ತಂತ್ರಜ್ಞಾನವು ಮಕ್ಕಳನ್ನು ಮನೆಯಲ್ಲೆ ಕುಳಿತುಕೊಳ್ಳುವಂತೆ ಮಾಡುತ್ತಿದೆ: ವಿನಯ ಹೆಗ್ಡೆ

ನಿಟ್ಟೆ:ಇಂದು ಮಕ್ಕಳಲ್ಲಿ ಕ್ರೀಡೆಯ ಬಗೆಗೆ ಆಸಕ್ತಿ ಕುಂಟಿತಗೊಳ್ಳುತ್ತಿದೆ. ತಂತ್ರಜ್ಞಾನವು ಮಕ್ಕಳನ್ನು ಮನೆಯಲ್ಲೆ ಕುಳಿತುಕೊಳ್ಳುವಂತೆ ಮಾಡುತ್ತಿದೆ’ ಎಂದು ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷ  ವಿನಯ ಹೆಗ್ಡೆ ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ನಿಟ್ಟೆ ಆಯೋಜಿಸಿದ್ದ ರೋಟರಿ ಜಿಲ್ಲೆ ೩೧೮೨ನ ಜಿಲ್ಲಾ ಮಟ್ಟದ ೨ ದಿನಗಳ ಕ್ರೀಡಾಕೂಟವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಜಿಲ್ಲಾ ಗವನ೯ರ್  ಪಿ.ಎಚ್.ಎಫ್. ಬಿ.ಎನ್.ರಮೇಶ್, ನಿಯೋಜಿತ ಗವನ೯ರ್ ರಾಜಾರಾಮ್ ಭಟ್, ಕ್ರೀಡಾಕೂಟದ ಉಪನಿದೇ೯ಶಕ ಸೂಯ೯ಕಾಂತ್ ಶೆಟ್ಟಿ, ಝೋನ್ ೫ ರ ಅಸಿಸ್ಟೆಂಟ್ ಗವನ೯ರ್ ಗಣೇಶ್ ಆಚಾಯ೯, […]

ಶ್ರೀ ಕೃಷ್ಣ ಮಠದಲ್ಲಿ ವಿಶೇಷ ರಥೋತ್ಸವ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಬೆಳಿಗ್ಗೆ  ರಥಬೀದಿಯಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನಿಟ್ಟು  ವಿಶೇಷ ರಥೋತ್ಸವವು ನಡೆಯಿತು.ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀ ಪಾದರು ಪಾಲ್ಗೊಂಡಿದ್ದರು.

ಪೊದಾರ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಉಡುಪಿ: ಪೊದಾರ್ ಇಂಟರ್‌ನ್ಯಾಷನಲ್ ಶಾಲೆ ,ಉಡುಪಿ ಇಲ್ಲಿ ನ.30 ರಂದು ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ  ಭಾಗವಹಿಸಿದ ಗಿರೀಶ್ ಕುಮಾರ್ ಪ್ರಾಂಶುಪಾಲರು ಪೊದಾರ್ ಇಂಟರ್‌ನ್ಯಾಷನಲ್ ಶಾಲೆ ಮಂಗಳೂರು ಮಾತನಾಡಿ,ನಮಗೆ ವಿದ್ಯೆಯಂತೆ ಕ್ರೀಡೆಗಳು ಕೂಡ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮಕ್ಕಳು ಉತ್ತಮ ಆರೋಗ್ಯಕ್ಕಾಗಿ ವ್ಯಾಯಮ, ವಿವಿಧ ಕ್ರೀಡೆಗಳನ್ನು ಆಡುವ ಹವ್ಯಾಸ ಬೆಳೆಸಿಕೊಳ್ಳಬೇಕು.ಪೊದಾರ್‌ನಲ್ಲಿ ದೈಹಿಕ ಶಿಕ್ಷಣವು ವೈಜ್ಞಾನಿಕ ದೃಷ್ಟಿಕೋನದಿಂದ ರೂಪಿಸಲ್ಪಟ್ಟಿದೆ ಎಂದರು. ಗಿರೀಶ್ ಮೆನನ್ ನರಶಾಸ್ತ್ರಜ್ಞರು ಕೆ.ಎಮ್.ಸಿ. ಮಣಿಪಾಲ  ಕ್ರೀಡಾಕ್ಷೇತದಲ್ಲಿ ಸಾಧನೆ ಮಾಡಿದಂತಹ ಸಾಧಕರ ಉದಾಹರಣೆಗಳನ್ನು ನೀಡಿ […]

ಉಡುಪಿ; ಕಲ್ಲಂಗಡಿ ಬೆಳೆಯ ರೋಗದ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ

ಉಡುಪಿ: ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಕುಂದಾಪುರ, ರೈತಸಂಪರ್ಕ ಕೇಂದ್ರ ಬೈಂದೂರು ಹಾಗೂ ಖಂಬದ ಕೋಣೆ, ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಹಾಗೂ ಆತ್ಮ ಯೋಜನೆಯಡಿಯಲ್ಲಿ, ಉಪ್ಪುಂದ ರೈತಸಿರಿ ಸಭಾಭವನದಲ್ಲಿ ಕಲ್ಲಂಗಡಿ ಬೇಸಾಯ ತರಬೇತಿ ಹಾಗೂ ಕಲ್ಲಂಗಡಿ ಬೆಳೆಯಲ್ಲಿ ರಸಹೀರುವ ಕೀಟಗಳು ಮತ್ತು ಸುಳಿ ನಂಜುರೋಗದ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ನಡೆಯಿತು. ಕೇಂದ್ರದ ವಿಜ್ಞಾನಿ ಡಾ. ಸಚಿನ್.ಯು.ಎಸ್., ಕಲ್ಲಂಗಡಿ ಬೆಳೆಯ ಬೇಸಾಯ ಕ್ರಮದ ಸಂಪೂರ್ಣ ಮಾಹಿತಿಯೊಂದಿಗೆ, ಅದರಲ್ಲಿ […]

ಬೆಳ್ತಂಗಡಿ: ಶಾಲಾ ಬಾವಿ ನೀರು‌ ಕುಡಿದು ಎಂಟು ಮಕ್ಕಳು ಅಸ್ವಸ್ಥ

ಮಂಗಳೂರು: ಶಾಲೆಯ ಬಾವಿ ನೀರು ಕುಡಿದು ಎಂಟು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಪೆರ್ಲ ಸರಕಾರಿ ಶಾಲೆಯಲ್ಲಿ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ಚೇತನ್ ಕುಮಾರ್, 8ನೇ ತರಗತಿ ವಿದ್ಯಾರ್ಥಿಗಳಾದ ಸುದೀಶ್, ಯೋಗೀಶ್, ರಾಧಾಕೃಷ್ಣ, 6ನೇ ತರಗತಿಗಳಾದ ವಿದ್ಯಾರ್ಥಿ ಸುದೀಪ್, ರಾಜೇಶ್, ಮೋನಿಸ್ ಹಾಗೂ ಶ್ರವಣ್, ಅಸ್ವಸ್ಥಗೊಂಡವರು. ಶಾಲಾ ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ನೀರು ಹಾಕುತ್ತಿದ್ದರು. ಈ ಸಮಯ ಎಂಟು ವಿದ್ಯಾರ್ಥಿಗಳು ಅದೇ […]