ನಿಟ್ಟೆ: ಇಂಟರ್‌ನ್ಯಾಷನಲ್ ಫ್ರೆಂಡ್ಶಿಪ್ ಸೀರೀಸ್’: ಜಿಂಬಾಬ್ವೆ ತಂಡ ಚ್ಯಾಂಪಿಯನ್

ಕಾರ್ಕಳ: “ಮಾತೃಭೂಮಿಯ ಬಗೆಗೆ ನಮ್ಮಲ್ಲಿ ಪ್ರೀತಿ ಹಾಗೂ ಹೆಮ್ಮೆಯ ಮನೋಭಾವವಿರಬೇಕು. ಯಾವುದೇ ಸ್ಪರ್ಧೆಯಾದರೂ ಸೋಲು, ಗೆಲುವು ಸಾಮಾನ್ಯ. ಕ್ರೀಡಾಪಟುಗಳು ತಮ್ಮ ರಾಜ್ಯ/ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವೆನು ಎಂಬ ಚಿಂತನೆಯೊಂದಿಗೆ ಜವಾಬ್ದಾರಿಯುತ ಆಟವಾಡಬೇಕು” ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಡಿ.೯ ರಿಂದ ೧೨ರವರೆಗೆ ಕರಾವಳಿ ಕ್ರಿಕೆಟ್ ಅಕಾಡೆಮಿಯು ಸಂಘಟಿಸಿದ ೧೮ ವರ್ಷದ ಕೆಳಗಿನ ವಯೋಮಿತಿಯ ನಿಟ್ಟೆ ಇಂಟರ್‌ನ್ಯಾಷನಲ್ ಫ್ರೆಂಡ್ಶಿಪ್ ಸೀರೀಸ್’ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. […]

ಕುಂದಾಪುರ:ಶಾಲಾ ಶಿಕ್ಷಕಿಯ ಮೇಲೆ ದೌರ್ಜನ್ಯ ಖಂಡಿಸಿ ಶಿಕ್ಷಕರ ಪ್ರತಿಭಟನೆ

ಕುಂದಾಪುರ: ಬೈಂದೂರು ವಲಯದ ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಕರ್ತವ್ಯ ನಿರತ ಶಿಕ್ಷಕಿಗೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಿದರು. ಶನಿವಾರ ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿ ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಬಂದ ಶಿಕ್ಷಕರು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ಮನವಿ ನೀಡಿ ಆರೋಪಿಯನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು […]

ಕುಂದಾಪುರ: ರಾ.ಹೆ ಅವೈಜ್ಞಾನಿಕ ಕಾಮಗಾರಿಯ ವಿರುದ್ದ ಕಾಂಗ್ರೆಸ್‌ನಿಂದ ಬೃಹತ್ ಪಾದಯಾತ್ರೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ, ಅಗತ್ಯವಿರುವೆಡೆ ಸರ್ವೀಸ್ ರಸ್ತೆ ನಿರ್ಮಾಣ ಮೊದಲಾದ ಸೌಕರ್ಯ ನೀಡಿದ ಬಳಿಕವೇ ಟೋಲ್ ಸಂಗ್ರಹ ಮಾಡಬೇಕೆಂದು ಆಗ್ರಹಿಸಿ ಬೈಂದೂರು-ವಂಡ್ಸೆ ಬ್ಲಾಕ್ ಕಾಂಗ್ರೆಸ್ ಶನಿವಾರದಂದು ಮರವಂತೆಯಿಂದ ಬೈಂದೂರಿನ ತನಕ ಬೃಹತ್ ಪಾದಯಾತ್ರೆ ನಡೆಸಿತು. ಮರವಂತೆ ಬಸ್ ನಿಲ್ದಾಣ ಬಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದರು. ಪಾದಯಾತ್ರೆಯು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಾಗಿ ಸುಮಾರು ೧೮ ಕಿ.ಮೀ ದೂರದ ಬೈಂದೂರು ಹೊಸ ಬಸ್ […]

ಬ್ರಾಹ್ಮಣರು ಜ್ಞಾನ ಸಂಪಾದನೆಯ ಜತೆಗೆ ದೈಹಿಕ ಚೈತನ್ಯವನ್ನು ಪಡೆಯಬೇಕು :ಡಾ. ಪಿ.ಎಸ್‌. ಯಡಪಡಿತ್ತಾಯ

ಉಡುಪಿ: ಬ್ರಾಹ್ಮಣರು ಜ್ಞಾನ ಸಂಪಾದನೆಯ ಜತೆಗೆ ದೈಹಿಕ ಚೈತನ್ಯವನ್ನು ಪಡೆಯಬೇಕು. ಕ್ಷತ್ರೀಯ, ವೈಶ್ಯ,ಶೂದ್ರರನ್ನೂ ಪ್ರೀತಿ, ವಿಶ್ವಾಸದಿಂದ ಜತೆಯಾಗಿ ಕೊಂಡೊಯ್ಯುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಸಮಾಜ ತಿದ್ದುವ ಕೆಲಸ ಬ್ರಾಹ್ಮಣರು ಮಾಡಬೇಕು  ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್‌. ಯಡಪಡಿತ್ತಾಯ ಹೇಳಿದರು. ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಅಂಗವಾಗಿ ರಾಜಾಂಗಣದಲ್ಲಿ ಶನಿವಾರ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಬ್ರಾಹ್ಮಣರು ಸಮಾಜದ ಎಲ್ಲರನ್ನು ಅರ್ಥೈಸಿಕೊಳ್ಳುವ ಮೂಲಕ ಗೌರವ ಸಂಪಾದನೆ ಮಾಡಬೇಕು. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ […]

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಉಡುಪಿ : ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಉದ್ಘಾಟನೆಯನ್ನು ಪೇಜಾವರ ಮಠಾಧೀಶರಾದ  ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನೆರವೇರಿಸಿದರು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿ, ತುಳು ಎಂಬ ಶಬ್ದವೇ ಬಹಳಷ್ಟು ಸುಂದರವಾಗಿದೆ. ತುಂಬಿ ತುಲುಕುವ ಎಂಬ ಅರ್ಥ ತುಳುವಿಗಿದೆ. ಒಂದು ಸಮಾಜ ನಿರ್ಮಾಣ ಆಗಬೇಕಾದರೆ ಭಾಷೆ, ದೇವರು, ಪ್ರಾಂತ್ಯ ಹಾಗೂ ಸಮಾಜ ಎಂಬ ಅಂಶಗಳು ಮುಖ್ಯ. ತುಳು ಶಿವಳ್ಳಿ ಬ್ರಾಹ್ಮಣ […]