ಕಾರ್ಕಳ ಪುರಸಭೆ: ಪ.ಜಾತಿ/ ಪಂಗಡದ ಫಲಾನುಭವಿಗಳಿಗೆ ಸಹಾಯಧನ
ಉಡುಪಿ: ಕಾರ್ಕಳ ಪುರಸಭಾ ವ್ಯಾಪ್ತಿಯ 2019-20 ನೇ ಸಾಲಿನ ಶೇ. 24.10 ರ ಎಸ್.ಎಫ್.ಸಿ ಮತ್ತು ಪುರಸಭಾ ಅನುದಾನದಲ್ಲಿ ಅನುಸೂಚಿತ (ಪರಿಶಿಷ್ಟ) ಜಾತಿ/ ಪಂಗಡದವರಿಗೆ ವ್ಯಕ್ತಿ ಸಂಬಂಧಿತ (ವೈಯಕ್ತಿಕ) ಫಲಾನುಭವಿಗಳಿಗಾಗಿ ಅನುದಾನ ಕಾದಿರಿಸಿದ್ದು, ಸದ್ರಿ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗ, ಮನೆ ಮೇಲ್ಛಾವಣಿ ದುರಸ್ಥಿ, ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನಿಗಧಿಪಡಿಸಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಸೆಪ್ಟಂಬರ್ 1 ರ ಒಳಗೆ ಪುರಸಭೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ಕಚೇರಿ […]
ಮಹಿಳೆಯರು ಸ್ವಾವಲಂಬಿಗಳಾಗಲು ಇಲ್ಲಿದೆ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ
ಉಡುಪಿ : 2019-20 ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಕನಿಷ್ಟ 10 ಪರಿಶಿಷ್ಟ ಜಾತಿ ಸದಸ್ಯರಿರುವ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಾಮೂಹಿಕ ಉತ್ಪಾದನಾ / ಸೇವಾ ಘಟಕಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಜಂಟಿ ಖಾತೆಯನ್ನು ಆರಂಭಿಸಿ ಉತ್ತಮ ಆದಾಯ ಗಳಿಸುವ, ಉತ್ಪಾದನಾ / ಸೇವಾ ಘಟಕ ಆರಂಭಿಸಲು 2.50 ಲಕ್ಷ ರೂ. ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ. ಪ್ರತಿ ಸದಸ್ಯರಿಗೆ […]
ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ
ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಡುಪಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಸೋಮವಾರ ನೂತನ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು. ಆನ್ಲೈನ್ ತಂತ್ರಾಂಶದ ಸಮಸ್ಯೆಯಿಂದಾಗಿ ಹೊಸ ಕಟ್ಟಡಗಳಿಗೆ ಪರವಾನಗಿ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕಕ್ಕೆ ನಿರಾಪೇಕ್ಷಣ ಪತ್ರ ದೊರಕುತ್ತಿಲ್ಲ. 35 ವಾರ್ಡ್ಗಳಲ್ಲಿಯೂ ದಾರಿದೀಪಗಳ ಸಮಸ್ಯೆ ಇದೆ. ರಸ್ತೆಯ ಬದಿಯಲ್ಲಿ ಬೆಳೆದಿರುವ ಗಿಡಗಂಟಿಗಳ ಸ್ವಚ್ಛತೆಯಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆ ಆಗುತ್ತಿದೆ ಎಂದು ಸದಸ್ಯರು ದೂರಿದರು. ಒಳಚರಂಡಿ […]
ಮಂಗಳೂರು: ನಕಲಿ ಎನ್ ಸಿ ಐ ಬಿ ತನಿಖಾಧಿಕಾರಿಗಳ ಬಂಧನ
ಮಂಗಳೂರು: ಎಂಎಲ್ ಸಿ ಸಿ.ಆರ್. ಮನೋಹರ್ ರ ವಿಧಾನಸೌಧ ವಾಹನ ಪಾಸನ್ನು ದುರುಪಯೋಗಪಡಿಸಿದ ನಕಲಿ ಎನ್ ಸಿ ಐ ಬಿ ತನಿಖಾಧಿಕಾರಿಗಳನ್ನು ಮಂಗಳೂರಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಬೆಂಗಳೂರಿನ ನಾಗರಬಾವಿ ನಿವಾಸಿಗಳಾದ ನಾಗರಾಜ ಎನ್. ಎಸ್. ಹಾಗೂ ರಾಘವೇಂದ್ರ ಎಂದು ಗುರುತಿಸಲಾಗಿದೆ. ಕಳೆದ ಆ. 16 ರಂದು ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಸ್ಯಾಮ್ ಪೀಟರ್ ಜೊತೆ ಇವರಿಬ್ಬರು ವ್ಯವಹರಿಸುತ್ತಿದ್ದರು. ಜೊತೆಗೆ ಎನ್ ಸಿ ಐ ಬಿ ತನಿಖಾಧಿಕಾರಿಗಳೆಂದು […]
ಉಡುಪಿ ಜಲ್ಲೆ :ಆಯುಷ್ಮಾನ್ ಭಾರತ್- ಆರೋಗ್ಯ ಕಾರ್ಡ್ ಪಡೆಯೋದು ಹೇಗ್ ಗೊತ್ತಾ?
ಉಡುಪಿ: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಡ್ಗಳನ್ನು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ, ತಾಲೂಕು ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಾದ ಹೆಬ್ರಿ, ನಿಟ್ಟೆ, ಬ್ರಹ್ಮಾವರ, ಕೋಟ, ಶಿರ್ವ, ಬೈಂದೂರುಗಳಲ್ಲಿ ಮಾತ್ರವಲ್ಲದೇ ಕರ್ನಾಟಕ ಒನ್ ಸೆಂಟರ್ ಹಾಗೂ ಜಿಲ್ಲೆಯಲ್ಲಿರುವ ಸೇವಾ ಸೆಂಟರ್ಗಳಲ್ಲಿ ಪಡೆಯಬಹುದು. ಮಾತ್ರವಲ್ಲದೇ ಈ ಮೇಲಿನ ಕೇಂದ್ರಗಳು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದು ಇತರ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಿ ಸಂಬಂಧಪಟ್ಟ ಕಾರ್ಡ್ಗಳನ್ನು ಸಾರ್ವಜನಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. […]