ಕುಂದಾಪುರ ತಾಲೂಕಿನಾದ್ಯಂತ ನಾಗರಪಂಚಮಿ ಸಂಭ್ರಮ; ಕಲಿಯುಗದ ಪ್ರತ್ಯಕ್ಷ ದೇವ ನಾಗನಿಗೆ ನಾಗರಪಂಚಮಿ ಸಂಭ್ರಮ
ಕುಂದಾಪುರ: ಕರಾವಳಿಯಲ್ಲಿ ನಾಗನಿಗೆ ಹರಕೆ ಸೇವೆಗಳು ಸಲ್ಲಿಸುವ ಸಂಪ್ರದಾಯ ಹೆಚ್ಚು. ಷಷ್ಠಿ ಮಹೋತ್ಸವ, ಕಿರುಷಷ್ಠಿ ನಾಗನ ಮೂಲ ಸ್ಥಾನ ಹಾಗೂ ದೇವಸ್ಥಾನಗಳಲ್ಲಿ ಆಚರಣೆಯಾದರೇ ನಾಗರ ಪಂಚಮಿ ಹಬ್ಬವೆನ್ನುವುದು ಪ್ರಸಿದ್ಧ ದೇವಸ್ಥಾನಗಳನ್ನೊಳಗೊಂಡಂತೆ ವಿವಿಧ ನಾಗ ಬನಗಳಲ್ಲಿಯೂ ಆಚರಿಸಲ್ಪಡುತ್ತದೆ. ಅಂತೆಯೇ ಕುಂದಾಪುರದಲ್ಲಿ ನಡೆದ ನಾಗರ ಪಂಚಮಿಯ ವಿಶೇಷ ಇಲ್ಲಿದೆ ನೋಡಿ. ಕರಾವಳಿಯ ಬಹುದೊಡ್ಡ ಹಬ್ಬವಾದ ನಾಗರ ಪಂಚಮಿಯನ್ನು ಕುಂದಾಪುರ ತಾಲೂಕಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ನಾಗಬನ ಹಾಗೂ ನಾಗ ದೇವಸ್ಥಾನಗಳಿಗೆ ಆಗಮಿನಿಸಿದ ಭಕ್ತರು ನಾಗನಿಗೆ ಹಾಲು, ಎಳನೀರು ಕೇದಗೆ ಹೂವನ್ನು […]
ಮಂಗಳೂರು: ದ.ಕ ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಂಭ್ರಮ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಗರ ಪಂಚಮಿಯ ಸಲುವಾಗಿ ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷ ಪೂಜೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ನಾಗಾರಾಧನೆಯ ಪುಣ್ಯ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪ್ರದಾಯದಂತೆ ಆಚರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತರು […]
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ ಆರೋಪ; ನಿರ್ದೇಶಕರ ಭೇಟಿ, ಪ್ರತಿಭಟನೆ ಎಚ್ಚರಿಕೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚಿಗೆ ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಭಾಗದ ಸಿಬ್ಬಂದಿಗಳು ತಪಾಸಣೆ ಹೆಸರಿನಲ್ಲಿ ಪ್ರಯಾಣಿಕರಿಗೆ ಕಿರುಕುಳ ಮತ್ತು ದಬ್ಬಾಳಿಕೆ ನಡೆಸುತ್ತಿರುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಮಂಗಳೂರು ವಿಮಾನ ನಿಲ್ದಾಣ ಬಳಕೆದಾರರ ಹಿತರಕ್ಷಣಾ ಸಮಿತಿಯ ನೇತೃತ್ವದ ನಿಯೋಗವು ವಿಮಾನ ನಿಲ್ದಾಣ ನಿರ್ದೇಶಕ ವಿ. ವೆಂಕಟೇಶ್ವರ ರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿತು. ಕಸ್ಟಮ್ಸ್ ಅಧಿಕಾರಿಗಳ ಅಮಾನವೀಯ ವರ್ತನೆಯಿಂದಾಗಿ ವಿಮಾನ ನಿಲ್ದಾಣದ ಘನತೆ ಮತ್ತು ಗೌರವಕ್ಕೆ ಧಕ್ಕೆ […]
370ನೇ ವಿಧಿ ರದ್ದುಗೊಳಿಸಿ ಅಖಂಡ ಭಾರತದ ಕನಸು ನನಸಾಗಿಸಿದ ಕೇಂದ್ರ ಸರಕಾರ: ಯಶ್ ಪಾಲ್ ಸುವರ್ಣ
ಉಡುಪಿ: ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿಯನ್ನು ರದ್ದು ಗೊಳಿಸುವ ಮೂಲಕ ದೇಶದ ನಾಗರಿಕರ ಅಖಂಡ ಭಾರತದ ಕನಸು ಸಾಕಾರಗೊಳಿಸಲು ಐತಿಹಾಸಿಕ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರಕಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ. ಬಹುದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದ ಈ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸುವ ಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ದೇಶದ್ರೋಹಿಗಳ ಮೇಲೆ ಗೃಹ ಸಚಿವ ಅಮಿತ್ ಶಾ […]
ಬಹು ನಿರೀಕ್ಷಿತ ‘ಬೆಲ್ಚಪ್ಪ’ ತುಳು ಚಿತ್ರ ಅಗಸ್ಟ್ 9 ರಂದು ಬೆಳ್ಳಿ ತೆರೆಗೆ
ಉಡುಪಿ: ಜಯದುರ್ಗಾ ಪ್ರೊಡೆಕ್ಷನ್ ನಲ್ಲಿ ಮೂಡಿ ಬಂದ ಬೆಲ್ಚಪ್ಪ ತುಳು ಚಿತ್ರ ಆಗಸ್ಟ್ 9 ರಂದು ಉಡುಪಿ ಮತ್ತು ಮಂಗಳೂರಿನ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ಉಡುಪಿಯ ಕಲ್ಪನಾ ಚಿತ್ರಮಂದಿರ, ಕಾರ್ಕಳದ ಪ್ಲಾನೆಟ್ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳಾದ ಮಣಿಪಾಲದ ಅಯನಾಕ್ಸ್ ಹಾಗೂ ಭಾರತ್ ಸಿನಿಮಾಸ್ ನಲ್ಲಿ ಹಾಗೂ ಮಂಗಳೂರಿನ ಜ್ಯೋತಿ, ಮೂಡಬಿದಿರೆಯ ಅಮರಶ್ರೀ ಹಾಗೂ ಸಿನೆ ಪೋಲೀಸ್ ಮತ್ತು ಭಾರತ್ ಸಿನಿಮಾಸ್ ನಲ್ಲಿ ಬೆಲ್ಚಪ್ಪ ತೆರೆಕಾಣಲಿದ್ದಾನೆ ಉದ್ಯಮಿ ರತ್ನಾಕರ ಇಂದ್ರಾಳಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಲ್ಚಪ್ಪ ಚಿತ್ರಕ್ಕೆ ಕಥೆ- […]