ರಿಕ್ಷಾದಲ್ಲಿ ಬಿಟ್ಟು ಹೋದ ಕ್ಯಾಮರಾ ಮರಳಿಸಿದ ಕೋಟೇಶ್ವರದ ರಿಕ್ಷಾ ಚಾಲಕ: ಸುದ್ದಿಯಾಯ್ತು ಕೋಟೇಶ್ವರ ರಿಕ್ಷಾ ಚಾಲಕರ ಪ್ರಾಮಾಣಿಕತೆ
ಕುಂದಾಪುರ : ಬೆಂಗಳೂರಿನಿಂದ ಕಾರ್ಯ ನಿಮಿತ್ತ ಕೋಟೇಶ್ವರಕ್ಕೆ ಬಂದಿಳಿದಿದ್ದ ಇಬ್ಬರು ಯುವಕರು ಬಿಟ್ಟು ಹೋಗಿದ್ದ ಬೆಲೆ ಬಾಳುವ ಕ್ಯಾಮರಾವನ್ನು ಅವರಿಗೆ ಹಿಂತಿರುಗಿಸುವ ಮೂಲಕ ಕೋಟೇಶ್ವರದ ಬಂಡಿಕಡು ಶ್ರೀಧರ ಎನ್ನುವ ರಿಕ್ಷಾ ಚಾಲಕರು ಪ್ರಾಮಾಣಿಕತೆ ತೋರಿದ್ದಾರೆ. ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಯುವಕರು ಕೋಟೇಶ್ವರಕ್ಕೆ ಬಂದಿದ್ದರು. ಕೋಟೇಶ್ವರದ ರಥಬೀದಿಯ ಚೇತನ ರಿಕ್ಷಾ ನಿಲ್ದಾಣದಲ್ಲಿನ ರಿಕ್ಷಾ ಚಾಲಕ ಬಂಡಿಕಡು ಶ್ರೀಧರ ಎನ್ನುವವರ ರಿಕ್ಷಾದಲ್ಲಿ ಪ್ರಯಾಣಿಸಿದ್ದ ಅವರು ರಿಕ್ಷಾದಿಂದ ಇಳಿಯುವಾಗ ತಮ್ಮ ಬೆಲೆಬಾಳುವ ಕ್ಯಾಮರಾವನ್ನು ರಿಕ್ಷಾದಲ್ಲೇ ಬಿಟ್ಟು ತೆರಳಿದ್ದರು. ರಿಕ್ಷಾದಿಂದ ಪ್ರಯಾಣಿಕರು ಇಳಿದು […]
ಭ್ರಷ್ಟಾಚಾರ ಮಟ್ಟಹಾಕಲು ಯುವ ಸಮುದಾಯ ಕಾರ್ಯಪ್ರವೃತ್ತರಾಗಬೇಕು: ಲೋ.ನ್ಯಾ. ವಿಶ್ವನಾಥ್
ಉಡುಪಿ: ಭ್ರಷ್ಟಾಚಾರ ಎನ್ನುವುದು ಇಂದು ಸಮಾಜದಲ್ಲಿ ಕ್ಯಾನ್ಸರ್ನಂತೆ ಹರಡಿಕೊಂಡಿದ್ದು, ಅದನ್ನು ತಳಮಟ್ಟದಿಂದಲೇ ಮಟ್ಟಹಾಕುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕಾರ್ಯಪ್ರವೃತ್ತವಾಗಬೇಕು ಎಂದು ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನೂತನ ಗ್ರಂಥಾಲಯ ‘ಜ್ಞಾನ ಸಿಂಧು’ ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ವಕೀಲ ವೃತ್ತಿ ಸಮಾಜದಲ್ಲಿ ಬಹಳ ಪ್ರಭಾವ ಬೀರುವ ವೃತ್ತಿಯಾಗಿದೆ. ಬಡವರು, ಕಾರ್ಮಿಕರಿಂದ ಹಿಡಿದು ಅಧಿಕಾರಿಗಳು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳವರೆಗೆ ಎಲ್ಲರೂ ಕೂಡ ವಕೀಲರ […]
ಭೂ ವಿವಾದದ ಕ್ರಿಮಿನಲ್ ಕೇಸ್ ದಾಖಲಿಸಿ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ: ಪಿ. ವಿಶ್ವನಾಥ್ ಶೆಟ್ಟಿ ಸೂಚನೆ
ಉಡುಪಿ: ಕುಂಜಿಬೆಟ್ಟು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ್ ಶೆಟ್ಟಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಲೋಕಾಯುಕ್ತರು, ವಸತಿ ನಿಲಯ ತುಂಬಾ ಹಳೆಯದಾಗಿದೆ. ಯಾಕೆ ಹೊಸ ಕಟ್ಟಡ ನಿರ್ಮಾಣ ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ವಸತಿ ನಿಲಯದ ಸುತ್ತ 7.88 ಎಕರೆ ಸರ್ಕಾರಿ ಜಾಗವಿದೆ. ಆದರೆ ಆ ಜಾಗ ವಿವಾದದಲ್ಲಿದ್ದು, 70 ಸೆಂಟ್ಸ್ ಜಾಗದಲ್ಲಿ ಕಂಪೌಂಡ್ ಕಟ್ಟಿಕೊಂಡು ವಸತಿ ಶಾಲೆ ನಡೆಸಲಾಗುತ್ತಿದೆ. ನೂತನ […]
ಪರೀಕ್ಷೆಯನ್ನು ಹಬ್ಬದಂತೆ ಎದುರು ನೋಡಿ: ಡಾ ವಿರೂಪಾಕ್ಷ ದೇವರಮನೆ
ಕಾರ್ಕಳ: ಪರೀಕ್ಷೆ ಎನ್ನುವ ಭಯವನ್ನು ದೂರ ಮಾಡಿಕೊಂಡು ಹಬ್ಬಗಳನ್ನು ಎದುರು ನೋಡುವಂತೆ ಪರೀಕ್ಷೆಗೆ ಕಾತುರದಿಂದ ಕಾಯಬೇಕು. ಪರೀಕ್ಷೆಯೆಂಬ ಒತ್ತಡವನ್ನು ಮೊದಲು ಮನಸ್ಸಿನಿಂದ ತೆಗೆದುಹಾಕಬೇಕು. ಪರೀಕ್ಷಾ ತಯಾರಿಯನ್ನು ಇಷ್ಟಪಟ್ಟು ಮಾಡಬೇಕೇ ಹೊರತು ಅದು ಕಷ್ಟದ ಕೆಲಸ ಎಂಬ ಮನೋಭಾವನೆಯಿಂದ ಮಾಡಬಾರದು ಎಂದು ಖ್ಯಾತ ಮನೋತಜ್ಞರಾದ ಡಾ ವಿರೂಪಾಕ್ಷ ದೇವರಮನೆ ಹೇಳಿದರು. ಇವರು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು ಹಾಗೂ ಕಾರ್ಕಳ ರೋಟರಿ ಕ್ಲಬ್ ಇದರ ಸಹಯೋಗದೊಂದಿಗೆ ಪಿಯು ವಿದ್ಯಾರ್ಥಿಗಳಿಗೆ ನಡೆದ ಹ್ಯಾಪಿ ಎಕ್ಸಾಂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ […]
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿನೇಶ್ ಪ್ರಭು ಕಲ್ಲೊಟ್ಟೆ ಅವರಿಗೆ ಅಭಿನಂದನೆ
ಕಾರ್ಕಳ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತುಳು, ಕೊಂಕಣಿ, ಕನ್ನಡ ನಾಟಕ, ರಚನೆಗಾರ, ದಿನೇಶ್ ಪ್ರಭು ಕಲ್ಲೊಟ್ಟೆಯವರಿಗೆ ಅರಸ್ ಕಟ್ಟೆ ಪ್ರಭು ಫ್ಯಾಮಿಲಿಯವರಿಂದ ಕಾರ್ಕಳದ ಕಾಶಿ ಮಠದಲ್ಲಿ ಇತ್ತೀಚೆಗೆ ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ್ ಪೈ ವಹಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ವಿಜಯ ಶೆಟ್ಟಿ, ಸುರೇಂದ್ರ ಭಟ್, ರವೀಂದ್ರ ಪ್ರಭು, ಸುರೇಶ್ ಪ್ರಭು, ಹಿರಿಯ ಕಲಾವಿದ ಮೋಹನ್ ದಾಸ್ ಪ್ರಭು, ಕಾರ್ಕಳದ ಅಂಚೆ ಇಲಾಖೆಯ ಉಪ […]