ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ: ವಿವಿಧ ಗೋಷ್ಠಿಗಳಿಗೆ ಚಾಲನೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ತುಳು ಶಿವಳ್ಳಿ ಸಮಾಜ ಅಂದು-ಇಂದು-ಮುಂದು ಸಮಾವೇಶದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು,ಹಿಂದಿನ  ಹಿರಿಯರಿಂದ ಇಂದಿನ ಕಿರಿಯರವರೆಗಿನ ಆಹಾರ ಪದ್ದತಿ,ಜೀವನ ಪದ್ದತಿ,ಗುರು ಮಠಗಳ ನಡುವೆ ಇಟ್ಟುಕೊಂಡಿರುವ  ಸಂಭಂದಗಳ ರೀತಿ, ಸಮಾಜದಲ್ಲಿ ತೊಡಗಿಸಿ ಕೊಳ್ಳುವ ರೀತಿಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಉಡುಪಿಯ ಶ್ರೀಪತಿ ತಂತ್ರಿ,ರವೀಶ್ ತಂತ್ರಿ ಕುಂಟಾರ್,ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ,ತು.ಶಿ.ಮ.ಮ ದ ಅಧ್ಯಕ್ಷರಾದ ಅರವಿಂದ ಆಚಾರ್,ಉಜಿರೆಯ ಡಾ.ದಯಾಕರ್ ಎಂ.ಎಂ, ಪುತ್ತೂರಿನ […]

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ:ಮಹಿಳಾ ಸಮಾವೇಶ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಮಹಿಳಾ ಸಮಾವೇಶ ನಡೆಯಿತು. ಅಧ್ಯಕ್ಷತೆ ವಹಿಸಿದ ಶೋಭಾ ಉಪಾಧ್ಯಾಯರು, ನಮ್ಮ ಸಮಾಜ ಉತ್ತಮವಾಗಿ ನಡೆಯಲು ಮಹಿಳೆಯರ ಪಾಲು ದೊಡ್ಡದು. ತಾಯಿಯೇ ಮೊದಲ ಪಾಠ ಶಾಲೆ ಎಂಬಂತೆ ಚಿಕ್ಕ ಮಕ್ಕಳು ತಾಯಿಯ ಮಾತನ್ನು ಕೇಳಿ ಅದನ್ನು ಅಳವಡಿಸಿಕೊಳ್ಳುತ್ತವೆ.ಸಣ್ಣ ಮಕ್ಕಳಲ್ಲಿಯೇ ಉತ್ತಮ ಸಂಸ್ಕಾರ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಇಂತಹ ಸಮಾವೇಶದಿಂದ ನಮ್ಮ ಸಮಾಜಕ್ಕೆ ಹಲವಾರು ಪ್ರಯೋಜನ ಸಿಗುವುದರಿಂದ ಮುಂದೆಯೂ ಸಮ್ಮೇಳನಗಳು ನಡೆಯಲಿ ಎಂದರು. […]

ಫಾಸ್ಟ್ ಟ್ಯಾಗ್ ಗೊಂದಲ: ಸಾಸ್ತಾನ ಟೋಲ್‌ನಲ್ಲಿ ಟ್ರಾಫಿಕ್ ಜಾಮ್: ಪ್ರಯಾಣಿಕರು-ಟೋಲ್ ಸಿಬ್ಬಂದಿಗಳ ಬಿರುಸಿನ ವಾಕ್ಸಮರ

ಕುಂದಾಪುರ: ಡಿ.೧೫ರಿಂದ ಟೋಲ್‌ನಲ್ಲಿ ನಗದು ಪಾವತಿಯ ಬದಲು ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಪಾವತಿಯ ವ್ಯವಸ್ಥೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದ ಘಟನೆ ಭಾನುವಾರ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಡೆದಿದೆ ಇದರಿಂದಾಗಿ ಭಾನುವಾರ ಬೆಳಗ್ಗೆ ಸಾಸ್ತಾನ ಟೋಲ್‌ನಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿಗಳ ಬಿರುಸಿನ ವಾಕ್ಸಮರ ನಡೆಯಿತು. ಸ್ಥಳೀಯರಿಗೆ ಲೇನ್ ಒಂದರಲ್ಲಿ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸಿದ್ದರೂ ಮಾಹಿತಿಯ ಕೊರತೆಯಿಂದಾಗಿ ಎಲ್ಲ ವಾಹನಗಳು ಒಂದೇ ಲೇನ್‌ನಲ್ಲಿ ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಯಿತು. ಕೆಲವು ವಾಹನ […]

ಕಂಬಳದಲ್ಲಿ ಅಪರೂಪದ ಐತಿಹಾಸಿಕ ಸ್ಪರ್ಧೆ: ಸೆಮಿಫೈನಲ್‌ನಲ್ಲಿ ಮೂರು ಬಾರೀ ಸಮಾ-ಸಮಾ

ಕಾರ್ಕಳ: ಕಾರ್ಕಳದ ಬಾರಾಡಿ ಬೀಡು ಸೂರ್ಯ ಚಂದ್ರ ಜೋಡುಕರೆ ಕಂಬಳ ಡಿಸೆಂಬರ್ 14 ಮತ್ತು 15ರಂದು ನಡೆದಿದ್ದು, ಈ ಜೋಡುಕರೆ ಕಂಬಳ ಅಪರೂಪದ ಐತಿಹಾಸಿಕ ಸ್ಪರ್ಧೆಯೊಂದಕ್ಕೆ ಸಾಕ್ಷಿಯಾಗಿದೆ. ಸುಮಾರು 156 ಜೋಡಿ ಕೋಣಗಳು ಭಾಗವಹಿಸಿದ್ದ, ಕಂಬಳದಲ್ಲಿ ಆರು ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು. ಎಲ್ಲ ವಿಭಾಗಗಳು ಮಾಮೂಲಿಯಂತೆ ನಡೆದರೆ ಅಡ್ಡ ಹಲಗೆ ವಿಭಾಗದಲ್ಲಿ ಕೋಣಗಳ ಓಟದ ಜಿದ್ದು ಐತಿಹಾಸಿಕ ದಾಖಲೆ ನಿರ್ಮಾಣವಾಯಿತು. ಅಡ್ಡಹಲಗೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಂಕರ್ಜಾಲ್ ದಿ. ಭಿರ್ಮಣ್ಣ ಶೆಟ್ಟಿ  ಮತ್ತು ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು […]