ಮಂಗಳೂರು: ಬೆಂದೂರ್ ನಲ್ಲಿ ‘ಪಾಪ್ ಅಪ್ ಮಾರುಕಟ್ಟೆ’ ಉದ್ಘಾಟನೆ

ಮಂಗಳೂರು : 4ನೇ ಬಾರಿಗೆ ಪಾಪ್ ಅಪ್ ಮಾರುಕಟ್ಟೆಯನ್ನು ಮಂಗಳೂರು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್‍ನಲ್ಲಿ ಶನಿವಾರ ಬೆಳಗ್ಗೆ ಉದ್ಘಾಟಿಸಲಾಯಿತು.
ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮ ಮಳಿಗೆಗಳು ಭಾಗವಹಿಸಿದ್ದವು.