ಶ್ರೀ ಕೃಷ್ಣ ಮಠದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಚೌಕಿ ಭೋಜನ ಶಾಲೆಯ ಹತ್ತಿರ ಕುಡಿಯುವ ಶುದ್ಧ ನೀರಿನ ಘಟಕ ಹಾಗೂ ಕೈ ತೊಳೆಯಲು ನೀರಿನ ಕೊಳವೆ ಮತ್ತು ಸ್ಟೀಲಿನ ಬೆಸನನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು. ಈ ಕಾಮಗಾರಿಯ ಪ್ರಾಯೋಜಕರಾದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ನಾಗರಾಜ ರಾವ್,ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ರವೀಂದ್ರ ರೈ.ಎಂ, ಬೆಂಗಳೂರಿನ ಉದ್ಯಮಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದು ಶ್ರೀಪಾದರು ಅವರಿಗೆ […]

ಭಾರತೀಯತೆ- ಪರಂಪರೆ ಉಳಿಯಬೇಕಾದರೆ ಸಂಸ್ಕೃತ ಅಧ್ಯಯನ ಅತ್ಯವಶ್ಯಕ: ಪೇಜಾವರ ಶ್ರೀ

ಉಡುಪಿ: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದರೆ ಸಂಸ್ಕೃತ ಭಾಷೆಯ ಅಧ್ಯಯನ ಅತ್ಯವಶ್ಯಕ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಸಂಸ್ಕೃತ ಕಾಲೇಜಿನ ನವೀಕೃತ ಕಟ್ಟಡವನ್ನು ಗುರುವಾರ ಉದ್ಘಾಟಿಸಿ, ಬಳಿಕ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಕೃತಿ ಇದ್ದರೆ ಸಾಕು, ಸಂಸ್ಕೃತ ಭಾಷೆಯ ಅವಶ್ಯಕತೆ ಇಲ್ಲವೆಂದು ಕೆಲವರು ವಾದಿಸುತ್ತಾರೆ. ಆದರೆ ಇದು ಹಾಲು ಬೇಕು. ನಮಗೆ ಲೋಟ ಬೇಡ ಎಂಬಂತಿದೆ. ಆದ್ದರಿಂದ ಲೋಟ ಇಲ್ಲದೆ ಹೇಗೆ ಹಾಲು ಕೊಡಲು ಸಾಧ್ಯವಿಲ್ಲವೋ, ಅದೇ ರೀತಿ […]

ಕುಂದಾಪುರ: ಬೋನಿಗೆ ಬಿತ್ತು ಹೆಣ್ಣು ಚಿರತೆ

ಕುಂದಾಪುರ : ಇಲ್ಲಿಗೆ ಸಮೀಪದ ತೆಕ್ಕಟ್ಟೆಯ ಮಾಲಾಡಿ ಎಂಬಲ್ಲಿನ ಖಾಸಗಿ ಮಾವಿನ ತೋಟದಲ್ಲಿ ಗುರುವಾರ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ಭಾರಿ ಗಾತ್ರದ ಹೆಣ್ಣು ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪರಿಸರದಲ್ಲಿ ಚಿರತೆ ಕಾಣಿಸುತ್ತಿದೆ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೋನನ್ನು ಇರಿಸಿ ಅದರಲ್ಲಿ ನಾಯಿಯನ್ನು ಕಟ್ಟಿ ಹಾಕಿ ಚಿರತೆಯನ್ನು ಬೋನಿನಲ್ಲಿ ಬಂಧಿಸುವ ಕಾರ್ಯತಂತ್ರ ರೂಪಿಸಿದ್ದರು. ಸ್ಥಳೀಯರ ಸಹಕಾರದಿಂದ ನಡೆಯುತ್ತಿದ್ದ ಆಪರೇಶನ್‌ ಚಿತಾ ಕಾರ್ಯಚರಣೆ ಬುಧವಾರ ತಡ ರಾತ್ರಿ ಯಶಸ್ವಿಯಾಗಿತ್ತು. […]

ಕಾಂಗ್ರೆಸ್ ಮುಖಂಡ ಕಮಲಾಕ್ಷ  ಪೂಜಾರಿ ನಿಧನ

ಮಣಿಪಾಲ: ಮಣಿಪಾಲ ಸರಳೇಬೆಟ್ಟುವಿನ ವಿಜಯನಗರ ನಿವಾಸಿ, ಕಾಂಗ್ರೆಸ್ ಮುಖಂಡ ಕಮಲಾಕ್ಷ ಪೂಜಾರಿ(60) ಹೃದಯಾಘಾತದಿಂದ ಡಿ.12ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ರಿಕ್ಷಾಚಾಲಕರಾಗಿದ್ದು, ಇಂದು ಶಾಲಾ ಮಕ್ಕಳನ್ನು ರಿಕ್ಷಾದಲ್ಲಿ ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಬಿಟ್ಟು, ಅಲ್ಲಿಂದ ಬಾಡಿಗೆಗೆ ಹೊರಡುವ ವೇಳೆ ರಿಕ್ಷಾದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಸರಳೇಬೆಟ್ಟು ವಾರ್ಡಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಇವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವರಾದ […]

ಉಚಿತ ಕೋಳಿ ಸಾಕಾಣಿಕೆ-ಹೈನುಗಾರಿಕೆ ಮಾಡಬಯಸುವವರಿಗೆ ಇಲ್ಲಿದೆ ಅವಕಾಶ

ಉಡುಪಿ: ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟೆ ಇವರು ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರವನ್ನು ಬಾಗಲಕೋಟೆಯಲ್ಲಿ ಜನವರಿ ತಿಂಗಳಲ್ಲಿ ಏರ್ಪಡಿಸಿದ್ದಾರೆ. ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ಕೇಂದ್ರದ ವಿಳಾಸ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103, ದೂ.ಸಂಖ್ಯೆ: 08354-244028/ 244048. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ 18 […]