ಮಂಗಳೂರು: ಬೆಂದೂರ್ ನಲ್ಲಿ ‘ಪಾಪ್ ಅಪ್ ಮಾರುಕಟ್ಟೆ’ ಉದ್ಘಾಟನೆ

ಮಂಗಳೂರು : 4ನೇ ಬಾರಿಗೆ ಪಾಪ್ ಅಪ್ ಮಾರುಕಟ್ಟೆಯನ್ನು ಮಂಗಳೂರು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್‍ನಲ್ಲಿ ಶನಿವಾರ ಬೆಳಗ್ಗೆ ಉದ್ಘಾಟಿಸಲಾಯಿತು. ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮ ಮಳಿಗೆಗಳು ಭಾಗವಹಿಸಿದ್ದವು.

ವಳಚ್ಚಿಲ್: ಎಕ್ಸ್ ಪರ್ಟ್ ಇ-ಲರ್ನ್ ಸ್ಟುಡಿಯೋ’ಗೆ ಚಾಲನೆ, ಭವಿಷ್ಯದಲ್ಲಿ ಮಹತ್ತರ ಸಾಧನೆಗೆ ಸ್ಟುಡಿಯೋ ನಾಂದಿ ಹಾಡಲಿದೆ: ಡಾ. ಶಿವಶರಣ್ ಶೆಟ್ಟಿ 

ಮಂಗಳೂರು: ಶಿಕ್ಷಕರು ತಮ್ಮ ತಪ್ಪುಗಳನ್ನು ಗುರುತಿಸಲು ಇ-ಲರ್ನ್ ಸ್ಟುಡಿಯೋ ತಂತ್ರಜ್ಞಾನ ಪರಿಣಾಮಕಾರಿಯಾಗಲಿದೆ. ಈ ಶಿಕ್ಷಣ ಸಂಸ್ಥೆ ಹೊಸತನ ಮತ್ತು ಪ್ರಯೋಗಶೀಲತೆಗೆ ಸದಾ ಒತ್ತು ನೀಡುತ್ತಾ ಬಂದಿದೆ. ಎಕ್ಸ್ ಪರ್ಟ್ ಇ-ಲರ್ನ್ ಸ್ಟುಡಿಯೋ’ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿದ್ದು, ಭವಿಷ್ಯದಲ್ಲಿ ಮಹತ್ತರ ಸಾಧನೆಗೆ ಸ್ಟುಡಿಯೋ ನಾಂದಿ ಹಾಡಲಿದೆ ಎಂದು ರಾಜೀವ್ ಗಾಂಧಿ ವಿವಿಯ ಆರೋಗ್ಯ ವಿಜ್ಞಾನದ ಸಿಂಡಿಕೇಟ್ ಸದಸ್ಯ, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯದ ಸದಸ್ಯ ಡಾ. ಶಿವಶರಣ್ ಶೆಟ್ಟಿ ಹೇಳಿದರು. ಅವರು ವಳಚ್ಚಿಲ್ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಎಕ್ಸ್ […]

ರವಿವಾರ ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನಿದೆ ಗೊತ್ತಾ? ಪಂಡಿತ್ ವಾದಿರಾಜ್ ಭಟ್ ಹೇಳ್ತಾರೆ

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ: ಮನಸ್ಸು ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ. ಶ್ರದ್ಧೆ, ಭಕ್ತಿ, ಜೊತೆಗೆ ಮಾಡುವ ಕೆಲಸದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಸಿಗಲಿದೆ. ಮಹಿಳೆಯರಿಗೆ ಈ ವಾರ ಮನಸ್ಸಲ್ಲಿ ಕಿರಿಕಿರಿ ಹೆಚ್ಚಾಗಿರುತ್ತೆ. ದೇವಸ್ಥಾನ ಅಥವಾ ಪ್ರಕೃತಿಯ ಜೊತೆ ಒಂದಿಷ್ಟು ಸಮಯ ಕಳೆಯಿರಿ. ವೃಷಭ: ಹಣ ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತೆ ಎನ್ನುವ ಮಾತಿದೆ. ಅತೀಯಾದ ಹಣದ  ಆಸೆ ನಿಮ್ಮನ್ನು ಕೆಟ್ಟ ದಾರಿಗೆ ತಳ್ಳುವ […]

ಡಿಸಿ ಮನ್ನಾ ಭೂಮಿ ಒತ್ತುವರಿ ತೆರವು: ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಡಿಸಿ ಮನ್ನಾ ಭೂಮಿಯನ್ನು ಕೂಡಲೆ ತೆರವುಗೊಳಿಸುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ. ಅವರು ಶುಕ್ರವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಪ.ಜಾತಿ ಪಂಗಡದವರ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ಹಲವು ಕಡೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿದ್ದ ದಲಿತ ಮುಖಂಡರು ದೂರಿದ ಹಿನ್ನಲೆಯಲ್ಲಿ, ಡಿಸಿ ಮನ್ನಾ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಂದ […]