ಸಹಕಾರಿ ಸಂಸ್ಥೆಗಳು ಆನ್ ಲೈನ್ ವ್ಯವಹಾರ ನಡೆಸಲು ಮುಂದಾಗಬೇಕು: ಯಶ್‌ಪಾಲ್‌

ಉಡುಪಿ: ಪ್ರಸ್ತುತ ಬ್ಯಾಂಕಿಂಗ್‌ ಕ್ಷೇತ್ರ ಆಧುನಿಕ ವ್ಯವಸ್ಥೆಯತ್ತ ಸಾಗುತ್ತಿದ್ದು, ಸಹಕಾರಿ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಆನ್‌ಲೈನ್‌ ವ್ಯವಹಾರ ನಡೆಸಲು ಮುಂದಾಗಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್‌ ಮಂಗಳೂರು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತ […]

ಖಾಸಗಿ ಸಹಭಾಗಿತ್ವದ ಯೋಜನೆಯಿಂದ ಆರ್ಥಿಕ ಭದ್ರತೆ: ಡಾ. ಅಶ್ವಥ ನಾರಾಯಣ

ಉಡುಪಿ: ಸರ್ಕಾರವು ಖಾಸಗಿ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುವ ಯೋಜನೆಗಳಿಂದ ಆರ್ಥಿಕ ಭದ್ರತೆಯನ್ನು ಬಲಿಷ್ಠಗೊಳಿಸುವುದರ ಜತೆಗೆ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್‌ ನಾರಾಯಣ್‌ ಹೇಳಿದರು. ರಾಜ್ಯ ಸರ್ಕಾರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಸಹಭಾಗಿತ್ವದಲ್ಲಿ ಆರಂಭಿಸಿರುವ ಬಯೋ ಇನ್‌ಕ್ಯುಬೇಟರ್‌ ಕೇಂದ್ರವನ್ನು ಮಣಿಪಾಲದ ಫಾರ್ಚುನ್‌ ವ್ಯಾಲಿವ್ಯೂ ಹೋಟೆಲ್‌ನ ಚೈತನ್ಯ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ರಕ್ಷಣಾ ತಂತ್ರಜ್ಞಾನ ಮೊದಲಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಂಶೋಧನೆ ಕೇಂದ್ರಗಳನ್ನು ರಾಜ್ಯದ […]

ಮಳೆ ಹಿನ್ನೆಲೆ: ದ.ಕ. ಜಿಲ್ಲೆ ಶಾಲಾ/ ಪಿಯು ಕಾಲೇಜುಗಳಿಗೆ ಅ.26ರಂದು ರಜೆ

ಮಂಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲಾ ಶಾಲಾ/ ಪಿಯು ಕಾಲೇಜುಗಳಿಗೆ ನಾಳೆ(ಅ.26) ರಜೆ ನೀಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ನಿಟ್ಟೆಯಲ್ಲಿ ಎಸ್.ಎ.ಎಂ.ಸಿ.ಎ ಉದ್ಘಾಟನೆ

ನಿಟ್ಟೆ: “ಪ್ರತಿಯೋರ್ವ ಮಾನವನೂ ಆನಂದಿಸಿ, ಆಹ್ಲಾದಿಸಿ ತನ್ನ ಕೆಲಸವನ್ನು ಮಾಡಿದರೆ ಆ ಕೆಲಸದ ಕಠಿಣತೆಯನ್ನು ಮರೆಸಬಹುದಾಗಿದೆ. ವಿದ್ಯಾರ್ಥಿಗಳು ಸ್ಟಾರ್ಟ್‌ಪ್ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿದರೆ ವಿವಿಧ ಬಗೆಯ ಸವಾಲುಗಳನ್ನು ಎದುರಿಸುವ ಅನುಭವ ದೊರೆಯುತ್ತದೆ” ಎಂದು ಆರ್ಕೀವ ಸಂಸ್ಥೆಯ ಸೀನಿಯರ್ ಕನ್ಸಲ್ಟೆಂಟ್ & ಪ್ರಾಜೆಕ್ಟ್ ಮ್ಯಾನೇಜರ್ ಕಿರೀತ್ ಶೆಟ್ಟಿ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ಸಂಘವಾದ ಎಸ್.ಎ.ಎಂ.ಸಿ.ಎ ನ್ನು ಅ.೨೫ರಂದು ಉದ್ಘಾಟಿಸಿ ಅವರು ಮಾತನಾಡಿದರು. “ಇಂದು ತಂತ್ರಜ್ಞಾನ ಕ್ಷೇತ್ರವು ಕ್ಷಿಪ್ರ ಬೆಳವಣೆಗೆಯನ್ನು ಕಾಣುತ್ತಿದೆ. ಯುವ ಜನತೆ ಈ […]

ಮಂಗಳೂರು: ಎಕ್ಸ್‌ಪರ್ಟ್‌ ಸಂಸ್ಥೆಯಿಂದ ಮಂದಾರದ ಸಂತ್ರಸ್ತರಿಗೆ ರೂ. 4 ಲಕ್ಷ ನೆರವು

ಮಂಗಳೂರು: ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಪಚ್ಚನಾಡಿ ಡಂಪಿಂಗ್‌ಯಾರ್ಡ್‌ನಿಂದ ತ್ಯಾಜ್ಯರಾಶಿಯು ಕುಡುಪು ಸಮೀಪದ ಮಂದಾರ ಪ್ರದೇಶಕ್ಕೆಪ್ರವಾಹ ರೀತಿಯಲ್ಲಿ ಹರಿದಿತ್ತು. ಆಗ ಮಂದಾರ ಪ್ರದೇಶ ವ್ಯಾಪಿಯಲ್ಲಿ ಹರಡಿದ ವಸ್ತು ಸ್ಥಿತಿಯನ್ನು ಗಮನಿಸಿ ತಕ್ಷಣವೇ ನಾವು ಸಾಮಾಜಿಕ ಬದ್ಧತೆಯಿಂದ ಸಂಸ್ಥೆಯ ಉಪನ್ಯಾಸಕರನ್ನು ಸ್ಥಳಕ್ಕೆ ಕಳುಹಿಸಿ ಗ್ರಾಮಸ್ಥರನ್ನು ಭೇಟಿ ಮಾಡಿ ಆತ್ಮಸ್ಥೈರ್ಯವನ್ನು ತುಂಬಿದ್ದೆವು  ಮುಂದಿನ ದಿನಗಳಲ್ಲಿ ನಮ್ಮ ಕೈಲಾಗುವ ಸಹಾಯ ನೀಡಲಾಗುವುದು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯು ಭರವಸೆಯನ್ನು ನೀಡಿತ್ತು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನರೇಂದ್ರಎಲ್.ನಾಯಕ್ ಹೇಳಿದ್ದಾರೆ. […]