ಮಂಗಳೂರು ಮಹಾನಗರಪಾಲಿಕೆ ಚುನಾವಣೆ; ಬಿಜೆಪಿಗೆ ಭರ್ಜರಿ ಗೆಲುವು

ಮಂಗಳೂರು: ಬಹಳ ಕುತೂಹಲ ಮೂಡಿಸಿದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 44 ಸ್ಥಾನ ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದೆ.
ನವೆಂಬರ್ 12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ ಮಂಗಳೂರಿನ ರೊಸಾರಿಯೋ ಕಾಲೇಜಿನಲ್ಲಿ ನಡೆಯಿತು.
ಆರಂಭದಲ್ಲೇ ಮುನ್ನಡೆಯನ್ನು ಸಾಧಿಸಿಕೊಂಡು ಹೋದ ಬಿಜೆಪಿ ಅಂತಿಮವಾಗಿ 60 ವಾರ್ಡ್ ಗಳಲ್ಲಿ 44ರಲ್ಲಿ ಗೆಲುವು ದಾಖಲಿಸಿಕೊಂಡಿದೆ. 14ರಲ್ಲಿ ಕಾಂಗ್ರೆಸ್ ಮತ್ತು ಎರಡು ಸ್ಥಾನಗಳನ್ನು ಎಸ್ ಡಿಪಿಐ ಗೆದ್ದಿದೆ. ಕಾಂಗ್ರೆಸ್ ಪಾರುಪತ್ಯದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೊನೆಗೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿ ತೇಲಾಡಿದರು.