ಬಿಗ್ ಬ್ರೇಕಿಂಗ್: ಪತ್ನಿ, ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ಪತಿ

ಕುಂದಾಪುರ: ಪತ್ನಿ ಹಾಗೂ ತನ್ನಿಬ್ಬರು ಮಕ್ಕಳನ್ನು ಕೊಂದು ವ್ಯಕ್ತಿಯೋರ್ವ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಸಮೀಪದ ಸೂರ್ಗೋಳಿ ಎಂಬಲ್ಲಿ ನಡೆದಿದೆ. ಸೂರ್ಗೋಳಿ ನಿವಾಸಿ ಸೂರ್ಯನಾರಾಯಣ ಭಟ್ (50) ಮಾನಸಿ (40) ಮಕ್ಕಳಾದ ಸುಧೀಂದ್ರ (14) ಸುಧೀಶ್ (8) ಮೃತರು. ಅಡುಗೆ ಕೆಲಸ ಮಾಡುತ್ತಿದ್ಸ ಸೂರ್ಯನಾರಾಯಣ್ ಭಟ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷವಿಕ್ಕಿದ್ದಾನೆ. ಬಳಿಕ ತೀವ್ರ ಅಸ್ವಸ್ಥರಾದ ಮೂವರಿಗೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಮೂವರು ಪ್ರಾಣಬಿಟ್ಟ ಬಳಿಕ […]

ಇನ್ಮುಂದೆ ಪೊಲೀಸ್ ಇಲಾಖೆಯ ಕಣ್ಣಲ್ಲಿ ಸಿಸಿಟಿವಿ ದೃಶ್ಯಾವಳಿ ಸೇಫ್ : ಇದು “ಸೇಫ್ ಕುಂದಾಪುರ ಪ್ರಾಜೆಕ್ಟ್’

ಕುಂದಾಪುರ : ‘ಸೇಫ್ ಕುಂದಾಪುರ ಪ್ರಾಜೆಕ್ಟ್’ ಮೂಲಕ ಕುಂದಾಪುರ ಆಸು-ಪಾಸಿನ ಸಿಸಿ ಟಿವಿ ದೃಶ್ಯಾವಳಿಗಳ ಕಣ್ಗಾವಲು ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸ್‌ಇಲಾಖೆಯ ಹಿಡಿತದಲ್ಲಿಯೇ ನಡೆಯಲಿದೆ. ಪೊಲೀಸ್ ಇಲಾಖೆಗೆ ಸಿಸಿ ಟಿವಿ ದೃಶ್ಯಾವಳಿಗಳು ತನಿಖೆಯ ಹಂತದಲ್ಲಿ ಅತ್ಯಂತ ಉಪಯೋಗಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಟಿ ಜೇಮ್ಸ್‌ಹೇಳಿದರು. ಇಲ್ಲಿನ ಅಂಕದಕಟ್ಟೆಯ ಕೆಎಸ್‌ಪಿ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸೈನ್ ಇನ್ ಸೆಕ್ಯುರಿಟಿ […]

ಕುಂದಾಪುರ: ಬೋನಿಗೆ ಬಿತ್ತು ಚಿರತೆ, ನಿರಾಳರಾದ ಯಡ್ಯಾಡಿ ಮತ್ಯಾಡಿ ಗ್ರಾಮಸ್ಥರು

ಕುಂದಾಪುರ : ಯಡ್ಯಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ ಪರಿಸರದಲ್ಲಿ ಕಳೆದ ಹಲವಾರು ದಿನದಿಂದ ಪರಿಸರದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೀನಿನಲ್ಲಿ ಸೆರೆಯಾಗಿದೆ. ಗುಡ್ಡಟ್ಟು ಬಳಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಯಡ್ಯಾಡಿ ಮತ್ಯಾಡಿ ಪರಿಸರದಲ್ಲಿ ಚಿರತೆ ಉಪಟಳ ಹೆಚ್ಚಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ್ದೂ ಇದೆ. ಚಿರತೆ ಉಪಟಳ ಬಗ್ಗೆ ಪರಿಸರ ನಾಗರಿಕರು ಶಂಕರನಾರಾಯಣ […]

ಮರಳು ವಿತರಣೆಯಲ್ಲಿ ಅಕ್ರಮ ತಡೆಗೆ ಕ್ರಮ ಕೈಗೊಳ್ಳಿ- ಉಡುಪಿ ಜಿ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಉಡುಪಿ: ಮರಳು ಮಾರಾಟದಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಬಡವರಿಗೂ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತಾಗಬೇಕು ಎಂಬ ಉದ್ದೇಶದಿಂದ ಆರಂಭವಾಗಿರುವ ಮರಳು ವಿತರಣೆಯಲ್ಲಿ  ಅಕ್ರಮಗಳು ತಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ , ಬುಧವಾರ ಉಡುಪಿ ಜಿಲ್ಲಾ ಪಂಚಾಯತ್‍ನಲ್ಲಿ ಬುಧವಾರ, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಸಭೆಯಲ್ಲಿ ಮಾತನಾಡಿದ ಸದಸ್ಯ ಬಾಬುಶೆಟ್ಟಿ, ಕುಂದಾಪುರ ತಾಲೂಕಿನಲ್ಲಿ ಮರಳು ಸಾಗಾಣಿಕೆಯಲ್ಲಿ ಅಕ್ರಮಗಳು ನಡೆಯುತ್ತಿವೆ, ಸರಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮರಳು ಮಾರಾಟವಾಗುತ್ತಿದ್ದು, […]

ದೃಢ ಸಂಕಲ್ಪದಿಂದ ಮುನ್ನಡೆದರೆ ಭಗವಂತನ ಸಿದ್ಧಿ: ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ

ಕಾರ್ಕಳ: ಒಳ್ಳೆಯ ವಿಚಾರ ಶುಧ್ಧ ಅಂತಃಕರಣ ಮನಸ್ಸು ದೃಢ ಸಂಕಲ್ಪದಿಂದ ಮುನ್ನಡೆದರೆ ಭಗವಂತನ ಸಿಧ್ಧಿ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದ್ದಾರೆ. ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ ದ ಸ್ವಾಮೀಜಿ ಅವರ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಮನಸ್ಸು ವಿಚಲಿತವಾಗದೆ ಏಕಾಗ್ರತೆಯನ್ನು ಸ್ಥಾಪಿಸಿದಾಗ ಭಕ್ತಿಯಲ್ಲಿ ಶ್ರೇಷ್ಠ ಶ್ರೀಮಂತಿಕೆ ಹೊಂದಲು ಸಾಧ್ಯ, ದೇವರ ಮೇಲಿನ ಭಾವನೆಯೆ ಭಕ್ತಿ ಯ ಮೂಲವಾಗಿದ್ದು , ತಂದೆತಾಯಿ ಗುರುಗಳು ದೇವ […]