ಫೆ. 29 ರಿಂದ ಉಡುಪಿಯಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ : ಪ್ರೀತಿ ಗೆಹಲೋತ್

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ ತೋಟಗಾರಿಕೆ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನವು ಫೆ. 29 ರಿಂದ ಮಾರ್ಚ್ 2 ರ ವರೆಗೆ ಉಡುಪಿ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ (ಪುಷ್ಪ ಹರಾಜು) ಕೇಂದ್ರದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ. ಅವರು ಗುರುವಾರ, ತೋಟಗಾರಿಕಾ ಇಲಾಖೆಯಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಕುರಿತ ಪತ್ರಿಕಾಗೋಷ್ಠಿಯಲ್ಲಿ […]

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕುಂದಾಪುರದ ಖಾದರ್ ಗುಲ್ವಾಡಿಯವರ “ಟ್ರಿಪಲ್ ತಲಾಖ್”

ಕನ್ನಡಕ್ಕೆ ರಿಸರ್ವೇಶನ್ ಚಿತ್ರದ ಮೂಲಕ 2017ರಲ್ಲಿ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಮತ್ತು 2018 ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ (ಬಿಫ್ಸ್) ತಂದುಕೊಟ್ಟ ಕುಂದಾಪುರದ ಕಲಾವಿದ ಯಾಕುಬ್ ಖಾದರ್ ಗುಲ್ವಾಡಿಯವರ ಪ್ರಥಮ ನಿರ್ದೇಶನದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಲಾಖ್ ವಿಚಾರದಲ್ಲಿ ಸೂಕ್ಷ್ಮವಾಗಿ ಚರ್ಚೆಗೊಳಗಾದ ಕಥೆಯನ್ನಿಟ್ಟುಕೊಂಡು ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ತಯಾರಾದ ಟ್ರಿಪಲ್ ತಲಾಖ್ ಸಿನಿಮಾ ಇದೇ ತಿಂಗಳ 28ರಿಂದ ಮಾರ್ಚ್ 4ರ ತನಕ ನಡೆಯುವ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅನ್ಸುಂಗ್ ಇನ್ಕ್ರೆಬಲ್ […]

ರಾಜ್ಯ ಬಿಜೆಪಿ ಪ್ರಭಾವಿ ಹುದ್ದೆಗೆ ಸುನಿಲ್ ಕುಮಾರ್?

ಬೆಂಗಳೂರು: ರಾಜ್ಯ ಬಿಜೆಪಿಯ ಅತ್ಯಂತ ಪ್ರಭಾವಿ ಹುದ್ದೆಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ  ಶಾಸಕ, ವಿಧಾನ ಸಭೆಯ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್  ಅವರ ಹೆಸರು ಕೇಳಿಬಂದಿದೆ ಎನ್ನಲಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅನಂತರದ ಪ್ರಮುಖ ಹುದ್ದೆ ಇದಾಗಿದ್ದು, ಸುನಿಲ್ ಸೇರ್ಪಡೆಗೆ ಸಂಘಪರಿವಾರ, ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನ ನಳಿನ್ ಕುಮಾರ್ ಕಟೀಲ್ ಈಗಾಗಲೇ ಆರಂಭಿಸಿದ್ದು ಅದ್ರಲ್ಲಿ ಪ್ರಭಾವಿ ಹುದ್ದೆಗೆ […]

ರಂಗಭೂಮಿ‌ ನೈಜತೆಯ ಪ್ರತಿಬಿಂಬ: ಮಂಜಮ್ಮ ಜೋಗತಿ

ಉಡುಪಿ: ರಂಗಭೂಮಿ ನೈಜತೆಯ ಪ್ರತಿಬಿಂಬ. ಮನಸ್ಸನ್ನು ವೃದ್ಧಿಸುವ, ಮಾತನ್ನಾಡುವ ಶಕ್ತಿ ಕಲೆಯಿಂದ ಪ್ರಾಪ್ತಿಯಾಗುತ್ತದೆ. ಹಾಗಾಗಿ ಕಲೆಯಿಲ್ಲದೆ ಜೀವನವೂ ಇಲ್ಲ ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು. ಸುಮನಸಾ ಕೊಡವೂರು ಸಂಸ್ಥೆಯು ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ನಿರ್ದೇಶನಾಲಯ, ನಗರಸಭೆ ಹಾಗೂ ಪೇಜಾವರ ಮಠದ ಸಹಕಾರದೊಂದಿಗೆ ಆಯೋಜಿಸಿದ್ದ ರಂಗಹಬ್ಬ–8 ನಾಟಕೋತ್ಸವದ ಮೂರನೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗಭೂಮಿ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಅದರಲ್ಲಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಭಕ್ತಿ, ಶ್ರದ್ಧೆ, ಪ್ರೀತಿಯಿಂದ ಮಾಡುವ […]

ಬೈಲೂರು–ಕೊರಂಗ್ರಪಾಡಿ ರಸ್ತೆ ವಿಸ್ತರಣೆಗೆ ಚಾಲನೆ

ಉಡುಪಿ: ಬೈಲೂರು–-ಕೊರಂಗ್ರಪಾಡಿ ರಸ್ತೆಯ 40 ಫೀಟ್‌ ವಿಸ್ತರಣೆ ಕಾಮಗಾರಿಗೆ ಶಾಸಕ ರಘುಪತಿ ಭಟ್‌ ಗುರುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ರಸ್ತೆ ವಿಸ್ತರಣೆಗೆ ಜನರು ಸ್ವ ಇಚ್ಚೆಯಿಂದ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದು, ಭೂ ಮಾಲೀಕರಿಗೆ ಯಾವುದೇ ಪರಿಹಾರ ನೀಡಬೇಕಾದ ಅವಶ್ಯಕತೆ ಇಲ್ಲದಿರುವುದರಿಂದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟಿಡಿಆರ್‌ ನಿಯಮದಡಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು. ಪ್ರಸ್ತುತ ಇದ್ದ 15 ಫೀಟ್‌ ರಸ್ತೆಯನ್ನು 40 ಫೀಟ್‌ಗೆ ವಿಸ್ತರಣೆ ಮಾಡಲಾಗುತ್ತದೆ. ರಸ್ತೆಗೆ ಬೇಕಾದ ಸ್ಥಳವನ್ನು ಉಚಿತವಾಗಿ ನೀಡಲು ಸಹಕರಿಸಿದ ಭೂ ಮಾಲೀಕರಿಗೆ […]