ಸಿಡ್ನಿ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀನಿವಾಸಕಲ್ಯಾಣ
ಉಡುಪಿ: ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದ ಶ್ರೀಪುತ್ತಿಗೆ ಮಠದ ಶ್ರೀವೆಂಕಟಕೃಷ್ಣ ವೃಂದಾವನದಲ್ಲಿ ಪ್ರಥಮವಾಗಿ ವೈಭವದ ಶ್ರೀನಿವಾಸಕಲ್ಯಾಣ ಮಹೋತ್ಸವವು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಿತು. ಸುಮಾರು ಎರಡು ಸಾವಿರ ಭಕ್ತರ ಪಾಲ್ಗೊಳ್ಳುವಿಕೆಯಿಂದ ನಡೆದ ಈ ಸಮಾರಂಭದಲ್ಲಿ ಸಿಡ್ನಿ ಮಹಾನಗರದ ಮೇಯರ್ ಹಾಗೂ ಸಂಸದರು ಅಲ್ಲದೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಭಜನೆ ನೃತ್ಯ ಸಂಗೀತ ವಲ್ಲದೆ ವಿದ್ವಾನ್ ಕೇಶವ್ ಅವರಿಂದ ಪ್ರವಚನ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಸರ್ಕಾರಿ ಸೌಲಭ್ಯದ ಮಾಹಿತಿ ನೀಡಲು ಅಭಿಯಾನ: ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯ
ಉಡುಪಿ: ಉಡುಪಿ ನಗರ ವ್ಯಾಪ್ತಿಯ ಎಲ್ಲ ಮನೆಗಳ ಬಾಗಿಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನು ಕೊಂಡೊಯ್ಯವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದು ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ಹೇಳಿದರು. ಬಿಜೆಪಿ ಜಿಲ್ಲಾ ನೇಕಾರರ ಪ್ರಕೋಷ್ಠ, ಪದ್ಮಶಾಲಿ ವಿಶ್ವಸೇವಾ ಪ್ರತಿಷ್ಠಾನ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ, ಶಾರದೋತ್ಸವ ಸಮಿತಿ, ರೋಟರಿ ಕ್ಲಬ್ ಉಡುಪಿ ರಾಯಲ್, ಜಿಲ್ಲಾ ಕಾರ್ಮಿಕ ಇಲಾಖೆ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ಉಡುಪಿ ಕಿನ್ನಿಮೂಲ್ಕಿ ವೀರಭದ್ರ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಆಯುಷ್ಮಾನ್ ಆರೋಗ್ಯ ಕರ್ನಾಟಕ […]
ಉಡುಪಿ ಜಿಲ್ಲೆಯಲ್ಲಿ ಕೊರೋನ ವೈರಸ್ ಪ್ರಕರಣ ಇಲ್ಲ: ಡಿಸಿ ಸ್ಪಷ್ಟನೆ
ಉಡುಪಿ: ಜಿಲ್ಲೆಯಲ್ಲಿ ಕೊರೋನ ವೈರಸ್ ಪ್ರಕರಣ ಇಲ್ಲವೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಶಂಕಿತರ ವೈದ್ಯಕೀಯ ವರದಿ ನೆಗೆಟಿವ್ ಎಂದು ಬಂದಿದ್ದು, ಹೀಗಾಗಿ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಬಿಲ್ಲಾಡಿ ಐಟಿಐ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಕ್ರಿಕೆಟ್: ಡಿಮೋನ್ ನೈಟ್ಸ್ ಗೆ ಟ್ರೋಫಿ
ಉಡುಪಿ: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಡಿಮೋನ್ ನೈಟ್ಸ್ ತಂಡ ಟ್ರೋಫಿ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ವಿವಿಧ ಐಟಿಐ ಶಿಕ್ಷಣ ಸಂಸ್ಥೆಗಳ 7 ತಂಡಗಳು ಭಾಗವಹಿಸಿದ್ದವು. ಫೈನಲ್ನಲ್ಲಿ ಅಂತಿಮವಾಗಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳ ತಂಡ ಮಂದಾರ್ತಿ ಫ್ರೆಂಡ್ಸ್, ಇದೇ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ತಂಡ ಡಿಮೋನ್ ನೈಟ್ಸ್ ತಂಡವು ಹಣಾಹಣಿ ನಡೆಸಿ […]
ಮಂಗಳೂರು-ಬೆಂಗಳೂರು ಹೆದ್ದಾರಿ: ಭೀಕರ ಅಪಘಾತದಲ್ಲಿ ಇಬ್ಬರು ಸಾವು
ಮಂಗಳೂರು: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಇಬ್ಬರು ಮೃತಪಟ್ಟು ಒರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬ ನಡೆದಿದೆ. ಮೃತಪಟ್ಟವರನ್ನು ನೆಲ್ಯಾಡಿಯ ಉದ್ಯಮಿ ಯು.ಪಿ ವರ್ಗೀಸ್ ಅವರ ಸೊಸೆ ಕಾಂಚನ ನಿವಾಸಿ ಶಾಜಿ ಎಂಬವರ ಪತ್ನಿ ಜೈನೀ ಶಾಜಿ (30) ಮತ್ತು ಜೀಸನ್ (40) ಎಂಬವರು ಎಂದು ಗುರುತಿಸಲಾಗಿದೆ. ಸರ್ವೀನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಸನ್ ಎಂಬವರು ಧರ್ಮಗುರುದೀಕ್ಷೆ […]