ತಂತ್ರಜ್ಞಾನವು ಮಕ್ಕಳನ್ನು ಮನೆಯಲ್ಲೆ ಕುಳಿತುಕೊಳ್ಳುವಂತೆ ಮಾಡುತ್ತಿದೆ: ವಿನಯ ಹೆಗ್ಡೆ

ನಿಟ್ಟೆ:ಇಂದು ಮಕ್ಕಳಲ್ಲಿ ಕ್ರೀಡೆಯ ಬಗೆಗೆ ಆಸಕ್ತಿ ಕುಂಟಿತಗೊಳ್ಳುತ್ತಿದೆ. ತಂತ್ರಜ್ಞಾನವು ಮಕ್ಕಳನ್ನು ಮನೆಯಲ್ಲೆ ಕುಳಿತುಕೊಳ್ಳುವಂತೆ ಮಾಡುತ್ತಿದೆ’ ಎಂದು ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷ  ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ನಿಟ್ಟೆ ಆಯೋಜಿಸಿದ್ದ ರೋಟರಿ ಜಿಲ್ಲೆ ೩೧೮೨ನ ಜಿಲ್ಲಾ ಮಟ್ಟದ ೨ ದಿನಗಳ ಕ್ರೀಡಾಕೂಟವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಜಿಲ್ಲಾ ಗವನ೯ರ್  ಪಿ.ಎಚ್.ಎಫ್. ಬಿ.ಎನ್.ರಮೇಶ್, ನಿಯೋಜಿತ ಗವನ೯ರ್ ರಾಜಾರಾಮ್ ಭಟ್, ಕ್ರೀಡಾಕೂಟದ ಉಪನಿದೇ೯ಶಕ ಸೂಯ೯ಕಾಂತ್ ಶೆಟ್ಟಿ, ಝೋನ್ ೫ ರ ಅಸಿಸ್ಟೆಂಟ್ ಗವನ೯ರ್ ಗಣೇಶ್ ಆಚಾಯ೯, ಝೋನ್ ೫ ರ ಝೋನಲ್ ಲೆಫ್ಟಿನೆಂಟ್ ಸತೀಶ್ ಕುಮಾರ್ ಕೆಮ್ಮಣ್ಣು, ಕ್ರೀಡಾಕೂಟದ ಸಂಘಟನಾ ಕಾಯ೯ದಶಿ೯ ಯೋಗೀಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ನಿಟ್ಟೆ ಅಧ್ಯಕ್ಷೆ ಡಾ. ವೀಣಾದೇವಿ ಶಸ್ತ್ರಿಮಠ್ ಸ್ವಾಗತಿಸಿದರು. ಕ್ರೀಡಾಕೂಟದ ನಿದೇ೯ಶಕ ಪಿ.ಎಚ್.ಎಫ್. ತುಕಾರಾಂ ಶೆಟ್ಟಿ ಪ್ರಾಸ್ತಾವಿಸಿದರು. ಕ್ರೀಡಾಕೂಟದ ಸಂಘಟನಾ ಅಧ್ಯಕ್ಷ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ವಂದಿಸಿದರು. ಅರವಿಂದ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಈ ಎರಡು ದಿನಗಳ ಕ್ರೀಡಾಕೂಟದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್, ಚೆಸ್, ಕೇರಮ್ ಸೇರಿದಂತೆ 15೦ ಸ್ಪರ್ಧೆಗಳು ನಡೆದವು.