ಕಾರ್ಕಳ: ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ

ಕಾರ್ಕಳ: ಶ್ರಿ ಶಿವಾನಂದ ಸರಸ್ವತಿ ಸ್ವಾಮೀಜಿ ಯವರ ಬೆಳ್ಳಿ ಹಬ್ಬದ ಪ್ರಯುಕ್ತ ದಿಗ್ವಿಜಯ ಮಹೋತ್ಸವವು ಕಾರ್ಕಳದ ಅನಂತ ಶಯನದಿಂದ ಕಾರ್ಕಳ ಬಸ್ ನಿಲ್ದಾಣ ವೆಂಕಟರಮಣ ದೇವಾಲಯ ಬಳಿಯಿಂದ ಜೊಡುರಸ್ತೆ ಹಿರ್ಗಾನ ದತ್ತ ಸಾಗಿ ನೆಲ್ಲಿಕಟ್ಟೆಯ ಮೂಲಕ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕಂದಿಲು ನೃತ್ಯ , ಡೊಳ್ಳು ಕುಣಿತ, ಇಪ್ಪತ್ತೈದಕ್ಕು ಹೆಚ್ಚು ಭಜನಾ ಮಂಡಳಿಗಳು, ಸ್ತಬ್ದಚಿತ್ರಗಳು, ಸಾಗಿ ಬಂದವು. ಸರಿ ಸುಮಾರು ಐದು ಸಾವಿರ ರಕ್ಕು ಹೆಚ್ಚು ಭಕ್ತರು ಭಾಗವಹಿಸಿದ್ದರು.

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿ; ಮಹಿಳೆ ಸಾವು

ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಗರದ ಕುಂಟಿಕಾನ ಹೆದ್ದಾರಿಯ ಖಾಸಗಿ ಹೋಟೆಲ್ ಸಮೀಪ ಬುಧವಾರ ನಡೆದಿದೆ. ಕಾವೂರು ನಿವಾಸಿ ಪ್ರಿಯಾ ಸುವರ್ಣ (42) ಮೃತರು ಎಂದು ಗುರುತಿಸಲಾಗಿದೆ. ಅವರು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಕೆಪಿಟಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅವರ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ರಸ್ತೆಗೆಸೆಯಲ್ಪಟ್ಟ ಪ್ರಿಯಾ ಸುವರ್ಣ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ತೀವ್ರ […]

ಕಂಕನಾಡಿ ವಾರ್ಡ್ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ: ಶಾಸಕ ಕಾಮತ್

ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ಕಂಕನಾಡಿ ವಾರ್ಡಿಗೆ 1.37.80 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ. ಕಳೆದ ಕೆಲ‌ ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಗೊಂಡ ನಂತರ ಸಾರ್ವಜನಿಕರ ಕೋರಿಕೆಯ ಮೇರೆಗೆ ಲೋಕೋಪಯೋಗಿ ಇಲಾಖೆ, ಕೇಂದ್ರ ಸರಕಾರದ 14ನೇ ಹಣಕಾಸು ಅನುದಾನ ವ್ಯವಸ್ಥೆ, ಮಹಾನಗರ ಪಾಲಿಕೆ ಸಾಮಾನ್ಯ ನಿಧಿ, ಮಳೆಹಾನಿ, ಎಸ್.ಎಫ್.ಸಿ ಮುಂತಾದ ವಿವಿಧ ಅನುದಾನಗಳನ್ನು ಜೋಡಿಸಿ ಅಳಪೆ ಮಠದ […]

ಸಂಸ್ಕೃತ ಅಧ್ಯಯನದಿಂದ ಸ್ಪಷ್ಟ ಉಚ್ಚಾರ ಸಾಧ್ಯ: ವಿಶ್ವಪ್ರಿಯ ಶ್ರೀ

ಉಡುಪಿ: ಸಂಸ್ಕೃತ ಅಧ್ಯಯನದಿಂದ ಸ್ಪಷ್ಟ ಉಚ್ಚಾರ ಹಾಗೂ ಶಬ್ದದ ನಿರ್ವಚನ ಸಾಧ್ಯ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ 2019–20ನೇ ಸಾಲಿನ ಸಂಸ್ಕೃತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ವಿದ್ವಾನ್‌ ಬಿ. ಗೋಪಾಲಾಚಾರ್‌ ಮಾತನಾಡಿ, ಕಲಿತ ವಿದ್ಯೆ ಪುಸ್ತಕದಲ್ಲಿ ಇರಬೇಕು. ವಿದ್ಯಾರ್ಥಿಗಳ ಯಶಸ್ಸು ಗುರುಗಳ ಅನುಗ್ರಹದಲ್ಲಿದೆ ಎಂದು ಹೇಳಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಮಾತನಾಡಿ, ಭಾರತೀಯ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ […]

ಕೋಟಿ–ಚೆನ್ನಯರ ಗರೋಡಿಗಳ ದರ್ಶನ; 100ಕ್ಕೂ ಹೆಚ್ಚು ಕಂತುಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರ

ಉಡುಪಿ: ಸ್ವಸ್ತಿಕ್‌ ಪ್ರೊಡಕ್ಷನ್‌ ಅರ್ಪಿಸುವ ‘ತುಳುನಾಡ ಬಂಗಾರ್‌ ಗರೋಡಿಲು’ ತುಳು ಸಾಕ್ಷ್ಯಚಿತ್ರ ಡಿ. 1ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ನಮ್ಮ ಕುಡ್ಲ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಾಕ್ಷ್ಯಚಿತ್ರದ ನಿರ್ದೇಶಕ ಸುರೇಂದ್ರ ಮೋಹನ್‌ ಅವರು, ಈ ಸಾಕ್ಷ್ಯಚಿತ್ರದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ–ಚೆನ್ನಯರ ಗರೋಡಿ ಕ್ಷೇತ್ರದ ದರ್ಶನ ಹಾಗೂ ಪರಿಚಯ ಮಾಡಲಾಗುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ, ಕಾಸರಗೋಡು, ಕುಂದಾಪುರ, ಮಡಿಕೇರಿ ಹಾಗೂ ಮುಂಬೈ ಸೇರಿದಂತೆ 242 ಗರೋಡಿಗಳನ್ನು […]