ಆ.15 ರಂದು ರಾಖಿ ಹಬ್ಬ: ಪ್ರಧಾನಿ ಮೋದಿಗೆ ‘ರಾಖಿ’ ಕಳುಹಿಸಿದ ಮುಸ್ಲಿಂ ಮಹಿಳೆಯರು

ವಾರಾಣಸಿ: ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದ ಮಹಿಳೆಯರ ಗೌರವಕ್ಕೆ ಪಾತ್ರರಾಗಿದ್ದಾರೆ. ದೇಶದಲ್ಲಿ ತ್ರಿವಳಿ ತಲಾಖ್’ನ್ನು ನಿಷೇಧಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಮೇಲಾಗುತ್ತಿದ್ದ ಐತಿಹಾಸಿಕ ಅನ್ಯಾಯವನ್ನು ಪ್ರಧಾನಿ ಮೋದಿ ಸರ್ಕಾರ ಸರಿಪಡಿಸಿದೆ. ಇದೇ ಆ.15 ರಂದು ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಯಲ್ಲಿ ನರೇಂದ್ರ ಮೋದಿ ಭಾವಚಿತ್ರ ಇರುವ ರಾಖಿ ತಯಾರಿಸಿರುವ ಮುಸ್ಲಿಂ ಸಹೋದರಿಯರು, ಅದನ್ನು ಮೋದಿ ಕಚೇರಿಗೆ ಕಳುಹಿಸುವುದರ ಮೂಲಕ ತಮ್ಮ ಹಿರಿಯಣ್ಣನಿಗೆ ಪ್ರೀತಿಯ ಸಂದೇಶ […]

ಪ್ರಾಕೃತಿಕ ವಿಕೋಪ: ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಸಿ.ಎಂ. ಯಡಿಯೂರಪ್ಪ ನೆರೆ ಹಾನಿಗೆ ಒಳಗಾದ ಎಲ್ಲರಿಗೂ ಮನೆ ಕಟ್ಟಲು ವ್ಯವಸ್ಥೆ ಮಾಡಲಾಗುವುದು. ತಕ್ಷಣ ಸಂತ್ರಸ್ತರಿಗೆ 10 ಸಾವಿರ ರೂ. ನೀಡಬೇಕು. ಮನೆ ಕಟ್ಟಲು 5 ಲಕ್ಷ ರೂ.‌ ನೀಡುತ್ತೇವೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ ಎಂದರು. ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗದವರಿಗೆ ಐದು ಸಾವಿರ ಬಾಡಿಗೆ […]

ನೆರೆ ಹಾನಿ: ಬಂಟ್ವಾಳಕ್ಕೆ 30 ಕೋ.ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ

ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಬಂಟ್ವಾಳಕ್ಕೆ ಭೇಟಿ ನೀಡಿ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿಯ ಬಗ್ಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಂದ ಮಾಹಿತಿಯನ್ನು ಪಡೆದುಕೊಂಡರು. ತಾಲೂಕಿನ ವಿವಿಧ ಭಾಗದಲ್ಲಿ ಹಾನಿಯಾಗಿರುವ ಬಗ್ಗೆ ಮುಖ್ಯಮಂತ್ರಿ ದಾಖಲೆಗಳನ್ನು ಸಲ್ಲಿಸಿ ಅಂದಾಜು 30 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂಧಿಸಿದ ಮುಖ್ಯಮಂತ್ರಿಗಳು ಇತರ ಜಿಲ್ಲೆಗಳಿಗೆ ನೀಡಲಾಗುವ ಪರಿಹಾರದಂತೆ ಈ ಜಿಲ್ಲೆಗೂ ಕ್ಷೇತ್ರಕ್ಕೂ ನೀಡುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಯವರು […]

ಕಾರ್ಕಳ: ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

ಕಾರ್ಕಳ: ಕಾರ್ಕಳ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಸೋಮವಾರ ನಡೆಯಿತು.  ಸಮಾರಂಭದಲ್ಲಿ ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್, ಗ್ರಂಥಪಾಲಕಿ ವನಿತಾ, ಯೋಗಿತಾ, ಪುರಸಭಾ ಸದಸ್ಯೆ ಪೂರ್ಣಿಮಾ, ಪ್ರವೀಣ್ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಮಠ: “ನೃತ್ಯಾಂಜಲಿ” ಕಾರ್ಯಕ್ರಮ

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ, ಉಡುಪಿಯ ಹೆಜ್ಜೆ-ಗೆಜ್ಜೆ ಪ್ರತಿಷ್ಠಾನ(ರಿ) ಇದರ ರಜತ ಮಹೋತ್ಸವದ ಅಂಗವಾಗಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವೀತಾ ಅಶೋಕ್ ರವರ ಶಿಷ್ಯರಿಂದ  ಭರತನಾಟ್ಯ  ಕಾರ್ಯಕ್ರಮ ನಡೆಯಿತು.