ಮಂಗಳೂರು: ತಣ್ಣೀರುಬಾವಿ ಬೀಚ್ ನಲ್ಲಿ ಸಮುದ್ರ ಪೂಜೆ
ಮಂಗಳೂರು: ಮೀನುಗಾರಿಕೆ ಆರಂಭವಾದ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ತಣ್ಣೀರುವಾವಿ ಬೀಚ್ನಲ್ಲಿ ಸಮುದ್ರ ಪೂಜೆ ನೆರವೇರಿಸಲಾಯಿತು. ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೆಚ್ಚಾಗಿ ಮೀನುಗಾರರಿಗೆ ಯಾವುದೇ ಅಪಾಯ ಸಂಭವಿಸದೇ ಇರಲಿ ಎಂದು ಪ್ರಾರ್ಥಿಸಲಾಯಿತು. ಮಂಗಳೂರಿನ ಕದ್ರಿ ಕದಳಿ ಮಠದ ಸ್ವಾಮಿಜೀಯವರು ಸಮುದ್ರಕ್ಕೆ ಹಾಲು ಎರೆಯುವ ಮೂಲಕ ಪೂಜೆಯ ಸಮುದ್ರ ಪೂಜೆ ನೆರವೇರಿಸಿದರು. ಸಮುದ್ರ ಪೂಜೆಗೂ ಮೊದಲು ಬೊಕ್ಕಪಟ್ಣದಿಂದ ಮೆರವಣಿಗೆ, ಮೀನುಗಾರರ ಭಜನೆ ನೆರವೇರಿತು. ಸಮುದ್ರ ಪೂಜೆಯಲ್ಲಿ ಮೀನುಗಾರರ ಮುಖಂಡರು ಹಾಗೂ ಮೀನುಗಾರರು ಭಾಗವಹಿಸಿದರು.
ಕಾರ್ಕಳ: ಸ್ವಾತಂತ್ರ್ಯೋತ್ಸವಕ್ಕೆ ರಂಗೇರಿದ ಬೃಹತ್ ರಾಷ್ಟ್ರಧ್ವಜ
ಕಾರ್ಕಳ :ಪುರಸಭಾ ಸದಸ್ಯ ಶುಭದರಾವ್ ನೇತೃತ್ವದಲ್ಲಿ 20×14 ಅಳತೆಯ ಬೃಹತ್ ತ್ರಿವರ್ಣಧ್ವಜವನ್ನು ಅನಂತಶಯನ ವೃತ್ತದಿಂದ ಗಾಂಧಿಮೈದಾನದವರೆಗೆ ಸ್ವಾತಂತ್ರ್ಯೋತ್ಸವ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.ಇಡೀ ಮೆರವಣಿಗೆಯಲ್ಲಿ ಈ ಬ್ರಹೃತ್ ರಾಷ್ಟ್ರಧ್ವಜ ಎಲ್ಲರನ್ನೂ ಆಕರ್ಷಿಸಿತು.
ನಿಟ್ಟೆ: ಸೆಲ್ಫಿ ತೆಗೆಯಲು ಹೋಗಿ ನಿಟ್ಟೆ ಅರ್ಬಿಫಾಲ್ಸ್ನಲ್ಲಿ ಕೊಚ್ಚಿ ಹೋದ ಯುವಕ
ಕಾರ್ಕಳ: ಇಲ್ಲಿನ ನಿಟ್ಟೆ ಅರ್ಬಿಫಾಲ್ಸ್ನಲ್ಲಿ ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಗುರುವಾರ ನಡೆದಿದೆ. ಬೋಳ ಕೃಷ್ಣಮೂಲ್ಯರ ಮಗ ಎಲೆಕ್ಟ್ರೀಷಿಯನ್ ಸುದೇಶ್ ಬೊಳ (19) ನೀರು ಪಾಲಾದ ಯುವಕ. ಏನಾಗಿತ್ತು? ನಿಟ್ಟೆ ಅರ್ಬಿ ಫಾಲ್ಸ್ ಗೆ ಗುರುವಾರ ನಾಲ್ವರು ಗೆಳೆಯರು ತೆರಳಿ ಮೈಮರೆತು ಜಲಪಾತದ ಬದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ ಈ ಘಟನೆ ಸಂಭವಿಸಿದೆ. ನಾಲ್ವರು ಗೆಳೆಯರ ಪೈಕಿ ಸುದೇಶ್ ಹಾಗೂ ಭರತ್ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದಾರೆ. ಆದರೆ ಭರತ್ ಈಜು ಗೊತ್ತಿದ್ದರಿಂದ ದಡ […]
ಬೈಲೂರು: ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ
ಕಾರ್ಕಳ: ವಿಶ್ವ ಹಿಂದೂ ಪರಿಷತ್ ಕಾರ್ಕಳ ಪ್ರಖಂಡ ಹಾಗೂ ಬಜರಂಗ ದಳ ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಆಗಸ್ಟ್ 14ರಂದು ಸಂಜೆ ಬೈಲೂರಿನಲ್ಲಿ ನಡೆಯಿತು. ನೀರೆ ಪಳ್ಳಿ ಕ್ರಾಸ್ ನಿಂದ ಬೈಲೂರು ಶ್ರೀ ರಾಮ ಮಂದಿರದ ವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಉದ್ಯಮಿ ಚಂದ್ರಶೇಖರ ಮಾಡ ಮೆರವಣಿಗೆಗೆ ಚಾಲನೆ ನೀಡಿದರು. ಆರ್ […]
ಗ್ರಾಹಕರಿಗೆ ಸೇವೆ ನೀಡಲು ನಿರ್ಲಕ್ಷಿಸಿದ 918 ಆಟೋ ಚಾಲಕರ ಪರವಾನಗಿ ರದ್ದು
ಮುಂಬೈ: ಗ್ರಾಹಕರ ಸೇವೆ ನೀಡಲು ನಿರ್ಲಕ್ಷಸಿದ, ಗ್ರಾಹಕರು ಕರೆದ ಕಡೆಗೆ ಸೇವೆ ನೀಡಲು ನಿರಾಕರಿಸಿದ ಆಟೋ-ರಿಕ್ಷಾ ಚಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಮಹಾರಾಷ್ಟ್ರದ ಸಾರಿಗೆ ಇಲಾಖೆ ಮುಂದಾಗಿದ್ದು 918 ಪರವಾನಗಿಯನ್ನು ರದ್ದು ಮಾಡಿದೆ. ಗ್ರಾಹಕರಿಗೆ ಸೇವೆ ನಿರಾಕರಿಸಿದ 918 ಆಟೋ ಚಾಲಕರ ಚಾಲನಾ ಪರವಾನಗಿಯನ್ನೇ ರದ್ದುಗೊಳಿಸಿದೆ. ಇದೊಂದು ಮಹಾರಾಷ್ಟ್ರ ಸಾರಿಗೆ ಇಲಾಖೆ ಕೈಗೊಂಡ ದಿಟ್ಟ ಕ್ರಮಗಳಲ್ಲಿ ಒಂದಾಗಿದೆ. . ಮುಂಬೈ ಮತ್ತು ಥಾಣೆಗಳಲ್ಲಿ ಇದುವರೆಗೂ ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆಯಲಾದ ಡ್ರೈವಿಂಗ್ ಲೈಸನ್ಸ್ಗಳನ್ನು ರದ್ದುಗೊಳಿಸಲಾಗುತ್ತಿತ್ತು. ಆದರೆ, ಇದೇ […]