ನಿರಾಶ್ರಿತರ, ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದೆ “ಪಾರಿಜಾತ”: ಮಾನವೀಯತೆ ಮಿಡಿಯುತ್ತಿದೆ ಕುಂದಾಪುರದ ಪಾರಿಜಾತ ಹೋಟೆಲ್

ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಹೊರಡಿಸಿರುವ ಲಾಕ್‍ಡೌನ್ ಆದೇಶ ಜಾರಿಗೊಂಡ ದಿನದಿಂದಲೂ ಜಿಲ್ಲೆಗೆ ಕೊರೋನಾ ಬರದಂತೆ ತಡೆಗಟ್ಟಲು ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಮಾಧ್ಯಮಗಳು ಹರಸಾಹಸಪಡುತ್ತಿವೆ.ಈ ನಡುವೆ ಹೊಟ್ಟೆಗಿಲ್ಲದೇ ನೂರಾರು ಕಾರ್ಮಿಕರು,ನಿರಾಶ್ರಿತರು ಸಂಕಟದಲ್ಲಿದ್ದಾರೆ.ಈ ತುರ್ತು ಸ್ಥಿತಿಯಲ್ಲಿ ಅವರಿಗೆ ಬೆನ್ನೆಲುಬಾಗಿ ಅವರ ಹೊಟ್ಟೆ ತುಂಬಿಸಿ ಊಟ ಕೊಡುವ ಮೂಲಕ ಕುಂದಾಪುರದ ಪಾರಿಜಾತ ಹೋಟೆಲ್ ಮಾನವೀಯತೆಯ ಮಿಡಿಯುತ್ತಿದೆ.

ಇತ್ತೀಚೆಗೆ ಶಿರೂರು ಚೆಕ್‍ಪೋಸ್ಡ್ ಬಳಿಯಲ್ಲಿ ನಸುಕಿನ ಜಾವ ಒಂದು ಗಂಟೆಯ ಸಮಯದಲ್ಲಿ ಬಳಿಕ ಜಮಾವಣೆಗೊಂಡ ಬಿಜಾಪುರ, ಕೊಪ್ಪಳ, ಬಾಗಲಕೋಟೆ, ಗುಲ್ಬರ್ಗಾದ ಕಾರ್ಮಿಕರನ್ನುತಡೆದು ಹಿಡಿಯಲಾಗಿತ್ತು. ಆಹಾರವಿಲ್ಲದೆ ಅವರು ಕಂಗಾಲಾಗಿದ್ದರು ಇದನ್ನು ಗಮನಿಸಿದ ಅಲ್ಲಿಯ ಅಧಿಕಾರಿಗಳು ಪಾರಿಜಾತ ಹೋಟೆಲ್ ಗೆ ಕರೆಮಾಡಿದ್ದಾರೆ

ರಾತ್ರಿ ಎರಡು ಗಂಟೆಯ ಸಮಯದಲ್ಲಿ ಹೋಟೆಲ್ ಸಿಬ್ಬಂದಿ ತಡಮಾಡದೆ ವಲಸೆ ಕಾರ್ಮಿರಿಗೆ ಊಟದ ವ್ಯವಸ್ಥೆ ಬಿಸ್ಕಿಟ್ ಸಾವಿರದೈನೂರು ನೀರಿನ ಬಾಟಲ್ ವಿತರಿಸಿದ್ದಾರೆ . ಇದರ ಜೊತೆ ಲಾಕ್ಡೌನ್ ಆದ ಬಳಿಕ ಕಂಡ್ಲೂರು , ಶಂಕರನಾರಾಯಣ, ಕೊಲ್ಲೂರು, ಬೈಂದೂರು , ಗಂಗೊಳ್ಳಿ ಠಾಣೆ ಗಳಿಗೆ ಹಾಗೂ ಹಸಿದ ಕಾರ್ಮಿಕರಿಗೆ ನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಜೊತೆ ಬಿಸ್ಕಿಟ್ ನೀರು, ಸಂಜೆ ಊಟ ನೀಡುತ್ತಿದ್ದಾರೆ. ನಿತ್ಯ ಮುನ್ನೂರಕ್ಕೂ ಹೆಚ್ಚು ಜನರಿಗೆ ಈ ವ್ಯವಸ್ಥೆ ನೀಡುತಿದ್ದಾರೆ‌.
ನಿತ್ಯ 15 ಜನರ ತಂಡ ಹಾಗೂ ನಾಲ್ಕು ಜನ ನುರಿತ ಬಾಣಸಿಗರು ದಿನದ 24 ಘಂಟೆ ಶ್ರಮಿಸುತ್ತಾ ಆಹಾರ ಪೊಟ್ಟಣಗಳನ್ನು ತಲುಪಿಸುತಿದ್ದಾರೆ.(ಹೆಲ್ಪ್ ಲೈನ್ ನಂಬರ್ :9483870705,7348970704)

ಲಾಕ್ ಡೌನ್ ಮುಗಿಯುವವರೆಗೂ ಕಾರ್ಮಿಕರಿಗೆ ಪೋಲಿಸ್ ಸಿಬ್ಬಂದಿಗೆ ಅಧಿಕಾರಿಗಳಿಗೆ ನಿರಾಶ್ರಿತರಿಗೆ ಊಟದ ವ್ಯವಸ್ಥೆ ನಾವೇ ಕಲ್ಪಿಸುತ್ತೇವೆ ಎಂದು ಹೇಳುತ್ತಾರೆ ರಾಮಚಂದ್ರ ಭಟ್.ಪಾರಿಜಾತ ಹೊಟೇಲ್ ನ ಈ ಸೇವೆ ಇತರರಿಗೂ ಮಾದರಿಯಾಗಲಿ

-ವರದಿ: ರಾಮ್ ಅಜೆಕಾರ್