ನೆರಳು ನೀಡಿದ್ದ ಮರದ ಕೊರಳು ತೆಗೆದ ಕುಂದಾಪುರ ಪುರಸಭೆ: ನ್ಯಾಯದೇವತೆಗೂ ಕೇಳಿಸದೆ ಹೋಯ್ತೇ ಮರಗಳ ಮೂಕ ರೋದನ !!

ಶ್ರೀಕಾಂತ ಹೆಮ್ಮಾಡಿ ಕುಂದಾಪುರ ಕುಂದಾಪುರ: ಶತಮಾನದಿಂದಲೂ ಸುಡುಬಿಸಿಲನ್ನು ಲೆಕ್ಕಿಸದೇ ನಿಮಗೆಲ್ಲಾ ನೆರಳು, ಆಮ್ಲಜನಕ ನೀಡಿದ್ದೇನೆ. ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಜಾಗ ಕೊಟ್ಟಿದ್ದೇನೆ. ಮುಂದೆಯೂ ನನ್ನ ಸೇವೆ ಹೀಗೆಯೇ ಮುಂದುವರಿಸುವೆ. ಆದರೆ ಅಭಿವೃದ್ದಿಯ ಹೆರಿನಲ್ಲಿ ನನ್ನನ್ನು ಕೊಲ್ಲಬೇಡಿ ಎಂದು ನ್ಯಾಯಾಲಯದ ಮುಂದೆ ಮರಗಳು ಮೌನವಾಗಿ ರೋದಿಸುತ್ತಿವೆ. ಕುಂದಾಪುರದ ನ್ಯಾಯಾಲಯ ಹಾಗೂ ಮಿನಿವಿಧಾನಸೌದದ ಮುಂದೆ ಬೃಹದಾಕಾರವಾಗಿ ಬೆಳೆದು ಅದೆಷ್ಟೋ ವರ್ಷಗಳಿಂದ ವಾಹನಗಳಿಗೆ, ಕುಗ್ರಾಮಗಳಿಂದ ಅರ್ಜಿ ಹಿಡಿದು ತಾಲೂಕು ಕಚೇರಿಗೆ ಬಂದ ಬಡಜನರಿಗೆ ನೆರಳು ಕೊಡುತ್ತಿದ್ದ ದೇವದಾರು ಮರಗಳ ಬೇರುಗಳಿಗೆ ಇದೀಗ […]
ನಿಟ್ಟೆ ವಿದ್ಯಾರ್ಥಿಗಳಿಗೆ ಇಮ್‌ಟೆಕ್ಸ್ ಕ್ವಿಜ್ ಪ್ರಶಸ್ತಿ

ನಿಟ್ಟೆ: ಬೆಂಗಳೂರಿನಲ್ಲಿ ನಡೆದ ‘ಇಮ್‌ಟೆಕ್ಸ್ ಫಾರ್ಮಿಂಗ್ & ಟೂಲ್‌ಟೆಕ್ ೨೦೨೦’ ಎಂಬ ಕಾರ್ಯಕ್ರಮದಲ್ಲಿ ನಡೆಸಲಾದ ‘ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಕ್ವಿಜ್ ಕಾಂಟೆಸ್ಟ್‌ನಲ್ಲಿ ನಿಟ್ಟೆ ಮಹಾಲಿಂದ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನವನ್ನು ಗಳಿಸಿದೆ. ವಿದ್ಯಾರ್ಥಿಗಳಾದ ಚಂದ್ರಪ್ರಕಾಶ್ ಕೆ.ಆರ್, ಸಾಕೇತ್ ಕುಕ್ಕಿಲ್ಲಾಯ, ಆದಿತ್ಯ, ಪ್ರತೀಕ್ ಹಾಗೂ ಸೌಂದರ್ಯ ಕಾಮತ್ ನಿಟ್ಟೆ ತಂಡವನ್ನು ಪ್ರತಿನಿಧಿಸಿರುತ್ತಾರೆ
ಕುಂದಾಪುರ: ದಾರಿ ತಪ್ಪಿಸ್ತಿದೆ ದಾರಿಫಲಕ ! ಕೊಲ್ಲೂರು ಯಾತ್ರಾರ್ಥಿಗಳಿಗೆ ಗೊಂದಲ

ಕುಂದಾಪುರ: ಕುಂದಾಪುರದಿಂದ ಕಾರವಾರದ ತನಕ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿ ತಲ್ಲೂರಿನಲ್ಲಿ ಅಳವಡಿಸಿರುವ ನಾಮಫಲಕ ಇದೀಗ ಕೊಲ್ಲೂರು ಯಾತ್ರಾರ್ಥಿಗಳನ್ನು ಗೊಂದಲಕ್ಕೀಡುಮಾಡಿದೆ. ಕಳೆದ ಒಂದು ತಿಂಗಳ ಹಿಂದೆ ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಹೆಮ್ಮಾಡಿಗಿಂತ ಮೂರು ಕಿ.ಮೀ ಹಿಂದಿರುವ ತಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೇರಳಕಟ್ಟೆ-ನೆಂಪು ಮಾರ್ಗವಾಗಿ ಕೊಲ್ಲೂರಿಗೆ ಸಂಕರ್ಪ ಕಲ್ಪಿಸುವ ರಸ್ತೆಯತ್ತ ನಾಮಫಲಕ ಅಳವಡಿಸಿದ್ದರಿಂದ ಇದೀಗ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಕೇರಳ, ತಮಿಳುನಾಡು, ಬೆಂಗಳೂರಿನಿಂದ ಕೊಲ್ಲೂರಿಗೆ ತೆರಳುವ ಯಾತ್ರಾರ್ಥಿಗಳು ತಲ್ಲೂರಿನಲ್ಲಿ ಟರ್ನ್ ಪಡೆದುಕೊಂಡು […]
ಕುಂದಾಪುರ: ನದಿಗೆ ಹಾರಿದ ಉದ್ಯಮಿಯ ಮೃತದೇಹ ಪತ್ತೆ

ಕುಂದಾಪುರ: ಭಾನುವಾರ ಪಂಚಾಗಂಗಾವಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೊಟೇಲ್ ಉದ್ಯಮಿಯೋರ್ವರ ಮೃತದೇಹ ಸೋಮವಾರ ಬೆಳಿಗ್ಗೆ ಹೆಮ್ಮಾಡಿ ಸಮೀಪದ ಬುಗ್ರಿಕಡು ನದಿಯಲ್ಲಿ ಪತ್ತೆಯಾಗಿದೆ. ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರ ಚಿಕನ್‌ಸಾಲ್ ರಸ್ತೆಯ ನಿವಾಸಿ ಕೆ.ಜಿ. ಗಣೇಶ್(೪೯) ಮೃತರು. ಗಣೇಶ್ ಭಾನುವಾರ ಸಂಜೆ ಆಟೋ ರಿಕ್ಷಾದಲ್ಲಿ ಬಂದು ಕುಂದಾಪುರ ಹೇರಿಕುದ್ರು ಸೇತುವೆಯಲ್ಲಿ ಇಳಿದಿದ್ದರು. ತನ್ನ ಆಧಾರ್‌ಕಾರ್ಡ್, ಪರ್ಸ್, ಚಪ್ಪಲಿಯನ್ನು ಸೇತುವೆ ದಂಡೆ ಮೇಲಿರಿಸಿ ಮೇಲಿನಿಂದ ಪಂಚಗಂಗಾವಳಿ ನದಿಗೆ ಧುಮುಕಿದ್ದರು. ಇದನ್ನು ನೋಡಿದ ಸ್ಥಳೀಯರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು. […]