ಭಾರತದ ಪರಂಪರೆ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ವಿವೇಕಾನಂದರು: ಸುಪ್ರಸಾದ್ ಬೈಕಾಡಿ
ಉಡುಪಿ: ಸ್ವಾಮಿ ವಿವೇಕಾನಂದರು ಭಾರತದ ಆಚಾರ–ವಿಚಾರ, ಪರಂಪರೆಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ತನ್ನ ಅಲ್ಪಾವಧಿಯ ಜೀವಿತಾವಧಿಯಲ್ಲಿ ಜಗತ್ತು ಸ್ವೀಕಾರ ಮಾಡಬಹುದಾದ ಆದರ್ಶ, ಚಿಂತನೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ವಕೀಲ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವುಗಳಿಗೆ ಸ್ಪಂದಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. […]
ಮಂಗಳೂರು: ಸುದರ್ಶನ್ ಎಂ. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಸುದರ್ಶನ ಎಂ. ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯು ರಾಜ್ಯ ಚುನಾವಣಾ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ.ಉದಯ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಜಿಲ್ಲೆಯ ನಿಕಟ ಪೂರ್ವ ಅಧ್ಯಕ್ಷರು ಶಾಸಕರುಗಳು, ವಿಭಾಗ ಪ್ರಭಾರಿ, ಸಹ ಪ್ರಭಾರಿ, ಚುನಾವಣಾ ವೀಕ್ಷಕರು, ನೂತನ ಮಂಡಲ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಆಳ್ವಾಸ್ ವೃತ್ತಿಪರ ವಾಣಿಜ್ಯ ವಿಭಾಗದಿಂದ ರಿಸರ್ಚ್ ಕ್ಲಬ್ ಉದ್ಘಾಟನೆ
ಮೂಡುಬಿದಿರೆ: “ಕ್ರಮಬದ್ಧವಾದ ಸಂಶೋಧನೆಯಿಂದ ಗುಣಮಟ್ಟದ ವಿದ್ಯಾರ್ಥಿಗಳನ್ನು ತಯಾರಿಸಲು ಸಾಧ್ಯ. ಯಾವಾಗ ಒಬ್ಬ ವಿದ್ಯಾರ್ಥಿ ತನ್ನ ಮುಂದಿನ ಭವಿ?ಕ್ಕಾಗಿ ಉತ್ತಮ ಯೋಚನೆ, ಯೋಜನೆ ಮತ್ತು ಉದ್ದೇಶಗಳನ್ನು ಹೊಂದಿರುತ್ತಾನೋ ಅಂತಹವರಿಗೆ ಸಂಶೋಧನಾ ಕ್ಷೇತ್ರ ವಿಫುಲ ಅವಕಾಶಗಳನ್ನು ಒದಗಿಸುತ್ತದೆ” ಎಂದು ಆಳ್ವಾಸ್ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಸುಕೇಶ್ ಹೇಳಿದರು. ಆಳ್ವಾಸ್ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್ನಲ್ಲಿ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದಿಂದ ಪ್ರಾರಂಬಿಸಲಾದ “ರಿಸರ್ಚ್ ಕ್ಲಬ್” ನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧ ವಲಯಗಳಲ್ಲಿ ಸಂಶೋಧನೆ ನಡೆಸಲು ಇರುವ ಅವಕಾಶ, […]
ವಿವೇಕಾನಂದರು ಯುವ ಜನತೆಯ ಪ್ರತಿನಿಧಿ- ರಘುಪತಿ ಭಟ್
ಉಡುಪಿ :ಸ್ವಾಮಿ ವಿವೇಕಾನಂದರು ಯುವಜನತೆಯ ಪ್ರತಿನಿಧಿ , ರಾಷ್ಟ್ರದ ಯುವ ಜನತೆ ಇಂದಿಗೂ ವಿವೇಕಾನಂದರ ಸಂದೇಶಗಳನ್ನು ತಮ್ಮ ಆದರ್ಶಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಭಾನುವಾರ, ಅಜ್ಜರಕಾಡು ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ […]
ಹೆಮ್ಮಾಡಿ ಚತುಷ್ಪಥ ಅವೈಜ್ಙಾನಿಕ ಕಾಮಗಾರಿ ವಿರುದ್ದ ಸಿಡಿದೆದ್ದ ಜನತೆ:ಮೊದಲ ಹಂತದ ಪ್ರತಿಭಟನೆ. ಹೆಮ್ಮಾಡಿ ಪಂಚಾಯಿತಿಗೆ ಮುತ್ತಿಗೆ.
ಕುಂದಾಪುರ: ಹೆಮ್ಮಾಡಿ ಪೇಟೆಯಿಂದ ಜಾಲಾಡಿ ತನಕ ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಯೂಟರ್ನ್ ಬೇಡಿಕೆಯ ಈಡೇರಿಕೆಗಾಗಿ ದಾರಿಗಾಗಿ ಧ್ವನಿ ಹೋರಾಟ ಸಮಿತಿ ರಚನೆಗೊಂಡಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಭಾನುವಾರ ಇಲ್ಲಿನ ಸಂತೋಷನಗರ ಬಸ್ ನಿಲ್ದಾಣ ಬಳಿಯ ಬಿಲ್ಲವ ಸಮಾಜ ಮಂದಿರ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಸಂಪೂರ್ಣ ಅವೈಜ್ಙಾನಿಕವಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡದೆ […]