ಬಿಜೆಪಿಯಿಂದ ಜವಾಬ್ದಾರಿಯುತ ಆಡಳಿತ: ನಳಿನ್ ಕುಮಾರ್

ಮಂಗಳೂರು: ಬಿಜೆಪಿಯ ಮೇಲೆ ವಿಶ್ವಾಸವಿಟ್ಟು ಮಂಗಳೂರಿನ ಜನತೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ನೀಡಿದ್ದಾರೆ. ಜನತೆಯ ಆಶಯಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜವಾಬ್ದಾರಿಯುತ ಆಡಳಿತ ನೀಡಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಬರಬೇಕು ಎಂಬ ನೆಲೆಯಲ್ಲಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಮಂಗಳೂರು ಮಹಾನಗರ ಅಭಿವೃದ್ಧಿಗೆ ಈಗ ಇನ್ನಷ್ಟು […]

ಮಹಾನಗಪಾಲಿಕೆ ಫಲಿತಾಂಶ ಅಭಿವೃದ್ಧಿಯ ಗೆಲುವು: ಶಾಸಕ ಕಾಮತ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೀಗ ಅಭಿವೃದ್ಧಿಯ ಶಖೆ ಪ್ರಾರಂಭವಾಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಸಾಧಿಸಿದ ಕುರಿತು ಮಾತನಾಡಿದ ಅವರು, ಕಳೆದ ಕಾಂಗ್ರೇಸ್ ಆಡಳಿತದ ಜನ ವಿರೋಧಿ ನೀತಿಯಿಂದ ಬೇಸತ್ತ ಜನರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಮಂಗಳೂರಿನ ಜನತೆ  ಜನರಿಗೆ ಪೊಳ್ಳು ಭರವಸೆಗಳು ಬೇಕಿಲ್ಲ. ಅವರು ನಮ್ಮಿಂದ ಬಯಸುವುದು ಅಭಿವೃದ್ಧಿಯನ್ನು ಮಾತ್ರ. ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಹಾಗಾಗಿ ನಂಬಿಕೆ ಹುಸಿಯಾಗದಂತೆ ನಿರಂತರ […]

ಮಂಗಳೂರು ಮಹಾನಗರಪಾಲಿಕೆ ಚುನಾವಣೆ; ಬಿಜೆಪಿಗೆ ಭರ್ಜರಿ ಗೆಲುವು

ಮಂಗಳೂರು: ಬಹಳ ಕುತೂಹಲ ಮೂಡಿಸಿದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 44 ಸ್ಥಾನ ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದೆ. ನವೆಂಬರ್ 12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ ಮಂಗಳೂರಿನ ರೊಸಾರಿಯೋ ಕಾಲೇಜಿನಲ್ಲಿ ನಡೆಯಿತು. ಆರಂಭದಲ್ಲೇ ಮುನ್ನಡೆಯನ್ನು ಸಾಧಿಸಿಕೊಂಡು ಹೋದ ಬಿಜೆಪಿ ಅಂತಿಮವಾಗಿ 60 ವಾರ್ಡ್ ಗಳಲ್ಲಿ 44ರಲ್ಲಿ ಗೆಲುವು ದಾಖಲಿಸಿಕೊಂಡಿದೆ. 14ರಲ್ಲಿ ಕಾಂಗ್ರೆಸ್ ಮತ್ತು ಎರಡು ಸ್ಥಾನಗಳನ್ನು ಎಸ್ ಡಿಪಿಐ ಗೆದ್ದಿದೆ. ಕಾಂಗ್ರೆಸ್ ಪಾರುಪತ್ಯದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೊನೆಗೂ ಬಿಜೆಪಿ […]

ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಕಂಡು ಬಂದಲ್ಲಿ ಹೆಚ್ಚಿನ ದಂಡ ವಿಧಿಸಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ : ಶಾಲೆ-ಕಾಲೇಜುಗಳ ಆವರಣದ ಬಳಿ ತಂಬಾಕು ಉತ್ಪನ್ನಗಳನ್ನು ಮಾರುವ ಪ್ರಕರಣ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ,  ದಂಡ ವಿಧಿಸಿ,  ದಂಡ ವಿಧಿಸುವಲ್ಲಿ ಯಾವುದೇ ದಾಕ್ಷಿಣ್ಯ ತೋರಬೇಡಿ  ಎಂದು  ಜಿಲ್ಲಾ ತಂಬಾಕು ನಿಯಂತ್ರಣ ದಳದ ಅಧಿಕಾರಿಗಳಿಗೆ  ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ತಂಬಾಕು ನಿಷೇಧ ಕೋಶದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಸಮೀಪದ 100 […]

ಶ್ರೀ ಕೃಷ್ಣ ಮಠದಲ್ಲಿ ಕಡೆಕಾರ್ ಶ್ರೀಶ ಭಟ್ ಅವರಿಗೆ ಸನ್ಮಾನ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ 20ನೆಯ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ,ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ತಮ ಕೊಡುಗೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಸಲಹಾ ಸಮಿತಿಯ ಸದಸ್ಯರಾದ ಕಡೆಕಾರ್ ಶ್ರೀಶ ಭಟ್ ಇವರನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸನ್ಮಾನಿಸಿ ಅನುಗ್ರಹಿಸಿದರು.