ಮಂಗಳೂರು: ಎಕ್ಸ್‌ಪರ್ಟ್‌ ಸಂಸ್ಥೆಯಿಂದ ಮಂದಾರದ ಸಂತ್ರಸ್ತರಿಗೆ ರೂ. 4 ಲಕ್ಷ ನೆರವು

ಮಂಗಳೂರು: ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಪಚ್ಚನಾಡಿ ಡಂಪಿಂಗ್‌ಯಾರ್ಡ್‌ನಿಂದ ತ್ಯಾಜ್ಯರಾಶಿಯು ಕುಡುಪು ಸಮೀಪದ ಮಂದಾರ ಪ್ರದೇಶಕ್ಕೆಪ್ರವಾಹ ರೀತಿಯಲ್ಲಿ ಹರಿದಿತ್ತು.

ಆಗ ಮಂದಾರ ಪ್ರದೇಶ ವ್ಯಾಪಿಯಲ್ಲಿ ಹರಡಿದ ವಸ್ತು ಸ್ಥಿತಿಯನ್ನು ಗಮನಿಸಿ ತಕ್ಷಣವೇ ನಾವು ಸಾಮಾಜಿಕ ಬದ್ಧತೆಯಿಂದ ಸಂಸ್ಥೆಯ ಉಪನ್ಯಾಸಕರನ್ನು ಸ್ಥಳಕ್ಕೆ ಕಳುಹಿಸಿ ಗ್ರಾಮಸ್ಥರನ್ನು ಭೇಟಿ ಮಾಡಿ ಆತ್ಮಸ್ಥೈರ್ಯವನ್ನು ತುಂಬಿದ್ದೆವು  ಮುಂದಿನ ದಿನಗಳಲ್ಲಿ ನಮ್ಮ ಕೈಲಾಗುವ ಸಹಾಯ ನೀಡಲಾಗುವುದು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯು ಭರವಸೆಯನ್ನು ನೀಡಿತ್ತು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನರೇಂದ್ರಎಲ್.ನಾಯಕ್ ಹೇಳಿದ್ದಾರೆ.

ಅವರು ನಗರದಲ್ಲಿ ಹಮ್ಮಿಕೊಂಡ ನೆರವು ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರೂ. 4ಲಕ್ಷ ನೆರವು:
26  ಸಂತ್ರಸ್ತ ಕುಟುಂಬಗಳನ್ನು ನಾವು ಗುರುತಿಸಿ ಇಂದು ಆಗಮಿಸಿರುವ 26  ಕುಟುಂಬಗಳಿಗೂ ಸಹಾಯ ಮಾಡಲು ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ವತಿಯಿಂದ ಒಟ್ಟು  4 ಲಕ್ಷ  ರಿಹಾರ ನೀಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಇಲ್ಲಿನ ಸಂತ್ರಸ್ಥರಿಗೆ ಇನ್ನಿತರ ಸಂಸ್ಥೆಗಳು ಮತ್ತು ಸರಕಾರವು ಕೂಡ ಇನ್ನಷ್ಟು ಸಹಕಾರವನ್ನು ನೀಡುವಂತೆ ನಾವು ಒತ್ತಾಯಿಸುತ್ತೇವೆ ಎಂದವರು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನರೇಂದ್ರಎಲ್.ನಾಯಕ್, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾಎನ್. ನಾಯಕ್, ಆರ್ಕಿಟೆಕ್ಟ್  ದೀಪಿಕಾ ಎ. ನಾಯಕ್, ಕೊಡಿಯಾಲ್‌ ಬೈಲ್‌ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್, ವಳಚ್ಚಿಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ವಿಜಯನ್ ಹಾಗೂ ಉಪಪ್ರಾಂಶುಪಾಲರಾದ  ರಾಘವೇಂದ್ರ ಶೆಣೈ, ಕೊಡಿಯಾಲ್‌ಬೈಲ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಕರುಣಾಕರ ಬಳ್ಕೂರು ಇನ್ನಿತರರು ಉಪಸ್ಥಿತರಿದ್ಧರು.