ಮಂಗಳೂರು: ಡೆಂಗ್ಯು-ಪ್ಲೇಗ್ ಮಹಾಮಾರಿಗೆ ಯುವಕ ಬಲಿ
ಮಂಗಳೂರು: ಮಂಗಳೂರಿನಲ್ಲಿ ಡೆಂಗ್ಯೂ, ಪ್ಲೇಗ್ ಮಹಾಮಾರಿಗೆ ಭಾನುವಾರ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ತೊಕ್ಕೊಟ್ಟು ಭಟ್ನಗರ ನಿವಾಸಿ ಹರ್ಷಿತ್ ಗಟ್ಟಿ(23) ಮೃತಪಟ್ಟ ಯುವಕ. ಕೆಲ ದಿನಗಳಿಂದ ಡೆಂಗ್ಯು , ಪ್ಲೇಗ್ ನಿಂದ ಬಳಲುತ್ತಿದ್ದ ಹರ್ಷಿತ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ್ ಸಾವನ್ನಪ್ಪಿದ್ದಾರೆ. ಹರ್ಷಿತ್ ಗಟ್ಟಿ ಅವರು ಹರೀಶ್ ಗಟ್ಟಿ-ಮಮತಾ ಗಟ್ಟಿ ದಂಪತಿ ಹಿರಿಯ ಪುತ್ರನಾಗಿದ್ದು, ವೆಲ್ಡರ್ ವೃತ್ತಿ ನಿರ್ವಹಿಸುತ್ತಿದ್ದರು. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ದಿನಗಳ ಅಂತರದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.
ಕಡ್ಡಾಯ ವರ್ಗಾವಣೆ ಬದಲಾವಣೆಗೆ ಸರಕಾರ ಬದ್ಧ: ಕೋಟ
ಉಡುಪಿ: ಶಿಕ್ಷಕರು ವಿವಿಧ ರೀತಿಯ ಒತ್ತಡದಿಂದ ಕೆಲಸ ಮಾಡುವ ಬದಲು ನಿರಾಳತೆ ಹಾಗೂ ಪ್ರೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದು ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಬದ್ಧವಾಗಿದೆ ಎಂದು ಮುಜುರಾಯಿ, ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ಆದರ್ಶ […]
ತುಳು ಭಾಷೆಗೆ ಜನ-ಆಡಳಿತ ವರ್ಗದಿಂದ ಮಾನ್ಯತೆ ದೊರೆಯಬೇಕು: ಪ್ರೊ.ಬಿ.ಎ.ವಿವೇಕ್ ರೈ
ಉಡುಪಿ: ತುಳು ಭಾಷೆ, ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ಮಾತ್ರ ಮುಖ್ಯ ಅಲ್ಲ. ಅದಕ್ಕೆ ಜನರು ಹಾಗೂ ಆಡಳಿತ ವರ್ಗದಿಂದ ಮಾನ್ಯತೆ ಸಿಗುವ ಕೆಲಸ ಆಗಬೇಕು. ಅದಕ್ಕಾಗಿ ತುಳು ಭಾಷೆ, ಸಾಹಿತ್ಯ ಕ್ಷೇತ್ರದ ಬೆಳೆವಣಿಗೆಗೆ ನಮ್ಮಿಂದಾಗುವ ಕೆಲಸವನ್ನು ನಾವು ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಹೇಳಿದರು. ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ಭಾನುವಾರ ನಡೆದ […]
ಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಬೈಕ್ ರ್ಯಾಲಿಗೆ ಅನುಮತಿ ಕೊಡದ ಇಲಾಖೆ ಬಗ್ಗೆ ಬಿಲ್ಲವರು ಗರಂ!
ಕುಂದಾಪುರ: ಶ್ರೀ ನಾರಾಯಣ ಗುರು ಸಂದೇಶ ಸಾರುವ ಸಲುವಾಗಿ ಭಾನುವಾರ ನಡೆಯಲಿದ್ದ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸಿದ ಬಗ್ಗೆ ಬಿಲ್ಲವ ಸಮಾಜದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಂತಿ ಭಂಗದ ನೆಪವೊಡ್ಡಿ ಅನುಮತಿ ನೀಡದ ಇಲಾಖೆ ವಿರುದ್ಧ ಬಿಲ್ಲವ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಮಂಜು ಬಿಲ್ಲವ ಸಹಿತ ಇತರರು ಆಕ್ರೋಷ ವ್ಯಕ್ತಪಡಿಸಿದರು. ಶನಿವಾರ ಸಂಜೆಯವರೆಗೂ ಬಿಲ್ಲವ ಸಮಾಜದ ಮುಖಂಡರು ಹಾಗೂ ಸಚಿವ ಶಾಸಕರ ಮೂಲಕವು ಜಿಲ್ಲಾಡಳಿತದ ಬಳಿ ಬೈಕ್ ರ್ಯಾಲಿಗೆ ಅನುಮತಿ ನೀಡುವಂತೆ ಮನವಿ ಮಾಡಿದರೂ ಕೂಡ ಅನುಮತಿ […]
ಪ್ರಾಪರ್ಟಿ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಸಿಎಂ ಬಿಎಸ್ ವೈ ಅವರೊಂದಿಗೆ ಶಾಸಕ ಕಾಮತ್ ಚರ್ಚೆ
ಮಂಗಳೂರು: ಮಂಗಳೂರಿನಲ್ಲಿ ಕಡ್ಡಾಯವಾಗಿ ಜಾರಿಯಲ್ಲಿರುವ ಪ್ರಾಪರ್ಟಿ ಕಾರ್ಡ್ ಮಾಡಿಸಲು ನಾಗರಿಕರಿಗೆ ಅನೇಕ ತೊಂದರೆಗಳು ಆಗುತ್ತಿರುವುದರಿಂದ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಿಂದ ಸೂಕ್ತ ಸೂಚನೆಗಳನ್ನು ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವ ಮಾಡಿದ್ದಾರೆ. ಅಲ್ಲದೇ ಈ ಕುರಿತ ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಂಗಳೂರು ಸಬ್ ರಿಜಿಸ್ಟಾರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000 ಕ್ಕೂ ಅಧಿಕ ಆಸ್ತಿಗಳಿದ್ದು, ಈಗ ದೊರಕಿರುವ ಮಾಹಿತಿ ಪ್ರಕಾರ 50 […]