ಪಾಕಿಸ್ತಾನಕ್ಕೆ ಸೆಟಲೈಟ್ ಕರೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲ: ದ.ಕ ಎಸ್ಪಿ‌

ಮಂಗಳೂರು: ಪಾಕಿಸ್ತಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಸೆಟಲೈಟ್  ಕರೆ ಹೋಗಿರುವ ಅಥವಾ ಪಾಕ್‌ ನಿಂದ ಕರೆ ಬಂದಿರೋ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಇದೇ ವೇಳೆ ರಾಷ್ಟ್ರೀಯ ತನಿಖಾ ದಳವು ಬೆಳ್ತಂಗಡಿಯಿಂದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಬಗ್ಗೆಯೂ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಆ ರೀತಿ ಯಾವುದೇ ಬಂಧನ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ತನಿಖಾ ದಳವು ಬೆಳ್ತಂಗಡಿಯಿಂದ ಓರ್ವ ವ್ಯಕ್ತಿಯನ್ನು ದಸ್ತಗಿರಿ ಮಾಡಿರುವ […]

ಕುಂದಾಪುರ – ಮಿನಿವಿಧಾನಸೌಧದ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಕೇಸು

ಕುಂದಾಪುರ: ಕೇವಲ 4 ವರ್ಷಗಳ ಹಿಂದೆ ಉದ್ಘಾಟನೆಯಾದ ಕುಂದಾಪುರ ಮಿನಿ ವಿಧಾನಸೌಧದ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ಪ್ರಕರಣ ದಾಖಲಾಗಿದೆ. ಶನಿವಾರ ಈ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿಗಳ ಆಡಳಿತ ಶಾಖೆಯ ಮೇಲ್ಛಾವಣಿಯ ಸಿಮೆಂಟ್‌ ಸ್ಲ್ಯಾಬ್‌ ಏಕಾಏಕಿ ಕುಸಿದುಬಿದ್ದು ನೌಕರರೊಬ್ಬರಿಗೆ ಗಾಯವಾಗಿ, ಕಚೇರಿಯ ಪಿಠೋಪಕರಣ ಹಾಗೂ ವಸ್ತುಗಳಿಗೆ ಹಾನಿಯುಂಟಾಗಿತ್ತು. ಶನಿವಾರ 11 ಗಂಟೆಗೆ ಕಚೇರಿಯಲ್ಲಿ ಗುತ್ತಿಗೆ ನೌಕರ ನಾರಾಯಣ ಬಿಲ್ಲವ ಅವರು ಕರ್ತವ್ಯದಲ್ಲಿದ್ದಾಗ, ಸ್ಲ್ಯಾಬ್ ನ ಸಿಮೆಂಟು ತುಂಡುಗಳಿ ಮೊದಲು ಫ್ಯಾನ್ ಮೇಲೆ ಬಿದ್ದು, ನಂತರ ಅವರ […]

ಚಾರ್ಮಾಡಿ: ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ, ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: ಪ್ರವಾಹ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ಪರಿಹಾರ ಕಾರ್ಯ, ಸ್ವಚ್ಚತಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಭೀಕರ ನೆರೆಯಿಂದಾಗಿ ನಲುಗಿದ ಚಾರ್ಮಾಡಿ ಸಮೀಪದ ಕೊಳಂಬೆ ನೆರೆಪೀಡಿತ ಪ್ರದೇಶದ ಜನರಿಗೆ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ದಿನನಿತ್ಯದ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಮೃತ್ಯುಂಜಯ ಹೊಳೆಯ ಪಕ್ಕದಲ್ಲಿರೋ ಸುಮಾರು ಇಪ್ಪತ್ತೆರಡು ಮನೆಗಳಿಗೆ ಹಾನಿಯಾಗಿದ್ದು, ಖಾಸಗಿ ಸಂಸ್ಥೆಯ ವತಿಯಿಂದ ಮನೆ ನಿರ್ಮಾಣ ಹಾಗೂ ದುರಸ್ಥಿ ಮಾಡಿ‌ಕೊಡಲಾಗುತ್ತಿದೆ. ಸಾಕಷ್ಟು ಮಂದಿ ಸೇವಕರು ಸ್ವಯಂಪ್ರೇರಣೆಯಿಂದ […]

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ :ವಾಮದಪದವು ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇದರ ಸಂಯುಕ್ತ ಆಶ್ರಯದಲ್ಲಿ ವಾಮದಪದವು ವಲಯ ಮಟ್ಟದ ಫ್ರೌಡ ಹಾಗೂ ಪ್ರಾಥಮಿಕ ವಿಭಾಗದ ತ್ರೋಬಾಲ್ ಪಂದ್ಯಾಟವನ್ನು ಪತ್ರಕರ್ತ ಯಾದವ್‌ಕುಲಾಲ್‌ ಆ.19 ರಂದು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರವೀಣ್ ಎ. ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು, ಬಂಟ್ವಾಳ ತಾಲೂಕಿನ ಪ್ರಾಥಮಿಕ ಶಿಕ್ಷಕ ಸಂಘದ ಕಾರ್ಯದರ್ಶಿ ಜಯರಾಮ್‌ ಕಾವಲು […]

ಡ್ರೀಮ್ ಕ್ಯಾಚರ್ಸ್ ಇವೆಂಟ್ಸ್ ಹಾಗೂ ನಿರ್ಮಾಣ್‌ ಬಿಲ್ಡರ್ ವತಿಯಿಂದ ಮಕ್ಕಳಿಗೆ ವಿಶೇಷ ಸ್ಪರ್ಧೆ ಉದ್ಘಾಟನೆ

ಮಂಗಳೂರು : ನಿರ್ಮಾಣ್‌ ಬಿಲ್ಡರ್ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಕಲರಿಂಗ್‌ ಮತ್ತು ಛದ್ಮವೇಷ ಸ್ಪರ್ಧೆ ನಗರದ ಭಾರತ್‌ ಮಾಲ್ ನಲ್ಲಿ ನಡೆಯಿತು. 400 ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ದ್ರಿತಿ ಎಸ್‌. ಪ್ರಥಮ, ಸಿಂಚನಾ ಕೋಟ್ಯಾನ್‌ ದ್ವಿತೀಯ ಹಾಗೂ ಶೀಯಾನ್‌ ತೃತೀಯ ಬಹುಮಾನ ಪಡೆದರು. ಕಲರಿಂಗ್‌ ಸ್ಪರ್ಧೆಯಲ್ಲಿ ವೈಭವಿ ಅಳಕೆ ಪ್ರಥಮ, ಕಾರ್ತಿಕ್‌ ಎಸ್‌. ದ್ವಿತೀಯ ಹಾಗೂ ಭಾರ್ಗವಿ ಎಸ್‌. ಆಚಾರ್ಯ ತೃತೀಯ ಬಹುಮಾನ ಪಡೆದರು. ಛದ್ಮವೇಷ […]