ಕಂಬಳ ವೀಕ್ಷಣೆಗೆ ವಿಶ್ವದ ಪ್ರವಾಸಿಗರನ್ನು ಸೆಳೆಯಬಹುದು, ಪ್ರವಾಸೋದ್ಯಮ ಅಭಿವೃದ್ದಿ‌ ಕುರಿತು ಸಂವಾದದಲ್ಲಿ ಸಚಿವ‌ ಸಿ.ಟಿ. ರವಿ ಅಭಿಮತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೆ ಕರಾವಳಿಯಲ್ಲಿ ಪ್ರವಾಸಿ ತಾಣಗಳನ್ನು ಪ್ರಸಿದ್ದಿ ಪಡಿಸುವುದರಲ್ಲಿ ನಾವು ವಿಫಲವಾಗಿದ್ದೇವೆ.‌ ಅಲ್ಲದೇ ಕರಾವಳಿಯ ಕಂಬಳ ಕ್ರೀಡೆಯನ್ನು ವಿಶ್ವ ಮಟ್ಟದಲ್ಲಿ ನಾವು ಪ್ರೊಮೋಟ್ ಮಾಡಿ ವಿಶ್ವದ ಪ್ರವಾಸಿಗರನ್ನು ಸೆಳೆಯಬಹುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದರು. ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ದಕ್ಷಿಣ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಪತ್ರಕರ್ತರ ಜೊತೆಗೆ ಚರ್ಚೆ ನಡೆಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು  […]

ಶಾಲಾರಂಭದ ದಿನವೇ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ: ಸುರೇಶ್ ಕುಮಾರ್

ಮಂಗಳೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ವಿಳಂಭವಾಗಿ ದೊರಕುವುದನ್ನು ತಪ್ಪಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಸೈಕಲ್‍ಗಳನ್ನು ವಿತರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಅವರು ಸೋಮವಾರ ಬಂಟ್ವಾಳ ತಾಲೂಕಿನ ದಡ್ಡಲಕಾಡು ಗ್ರಾಮದಲ್ಲಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿದರು. ಪಠ್ಯಪುಸ್ತಕಗಳು ತಿಂಗಳುಗಳ ಕಾಲ ದೊರಕದೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇದಲ್ಲದೇ, ಸಮವಸ್ತ್ರ ಹಾಗೂ ಸೈಕಲ್ ವಿತರಣೆ ಕೂಡಾ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಕೋಟೇಶ್ವರದಿಂದ ಹೋಯ್ತು ಅದ್ಧೂರಿ ರಥ: ಕೋಟೇಶ್ವರ ಶಿಲ್ಪಿಗಳ ಕಾರ್ಯಕ್ಕೆ ಎಲ್ಲರೂ ಫಿದಾ!

-ಶ್ರೀಕಾಂತ್ ಹೆಮ್ಮಾಡಿ ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 400 ವರ್ಷಗಳ ಇತಿಹಾಸ ಹೊಂದಿದ ಹಳೆ ಬ್ರಹ್ಮರಥದ ಮಾದರಿಯನ್ನಾಗಿಟ್ಟುಕೊಂಡು ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯ ಇವರ ನೇತೃತ್ವದಲ್ಲಿ ನಿರ್ಮಾಣಗೊಂಡ ರಥವು ಸೋಮವಾರ ಕೋಟೇಶ್ವರದಿಂದ ಕುಕ್ಕೆಯತ್ತ ಹೊರಟಿದೆ. ಮೊದಲಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಗವದ್ವಜ ಹಾರಿಸಿ ಚಾಲನೆ ನೀಡಿದರು. ವಿಧಾನ […]

ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ನೂತನ ಆಡಳಿತ ಸಮಿತಿ: ಮಾಜಿ ಶಾಸಕ ಗೋಪಾಲ ಪೂಜಾರಿ ಗರಂ, ಖಡಕ್ ವಾರ್ನಿಂಗ್

ಕುಂದಾಪುರ: ಸರಕಾರದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಈಗಿರುವ ವ್ಯವಸ್ಥಾಪನ ಸಮಿತಿ ರದ್ಧುಮಾಡಿ ನೂತನ ಆಡಳಿತ ಸಮಿತಿ ತರಬೇಕೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶದ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪ್ರತಿಕ್ರಿಯಿಸಿದ್ದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ  ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆ ಕಡತ ಸಿದ್ದವಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಎಲ್ಲವೂ ನಡೆಯುತ್ತಿದ್ದು ಇದರಲ್ಲಿ ರಾಜಕೀಯ ದ್ವೇಷವಿಲ್ಲ. ಯಾವುದೇ […]

ಬಂಟ್ವಾಳ: ಬಾವಿಗೆ ಬಿದ್ದ ಚಿರತೆ; ಅರಣ್ಯಧಿಕಾರಿಗಳಿಂದ ರಕ್ಷಣೆ

ಮಂಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಆಯ ತಪ್ಪಿ ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ರಾಯಿಯ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಅವರ ಮನೆಯ ಎರಡು ನಾಯಿಗೆ ಹೊಂಚು ಹಾಕಿದ ಚಿರತೆ, ನಾಯಿಯನ್ನು ಹಿಡಿಯಲು ಹೋದಾಗ ಆಯತಪ್ಪಿ ಮನೆಯ ಅಂಗಳದಲ್ಲಿ ಇದ್ದ ಬಾವಿಗೆ ಬಿದ್ದಿದೆ. ಇಂದು ಬೆಳಗ್ಗೆ ಮನೆಯವರು ಚಿರತೆ ನೋಡಿ ಅರಣ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದ್ದಾರೆ.‌ಅರಣ್ಯ ಇಲಾಖೆ ಅಧಿಕಾರಿಗಳು […]