದೇಶ ಜಾರಿಗೊಂಡ ದಿನದಿಂದಲೂ ಜಿಲ್ಲೆಗೆ ಕೊರೋನಾ ಬರದಂತೆ ತಡೆಗಟ್ಟಲು ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಮಾಧ್ಯಮಗಳು ಹರಸಾಹಸಪಡುತ್ತಿವೆ.ಈ ನಡುವೆ ಹೊಟ್ಟೆಗಿಲ್ಲದೇ ನೂರಾರು ಕಾರ್ಮಿಕರು,ನಿರಾಶ್ರಿತರು ಸಂಕಟದಲ್ಲಿದ್ದಾರೆ.ಈ ತುರ್ತು ಸ್ಥಿತಿಯಲ್ಲಿ ಅವರಿಗೆ ಬೆನ್ನೆಲುಬಾಗಿ ಅವರ ಹೊಟ್ಟೆ ತುಂಬಿಸಿ ಊಟ ಕೊಡುವ ಮೂಲಕ ಕುಂದಾಪುರದ ಪಾರಿಜಾತ ಹೋಟೆಲ್ ಮಾನವೀಯತೆಯ ಮಿಡಿಯುತ್ತಿದೆ. ಇತ್ತೀಚೆಗೆ ಶಿರೂರು ಚೆಕ್ಪೋಸ್ಡ್ ಬಳಿಯಲ್ಲಿ ನಸುಕಿನ ಜಾವ ಒಂದು ಗಂಟೆಯ ಸಮಯದಲ್ಲಿ ಬಳಿಕ ಜಮಾವಣೆಗೊಂಡ ಬಿಜಾಪುರ, ಕೊಪ್ಪಳ, […]
ಉಡುಪಿಯಲ್ಲಿ ಕೊರೊನಾ ಶಂಕಿತರ ಸಂಖ್ಯೆಯಲ್ಲಿ ದಿಢೀರ್ ಇಳಿಕೆ: ಇಂದು ಹೊಸದಾಗಿ ಏಳು ಮಂದಿ ಕೊರೊನಾ ಶಂಕಿತರು ಪತ್ತೆ
ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 7 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಕೇಂದ್ರಗಳ ಕೊರತೆ ಇದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಕೊರೊನಾ ಶಂಕಿತರ ಸ್ಯಾಂಪಲ್ ಅನ್ನು ಪರೀಕ್ಷೆಗೆ ಒಳಪಡಿಸುವ ವಿಧಾನವನ್ನು ಬದಲಾವಣೆ ಮಾಡಿದೆ. ಪ್ರಯೋಗಾಲಯದ ವೈದ್ಯರ ಸೂಚನೆಯಂತೆ ಆಸ್ಪತ್ರೆಗಳು ಶಂಕಿತರ ಸ್ಯಾಂಪಲ್ ಕಳುಹಿಸುವಂತೆ ಆದೇಶ ಹೊರಡಿಸಿದೆ. ಅದರಂತೆ ಇಂದು ಜಿಲ್ಲೆಯಲ್ಲಿ ಕಂಡುಬಂದ ಏಳು […]