ಉಡುಪಿ ಉನ್ನತಿ ಕ್ಯಾರಿಯರ್ ಅಕಾಡೆಮಿ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ
ಉನ್ನತಿ ಕ್ಯಾರಿಯರ್ ಅಕಾಡೆಮಿ,ಉಡುಪಿ ವತಿಯಿಂದ ತನ್ನ ಕಛೇರಿಯಲ್ಲಿ ಇಂದು 73ನೇ ಸ್ವಾತಂತ್ರ ದಿನಾಚರಣೆ* ಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ನೃತ್ಯ, ಸ್ವಾತಂತ್ರ ಸಂಗ್ರಾಮಕ್ಕೆ ಸಂಬಂಧಿಸಿದ ಕ್ವಿಜ್ ಸ್ಪರ್ಧೆ, ಕೋಲಾಜ್ ತಯಾರಿಸುವ ಸ್ಪರ್ಧೆ ಹೀಗೆ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನ್ಯಾಧಿಕಾರಿಗಳಾದ ಶ್ರೀ ಗಿಲ್ಬರ್ಟ್ ಬ್ರಗಾಂಝ ಅವರು ಭಾಗವಹಿಸಿ ಮಾತನಾಡುತ್ತಾ, “ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೇವಲ ಅಕ್ಷರಸ್ಥರಾದರೆ ಸಾಲದು, ಬದಲಿಗೆ ಶಿಕ್ಷಿತರಾಗಬೇಕೆಂದು ತಿಳಿಸಿದರು. ಭಾರತೀಯ ಸೇನೆಯ ಸೇವೆ […]
ಆನ್ ಲೈನ್ ಲಿ ಮೊಬೈಲ್ ಬುಕ್ ಮಾಡಿದ್ರೆ, ಬಂದಿದ್ದು ಡಮ್ಮಿ ಮೊಬೈಲ್ !:ಆನ್ ಲೈನ್ ಶಾಪಿಂಗ್ ಡೇಂಜರಪ್ಪೋ !
ಮಣಿಪಾಲ: ಆ್ಯಪ್ ಆಧಾರಿತ ಶಾಪಿಂಗ್ ದೈತ್ಯ ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಬುಕ್ ಮಾಡಿದ ಮಣಿಪಾಲದ ವ್ಯಕ್ತಿಯೊಬ್ಬರಿಗೆ ಕೈಗೆ ಬಂದಾಗ ಬುಕ್ ಮಾಡಿದ ಮೊಬೈಲ್ ಬದಲಿಗೆ ಮೊಬೈಲ್ ಆಟಿಕೆ (ಡಮ್ಮಿ) ಸಿಕ್ಕಿದ ವಿದ್ಯಮಾನ ನಡೆದಿದೆ. ಮಣಿಪಾಲದ ಹುಡ್ಕೋ ನಿವಾಸಿಯಾಗಿರುವ ಅನಿಲ್ ಕುಮಾರ್ ಎನ್ನುವವರು ಅ. 8 ರಂದು ರೂ.9,990 ಮುಖ ಬೆಲೆಯ vivo y91 (nebula purple, 32 GB) ಮೊಬೈಲ್ ಅನ್ನು ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡಿದ್ದರು. ಆದರೆ ಅದರ ಬದಲಿಗೆ Samsung Galaxy j8 infinity ಆಟಿಕೆಯಂತಹ […]
ಗ್ರಾಮೀಣ ಸಾಧಕೀಯರನ್ನು ವಿಶಿಷ್ಠವಾಗಿ ಗುರುತಿಸಿ ಸನ್ಮಾನಿಸಿದ ಮಹಿಳಾ ಮೋರ್ಚಾ
ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಅಷಾಡದಲ್ಲೊಂದು ಕಮಲ ಕೂಟ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ಆಚರಿಸಲಾಯಿತು.ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಉದ್ಘಾಟಿಸಿ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ 6 ಮಂಡಲಗಳ ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಗಿ ನಾಟಿ ವೈಧ್ಯೆ ಮೂಲಕ ಗ್ರಾಮೀಣ ಜನರ ಸ್ವಾಸ್ಥ ಕಾಪಾಡಿದ ಮತ್ತು ಪಾಡ್ದನ ಮೂಲಕ ಜನಪದ ಸಂಸ್ಕೃತಿ ಯನ್ನು ನಾಡಿಗೆ ಪಸರಿಸುವ ಕಾರ್ಯ ಮಾಡಿದ 6 ಹಿರಿಯ ಸಾಧಕಿಯರಾದ ಗಿರಿಜಾ ಸುವರ್ಣ,ತನ್ಯರು ಕೋಟ್ಯಾನ್,ವನಾಜ ಶೆಟ್ಟಿ,ಲಕ್ಷ್ಮಿ […]
ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್
ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ. ಜಗದೀಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಉಡುಪಿಯಿಂದ ವರ್ಗಾವಣೆ ಮಾಡಲಾಗಿದ್ದು, ಯಾವ ಹುದ್ದೆಗೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಜಗದೀಶ್ ಅವರು ಕೋಲಾರ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಉಡುಪಿ ಸೋದೆ ಮಠದ ಭೂತರಾಜ ಸ್ವಾಮೀ ಸನ್ನಿದಿಯಲ್ಲಿ ಹಯಗ್ರೀವ ಜಯಂತಿ
ಉಡುಪಿ: ಉಡುಪಿ ಸೋದೆ ಮಠದ ಭೂತರಾಜ ಸ್ವಾಮೀ ಸನ್ನಿದಿಯಲ್ಲಿ ದೈವಜ್ಞ ಸಮಾಜದ ವತಿಯಿಂದ ಗುರುವಾರ ದಂಡು ಹಯಗ್ರೀವ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿಯ ಸನ್ನಿಧಿಯನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು ಮತ್ತು ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥರು ಹಾಗು ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ನೂರಾರು ದೈವಜ್ಞ ಸಮಾಜಬಾಂದವರು ಹಾಗು ಹಯಗ್ರೀವ ಭಕ್ತ ವೃಂದ ದವರು ಉಪಸ್ಥರಿದರು.