ಆಳ್ವಾಸ್ ವೃತ್ತಿಪರ ವಾಣಿಜ್ಯ ವಿಭಾಗದಿಂದ ರಿಸರ್ಚ್ ಕ್ಲಬ್ ಉದ್ಘಾಟನೆ

ಮೂಡುಬಿದಿರೆ: “ಕ್ರಮಬದ್ಧವಾದ ಸಂಶೋಧನೆಯಿಂದ ಗುಣಮಟ್ಟದ ವಿದ್ಯಾರ್ಥಿಗಳನ್ನು ತಯಾರಿಸಲು ಸಾಧ್ಯ. ಯಾವಾಗ ಒಬ್ಬ ವಿದ್ಯಾರ್ಥಿ ತನ್ನ ಮುಂದಿನ ಭವಿ?ಕ್ಕಾಗಿ ಉತ್ತಮ ಯೋಚನೆ, ಯೋಜನೆ ಮತ್ತು ಉದ್ದೇಶಗಳನ್ನು ಹೊಂದಿರುತ್ತಾನೋ ಅಂತಹವರಿಗೆ ಸಂಶೋಧನಾ ಕ್ಷೇತ್ರ ವಿಫುಲ ಅವಕಾಶಗಳನ್ನು ಒದಗಿಸುತ್ತದೆ” ಎಂದು ಆಳ್ವಾಸ್ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಸುಕೇಶ್ ಹೇಳಿದರು.

ಆಳ್ವಾಸ್ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್‌ನಲ್ಲಿ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದಿಂದ ಪ್ರಾರಂಬಿಸಲಾದ “ರಿಸರ್ಚ್ ಕ್ಲಬ್” ನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧ ವಲಯಗಳಲ್ಲಿ ಸಂಶೋಧನೆ ನಡೆಸಲು ಇರುವ ಅವಕಾಶ, ವಿ?ಯದ ಆಯ್ಕೆ, ಸಂಶೋಧನೆಗೆ ಸಿಗುವ ಪ್ರೋತ್ಸಾಹ, ಸರಕಾರದಿಂದಲೂ ಸಿಗುವ ಸವಲತ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ “ಸಮಾಜದ ಆಗುಹೋಗುಗಳನ್ನು ಜಾಸ್ತಿ ಗಮನಿಸಿದ್ದಲ್ಲಿ ಸಂಶೋಧನೆಗೆ ತಕ್ಕುದಾದ ಹಲವು ಮಾಹಿತಿಗಳು ಕಾಣಸಿಗುತ್ತವೆ. ಸಾಮಾನ್ಯವಾಗಿರುವ ಸಣ್ಣ ವಿಷಯವನ್ನು ತೆಗೆದುಕೊಂಡು ಸಂಶೋಧನೆಯ ಹಾದಿಯಲ್ಲಿ ನಡೆಯುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣ ಮತ್ತು ಅಂತಹ ವಿದ್ಯಾರ್ಥಿಗಳು ಸದಾ ಕ್ರಿಯಾತ್ಮಕವಾಗಿರುತ್ತಾರೆ” ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಮಾತನಾಡಿ “ಸಂಶೋಧನೆಗೆ ಒಮ್ಮೆ ನಮ್ಮನ್ನು ನಾವು ತೊಡಗಿಸಿಕೊಂಡರೆ ಅದು ಹಾಗೆಯೇ ಆಕರ್ಷಿಸಿಡುತ್ತದೆ ಅಲ್ಲದೆ ಹೊಸ ಆಲೋಚನೆಗಳಿಗೆ ಅನುವು ಮಾಡಿಕೊಡುತ್ತದೆ ಎಂದರು.ವೃತ್ತಿಪರ ಕೋರ್ಸ್‌ನ ಸಂಯೋಜಕ ಅಶೋಕ್ ಕೆ. ಜಿ., ರಿಸರ್ಚ್ ಕ್ಲಬ್ ಸಂಯೋಜಕಿ ಅಪರ್ಣಾ ಕೆ., ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ಪೂರ್ತಿ ಮತ್ತು ಸ್ವಾತಿ ಪ್ರಾರ್ಥಿಸಿ, ಜೆನಿಶಾ ಸ್ವಾಗತಿಸಿದರು. ಸುಮನ್ ಸುಧೀರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ಮೈತ್ರಿ ಆರ್. ಶೆಟ್ಟಿ, ವಂದಿಸಿದರು.