ಉಡುಪಿ; ಕಲ್ಲಂಗಡಿ ಬೆಳೆಯ ರೋಗದ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ

ಉಡುಪಿ: ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಕುಂದಾಪುರ, ರೈತಸಂಪರ್ಕ ಕೇಂದ್ರ ಬೈಂದೂರು ಹಾಗೂ ಖಂಬದ ಕೋಣೆ, ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಹಾಗೂ ಆತ್ಮ ಯೋಜನೆಯಡಿಯಲ್ಲಿ, ಉಪ್ಪುಂದ ರೈತಸಿರಿ ಸಭಾಭವನದಲ್ಲಿ ಕಲ್ಲಂಗಡಿ ಬೇಸಾಯ ತರಬೇತಿ ಹಾಗೂ ಕಲ್ಲಂಗಡಿ ಬೆಳೆಯಲ್ಲಿ ರಸಹೀರುವ ಕೀಟಗಳು ಮತ್ತು ಸುಳಿ ನಂಜುರೋಗದ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ನಡೆಯಿತು.

ಕೇಂದ್ರದ ವಿಜ್ಞಾನಿ ಡಾ. ಸಚಿನ್.ಯು.ಎಸ್., ಕಲ್ಲಂಗಡಿ ಬೆಳೆಯ ಬೇಸಾಯ ಕ್ರಮದ ಸಂಪೂರ್ಣ ಮಾಹಿತಿಯೊಂದಿಗೆ, ಅದರಲ್ಲಿ ವಿವಿಧ ಜೈವಿಕ ಗೊಬ್ಬರಗಳ ಬಳಕೆ, ಕೀಟ ಮತ್ತು ರೋಗದ ಹತೋಟಿಗಾಗಿ ವಿವಿಧ ಬಲೆಗಳ, ಜೊತೆಗೆ ವಿವಿಧ ಔಷಧಿಗಳ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.