ಉಡುಪಿ: ವಿಶ್ವಪ್ರಸನ್ನ ತೀರ್ಥರಿಂದ ನೀಲಾವರ ಗೋಶಾಲೆಗೆ ಪಾದಯಾತ್ರೆ

ಉಡುಪಿ: ಪ್ರತಿ ವರ್ಷದಂತೆ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿಯ ನೇತೃತ್ವದಲ್ಲಿ ಭಾನುವಾರ ಉಡುಪಿ ಕೃಷ್ಣಮಠದಿಂದ ನೀಲಾವರದ ಗೋ ಶಾಲೆಯವರೆಗೆ ಪಾದಯಾತ್ರೆ ನಡೆಯಿತು. ಕೃಷ್ಣಮಠದ ಚಂದ್ರಶಾಲೆಯಲ್ಲಿ ಸ್ವಾಮೀಜಿಗಳ ಶ್ರೀಮಧ್ಭಾಗವತ ಪುರಾಣ ಪ್ರವಚನದೊಂದಿಗೆ ಪಾದಯಾತ್ರೆ ಆರಂಭಗೊಂಡಿತು. ಬಳಿಕ ಪಾದೆಯಾತ್ರೆಯ ಮಾರ್ಗದಲ್ಲಿ ಸಿಗುವ ಕಲ್ಯಾಣಪುರದ ಮಡಿಮಲ್ಲಿಕಾರ್ಜುನ ದೇವಳದಲ್ಲಿ, ಹೇರೂರು ಮಹಾಲಿಂಗೇಶ್ವರ ದೇವಳದಲ್ಲಿ ತಲಾ ಅರ್ಧ ತಾಸು ಭಾಗವತ ಪ್ರವಚನ ನೀಡಿದರು. ಇಂದು ಬೆಳಿಗ್ಗೆ 7ಗಂಟೆಗೆ ಆರಂಭಗೊಂಡ ಪಾದಯಾತ್ರೆ ಸಂಜೆ 4ಗಂಟೆಗೆ ನೀಲಾವರ ಗೋಶಾಲೆಯನ್ನು ತಲುಪಿತು. ಗೋಶಾಲೆಯಲ್ಲಿ ಕೃಷ್ಣಪೂಜೆ ದೀಪಾರಾಧನೆ ಬಳಿಕ […]

ಧಾರ್ಮಿಕ ಮುಖಂಡರ ಸಭೆ: ಪೇಜಾವರ ಶ್ರೀಗಳು ದೆಹಲಿಗೆ

ಉಡುಪಿ: ಅಯೋಧ್ಯೆ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂತರು ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯಲ್ಲಿ ಭಾಗವಹಿಸಲು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಂಗಳೂರಿನಿಂದ ವಿಶೇಷ ವಿಮಾನದಲ್ಲಿ ತೆರಳಿದರು.

ವ್ಯಾಯಾಮ-ನಿಯಮಿತ ಆಹಾರ ಪದ್ದತಿಯಿಂದ ಮಧುಮೇಹ ನಿಯಂತ್ರಣ: ನಿಶಾ ಜೇಮ್ಸ್

ಉಡುಪಿ: ಪ್ರತಿದಿನ ವ್ಯಾಯಾಮ, ನಿಯಮಿತ ಆಹಾರ ಸೇವನೆ ಹಾಗೂ ಆಗಾಗ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹೇಳಿದರು. ವಿಶ್ವ ಮಧುಮೇಹ (ಡಯಾಬಿಟಿಸ್‌) ದಿನದ ಅಂಗವಾಗಿ ಆದರ್ಶ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎನ್‌ಸಿಡಿ ಘಟಕ ಹಾಗೂ ಪಿಪಿಸಿ ಕಾಲೇಜಿನ ಸಹಯೋಗದಲ್ಲಿ ಅಜ್ಜರಕಾಡಿನಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್‌ ಮಧುಮೇಹ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ಮಧುಮೇಹ […]

ಉಡುಪಿ: ಸಂಭ್ರಮದ ಈದ್ ಮಿಲಾದ್ ಆಚರಣೆ

ಉಡುಪಿ: ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ಈದ್‌ ಮಿಲಾದ್‌ ಹಬ್ಬವನ್ನು ಮುಸ್ಲಿಂ ಬಾಂಧವರು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಿದರು. ಈದ್‌ಮಿಲಾದ್‌ ಪ್ರಯುಕ್ತ ದೊಡ್ಡಣಗುಡ್ಡೆ ಮತ್ತು ಹೂಡೆಯಲ್ಲಿ ಮೆರವಣಿಗೆ ನಡೆಯಿತು. ದೊಡ್ಡಣಗುಡ್ಡೆ ರಹ್ಮಾನಿಯ ಜುಮಾ ಮಸೀದಿಯಲ್ಲಿ ಸ್ಥಳೀಯ ಖತೀಬ್‌ ಅಬ್ದುಲ್‌ ಸಲಾಂ ಮದನಿ ದುವಾ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಅಬ್ದುಲ್‌ ಖಾದರ್‌, ಉಪಾಧ್ಯಕ್ಷ ಅಮಾನುಲ್ಲಾ ಸಾಹೇಬ್‌, ಎಸ್‌ವೈಎಸ್‌ ರಾಜ್ಯ ಸದಸ್ಯ ಹಂಝಾತ್‌ ಕೋಡಿ ಹೆಜಮಾಡಿ ಉಪಸ್ಥಿತರಿದ್ದರು. ಬಳಿಕ […]

ಶ್ರೀ ಕೃಷ್ಣ ಮಠದಲ್ಲಿ ತೆಪ್ಪೋತ್ಸವ – ಲಕ್ಷ ದೀಪೋತ್ಸವ ಸಂಭ್ರಮ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಉತ್ಥಾನ ದ್ವಾದಶಿಯಂದು  ತೆಪ್ಪೋತ್ಸವ ಹಾಗೂ ಲಕ್ಷ ದೀಪೋತ್ಸವ ನಡೆಯಿತು. ಉತ್ಸವದಲ್ಲಿ   ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥರು, ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರು,ಪೇಜಾವರ ಕಿರಿಯ ಮಠಾಧೀಶರಾದ  ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.