ರಾಜ್ಯದಲ್ಲೂ ಮಹಿಳಾ ವಕೀಲರ ಸಂಖ್ಯೆ ಹೆಚ್ಚಾಗಿದೆ: ಸಿ.ಎಂ. ಜೋಶಿ

ಉಡುಪಿ ನ್ಯಾಯಾಲಯದಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ಮಹಿಳಾ ಸಿಬ್ಬಂದಿ ಇದ್ದು, ಶೇ. 30ಕ್ಕಿಂತಲೂ ಹೆಚ್ಚು ಮಹಿಳಾ ವಕೀಲರಿದ್ದಾರೆ. ರಾಜ್ಯದಲ್ಲೂ ಶೇ. 30ಕ್ಕಿಂತ ಹೆಚ್ಚು ಮಹಿಳೆಯರು ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಲಿಂಗ ಸಮಾನತೆಯ ಅನುಷ್ಠಾನದಲ್ಲಿ ನಾವು ಅನೇಕ ಹೆಜ್ಜೆಗಳನ್ನು ಇಟ್ಟಿದ್ದು, ದೇಶದ ಸಂವಿಧಾನ ಹಾಗೂ ಕಾನೂನುಗಳು ಕೂಡ ಈ ದಿಸೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಹೇಳಿದರು. ಉಡುಪಿ ವಕೀಲರ ಸಂಘ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ […]

ಮಾ.9ಕ್ಕೆ ಬಡಗಬೆಟ್ಟು ಸೊಸೈಟಿಯ ನೂತನ ಮಣಿಪಾಲ ಶಾಖೆ ಉದ್ಘಾಟನೆ

ಉಡುಪಿ: ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 10ನೇ ಹವಾನಿಯಂತ್ರಿತ ಶಾಖೆ ಇದೇ 9ರಂದು ಬೆಳಿಗ್ಗೆ 10ಗಂಟೆಗೆ ಮಣಿಪಾಲ ಕಮರ್ಷಿಯಲ್‌ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡುವರು. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಶಾಖೆಯನ್ನು ಉದ್ಘಾಟಿಸುವರು ಎಂದರು. […]

ಶಂಕಿತ ಕೊರೊನಾ ವೈರಸ್ ರೋಗಿಯ ಪರೀಕ್ಷಾ ವರದಿ ನೆಗೆಟಿವ್: ಜಿಲ್ಲಾಧಿಕಾರಿ

ಉಡುಪಿ, ಮಾ.7: ಇಸ್ರೇಲ್‍ನಿಂದ ಉಡುಪಿಗೆ ಆಗಮಿಸಿದ್ದ ಸುಮಾರು  75 ವರ್ಷದ ವ್ಯಕ್ತಿಗೆ ಕೆಮ್ಮು ಹಾಗೂ ಶೀತದ ತೊಂದರೆಯಿರುವ ಖಚಿತ ಮಾಹಿತಿ ಅನ್ವಯ ಉಡುಪಿ ಜಿಲ್ಪಾಸ್ಪತ್ರೆಗೆ ದಾಖಲಾಗಿದ್ದು, ಶಂಕಿತ ಕೊರೊನಾ ವೈರಸ್ ಲಕ್ಷಣಗಳ ಹಿನ್ನೆಲೆಯಲ್ಲಿ, ಈ ರೋಗಿಯ ಥ್ರೋಟ್ ಸ್ವಾಬ್ ನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದು, ಇಂದು ಆ ವ್ಯಕ್ತಿಯ ವೈದ್ಯಕೀಯ ವರದಿಯು ಜಿಲ್ಲಾಡಳಿತ ಕೈ ಸೇರಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿರುವುದರಿಂದ,  ಜಿಲ್ಲೆಯ ಸಾರ್ವಜನಿಕರು ಯಾವುದೇ ಆತಂಕಗೊಳಗಾಗುವ ಅಗತ್ಯವಿಲ್ಲ. ಆದರೆ ಈ ರೋಗದ ಲಕ್ಷಣಗಳನ್ನು ತಿಳಿದುಕೊಂಡು ಅಗತ್ಯ […]

ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಪತ್ನಿ ಜೊತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ

ಮಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ ತಮ್ಮ ಪತ್ನಿ ಆಶ್ರಿತಾ ಶೆಟ್ಟಿ ಜೊತೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಭೇಟಿ ನೀಡಿದರು. ಇಂದು ಬೆಳಿಗ್ಗೆ ತಮ್ಮ ಗೆಳೆಯನ ಜೊತೆ ಆಗಮಿಸಿದ ದಂಪತಿ ದೇವಸ್ಥಾನಕ್ಕೆ ಭೇಟಿ, ನಾಗದೇವರಿಗೆ ಆಶ್ಲೇಷ ಪೂಜೆಯನ್ನು ನೆರೆವೇರಿಸಿ, ಬಳಿಕ ಆದಿ ಸುಬ್ರಹ್ಮಣ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಪಡೆದರು. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮನೀಶ್ ಪಾಂಡೆ ವಿವಾಹವು ತುಳು ನಟಿ […]

ಡಾ| ಬಿ.ಬಿ. ಹೆಗ್ಡೆ ಕಾಲೇಜು: ಡಿಜಿಟಲ್ ಮಾರ್ಕೆಟಿಂಗ್‍ ಉದ್ಯೋಗ – ಮಾಹಿತಿ ಕಾರ್ಯಕ್ರಮ

ಕುಂದಾಪುರ, ಮಾ.6: ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿರುವ ಉದ್ಯೋಗ ಅವಕಾಶಗಳ ಮತ್ತು ಡಿಜಿಟಲ್ ಮಾರ್ಕೆಟ್‍ನ ಪ್ರಯೋಜನಗಳನ್ನು ಹುಬ್ಬಳ್ಳಿ ಜ್ಞಾನ ಸಂಸ್ಥೆಯ ಸ್ಥಾಪಕ ಮಯೂರ ಹತ್ವಾರ್ ತಿಳಿಸಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಆಯೋಜನೆಯಲ್ಲಿ ಅಂತಿಮ ಬಿ.ಕಾಂ. ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳಿಗೆ ನಡೆಸಿದ “ಡಿಜಿಟಲ್ ಮಾರ್ಕೆಟ್‍ನ ಅವಕಾಶಗಳ” ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಫ್ರಿಲೆನ್ಸ್ ಸಲಹೆಗಾರ ಮತ್ತು […]