ನಿಟ್ಟೆಯಲ್ಲಿ ಎಸ್.ಎ.ಎಂ.ಸಿ.ಎ ಉದ್ಘಾಟನೆ

ನಿಟ್ಟೆ: “ಪ್ರತಿಯೋರ್ವ ಮಾನವನೂ ಆನಂದಿಸಿ, ಆಹ್ಲಾದಿಸಿ ತನ್ನ ಕೆಲಸವನ್ನು ಮಾಡಿದರೆ ಆ ಕೆಲಸದ ಕಠಿಣತೆಯನ್ನು ಮರೆಸಬಹುದಾಗಿದೆ. ವಿದ್ಯಾರ್ಥಿಗಳು ಸ್ಟಾರ್ಟ್‌ಪ್ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿದರೆ ವಿವಿಧ ಬಗೆಯ ಸವಾಲುಗಳನ್ನು ಎದುರಿಸುವ ಅನುಭವ ದೊರೆಯುತ್ತದೆ” ಎಂದು ಆರ್ಕೀವ ಸಂಸ್ಥೆಯ ಸೀನಿಯರ್ ಕನ್ಸಲ್ಟೆಂಟ್ & ಪ್ರಾಜೆಕ್ಟ್ ಮ್ಯಾನೇಜರ್ ಕಿರೀತ್ ಶೆಟ್ಟಿ ಅಭಿಪ್ರಾಯಪಟ್ಟರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ಸಂಘವಾದ ಎಸ್.ಎ.ಎಂ.ಸಿ.ಎ ನ್ನು ಅ.೨೫ರಂದು ಉದ್ಘಾಟಿಸಿ ಅವರು ಮಾತನಾಡಿದರು. “ಇಂದು ತಂತ್ರಜ್ಞಾನ ಕ್ಷೇತ್ರವು ಕ್ಷಿಪ್ರ ಬೆಳವಣೆಗೆಯನ್ನು ಕಾಣುತ್ತಿದೆ. ಯುವ ಜನತೆ ಈ ಕ್ಷಿಪ್ರಬದಲಾವಣೆಗೆ ಅತಿವೇಗವಾಗೇ ಹೊಂದಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‌ನ ರೆಜಿಸ್ಟ್ರಾರ್ ಪ್ರೊ.ಎ.ಯೋಗೀಶ್ ಹೆಗ್ಡೆ ಮಾತನಾಡಿದರು.

ವೇದಿಕೆಯಲ್ಲಿ ಎಂ.ಸಿ.ಎ ವಿಭಾಗದ ನಿರ್ದೇಶಕ ಡಾ| ಕೆ. ಮೋಹನ್ ಹೆಗ್ಡೆ ಉಪಸ್ಥಿತರಿದ್ದರು.

ನಿಟ್ಟೆ ಎಂ.ಸಿ.ಎ ವಿಭಾಗದ ಮುಖ್ಯಸ್ಥ ಡಾ|ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಎಸ್.ಎ.ಎಂ.ಸಿ.ಎ ಅಧ್ಯಕ್ಷ ಗುರುಪ್ರಸಾದ್ ವಾರ್ಷಿಕ ವರದಿ ವಾಚಿಸಿದರು. ಎಸ್.ಎ.ಎಂ.ಸಿ.ಎ ಸಂಯೋಜಕ ಬಾಲಚಂದ್ರ ರಾವ್ ಅತಿಥಿಗಳನ್ನು ಪರಿಚಯಿಸಿದರು. ಎಸ್.ಎ.ಎಂ.ಸಿ.ಎ ಕಾರ್ಯದರ್ಶಿ ಕು.ಅಕ್ಷತಾ ಎ ನಾಯಕ್ ವಂದಿಸಿದರು. ವಿದ್ಯಾರ್ಥಿನಿ ಅದಿತಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.